ನನ್ನ ಮಗಳಿಗೆ ಕೋವಿಡ್19 ಪಾಸಿಟಿವ್ ಇಲ್ಲ: ದಿನೇಶ್ ಗುಂಡೂರಾವ್ ಸ್ಪಷ್ಟನೆ

Suvarna News   | Asianet News
Published : Mar 27, 2020, 07:52 AM ISTUpdated : Mar 27, 2020, 09:59 AM IST
ನನ್ನ ಮಗಳಿಗೆ ಕೋವಿಡ್19 ಪಾಸಿಟಿವ್ ಇಲ್ಲ: ದಿನೇಶ್ ಗುಂಡೂರಾವ್ ಸ್ಪಷ್ಟನೆ

ಸಾರಾಂಶ

ದಿನೇಶ್ ಗುಂಡೂರಾವ್‌ ಪುತ್ರಿ ಅಮೀರಾ ರಾವ್‌ಗೆ ಕೊರೋನಾ ವೈರಸ್‌ ಪಾಸಿಟಿವ್ ವದಂತಿ| ವದಂತಿಗಳಿಗೆ ತೆರೆ ಎಳೆದ ಗುಂಡೂರಾವ್‌| ಇದೊಂದು ಸುಳ್ಳು ಸುದ್ದಿ| ಮಾಧ್ಯಮಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು| 

ಬೆಂಗಳೂರು(ಮಾ.27): ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್‌ ಅವರ ಪುತ್ರಿ ಅಮೀರಾ ರಾವ್‌ ಅವರಿಗೆ ಕೊರೋನಾ ವೈರಸ್‌ ಪಾಸಿಟಿವ್ ಇದೆ ಅಂತ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ದಿನೇಶ್ ಗುಂಡೂರಾವ್‌ ಅವರು ಟ್ವೀಟ್‌ ಮಾಡಿದ್ದು ನನ್ನ ಮಗಳಿಗೆ ಕೊರೋನಾ ಪಾಸಿಟಿವ್‌ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

ನನ್ನ ಮಗಳು ಅಮೀರಾ ರಾವ್‌ ಮಾರ್ಚ್‌ 16ರಂದು ಬೆಂಗಳೂರಿಗೆ ಬಂದಿದ್ದು, ಅವರಿಗೆ ಕೊರೋನಾ ಪಾಸಿಟಿವ್‌ ಇದೆ ಅಂತ ಸಾಮಾಜಿಕ ಜಾಲತಾಣ ಹಾಗೂ ವಾಹಿನಿಗಳಲ್ಲಿ ಸುದ್ದಿ ಪ್ರಸಾರವಾಗಿದೆ. ಆದರೆ, ನನ್ನ ಮಗಳು ಆರೋಗ್ಯವಾಗಿಯೇ ಇದ್ದಾರೆ. ಸುಮ್ಮನೇ ಸುಳ್ಳು ಹುದ್ದಿ ಹರಡಬೇಡಿ ಎಂದು ಹೇಳಿದ್ದಾರೆ. 

 

ಇದೊಂದು ಸುಳ್ಳು ಸುದ್ದಿಯಾಗಿದ್ದು, ನಿಜವಾಗಿದ್ದರೆ ಒಪ್ಪಿಕೊಳ್ಳುವುದರಲ್ಲಿ ಯಾವುದೇ ಹಿಂಜರಿಕೆ ಇಲ್ಲ, ಇದರ ಜೊತೆಗೆ ಮಾಧ್ಯಮಗಳೂ ಕೂಡ ಜವಾಬ್ದಾರಿಯಿಂದ ಕೆಲಸ ಮಾಡಬೇಕು ಜನರಿಗೆ ತಪ್ಪು ಮಾಹಿತಿ ನೀಡಬಾರದು ಎಂದು ಹೇಳಿದ್ದಾರೆ. 

ಭಾರತ ಲಾಕ್‌ಡೌನ್: ಆನ್‌ಲೈನ್ ಶಾಪಿಂಗ್ ಹಾಗಾ ಫುಡ್‌ ಡೆಲಿವರಿ ಮೇಲಿನ ನಿರ್ಬಂಧ ತೆರವು!

PREV
click me!

Recommended Stories

ವೈರಸ್‌ ಕಾಟ: ಕೊರೋನಾ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ, ಸಚಿವ ಪಾಟೀಲ್‌
ಮತ್ತೆ ಕೊರೋನಾರ್ಭಟ: ಪೂಲಿಂಗ್ ಟೆಸ್ಟ್ ಮೊರೆಹೋದ ಆರೋಗ್ಯ ಇಲಾಖೆ, ಏನಿದು ಹೊಸ ಪರೀಕ್ಷೆ?