ಲಾಕ್‌ಡೌನ್: ಶಿಕ್ಷಕರ ರಜೆ ವಿಸ್ತರಣೆ ಮಾಡಿ ರಾಜ್ಯ ಸರ್ಕಾರ ಆದೇಶ

By Suvarna News  |  First Published Mar 30, 2020, 3:21 PM IST

ಕೊರೋನಾ ವೈರಸ್ ಸೋಂಕು ತಡೆಗೆ ದೇಶಾದ್ಯಂತ ಏಪ್ರಿಲ್ 14ರ ವರೆಗೆ ಲಾಕ್‌ಡೌನ್ ಘೋಷಿಸಿಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಶಿಕ್ಷಕ ರಜೆಯನ್ನು ವಿಸ್ತರಿಸಲಾಗಿದೆ. ಈ ಬಗ್ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಆದೇಶ ಹೊರಡಿಸಿದ್ದಾರೆ. ಹಾಗಾದ್ರೆ ಸುರೇಶ್ ಕುಮಾರ್ ಅವರು ಏನೆಲ್ಲಾ ಹೇಳಿದ್ದಾರೆ ನೋಡೋಣ ಬನ್ನಿ


ಬೆಂಗಳೂರು, (ಮಾ.30):  ಕೊರೋನಾ ವೈರಸ್ ಮಾಹಾಮಾರಿ ವಿರುದ್ಧ ಹೋರಾಟಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಲಾಕ್‌ಡೌನ್‌ಗೆ ಕರೆ ಕೊಟ್ಟಿದ್ದಾರೆ. ಇದರಿಂದ ಕರ್ನಾಟಕದ ಶಿಕ್ಷಕರಿಗೆ ನೀಡಲಾಗಿದ್ದ ಮಾರ್ಚ್‌ 31 ರ ವರೆಗಿನ ರಜೆಯನ್ನು ವಿಸ್ತರಿಸಲಾಗಿದೆ.

"

Latest Videos

undefined

 ಮಾರ್ಚ್‌ 1ರ ವರೆಗೆ  ನೀಡಿಲಾಗಿದ್ದ ರಜೆಯನ್ನು, ಏಪ್ರಿಲ್‌ 11 ರ ವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಫೇಸ್‌ಬುಲ್ ಲೈವ್‌ ಮೂಲಕ ಸ್ಪಷ್ಟಪಡಿಸಿದ್ದಾರೆ.

ಕೊರೋನಾ ಭೀತಿ: SSLC, PUC ಸೇರಿ ಕರ್ನಾಟಕದ ಎಲ್ಲಾ ಶೈಕ್ಷಣಿಕ ಚಟುವಟಿಕೆಗಳಿಗೆ ಬ್ರೇಕ್

ಶಿಕ್ಷಕರಿಗೆ ಮನೆಯಿಂದ ಕೆಲಸ ಮಾಡಲು ಸೂಚನೆ ನೀಡಿದ್ದೆವು. ಆದರೆ ಅವರು ಕೆಲಸ ಮಾಡುತ್ತಿರುವ ಕೇಂದ್ರ ಸ್ಥಾನವನ್ನು ಬಿಡಬಾರದು. ಇಲಾಖೆಯಿಂದ ತುರ್ತು ಅಗತ್ಯದ ಕರೆ ಬಂದರೆ ಅದಕ್ಕೆ ಸ್ಪಂದಿಸಬೇಕು. ಹಾಗೂ ಶಿಕ್ಷಕರಿಗೆ ಇಲಾಖೆ ನೀಡಿದ ಜವಾಬ್ದಾರಿಯನ್ನು ಸೂಕ್ತವಾಗಿ ನಿಭಾಯಿಸಬೇಕು ಎಂದು ಸುರೇಶ್ ಕುಮಾರ್ ಸೂಚನೆ ನೀಡಿದರು.

ಖಾಸಗಿ ಶಾಲೆಗಳಿಗೆ ವಾರ್ನಿಂಗ್
ಮಕ್ಕಳ ಶಾಲಾ ಶುಲ್ಕ ಪಾವತಿ ಮಾಡುವಂತೆ ಪೋಷಕರ ಮೇಲೆ ಒತ್ತಡ ಹೇರುವ ಖಾಸಗಿ ಶಾಲೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು  ಸುರೇಶ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ. 

2020- 21 ನೇ ಶೈಕ್ಷಣಿಕ ಸಾಲಿನ ಶುಲ್ಕವನ್ನು ಏಪ್ರಿಲ್‌ 11 ರ ಒಳಗಾಗಿ ಪೋಷಕರು ಪಾವತಿ ಮಾಡಬೇಕು ಎಂದು ಕೆಲವು ಖಾಸಗಿ ಶಾಲೆಗಳು ಒತ್ತಡ ಹೇರುತ್ತಿವೆ. ಅಲ್ಲದೆ ನಿಗದಿತ ಸಮಯದೊಳಗಡೆ ಶುಲ್ಕ ಪಾವತಿ ಮಾಡದೇ ಇದ್ದರೆ ಪ್ರತಿದಿನ ನೂರು ರೂಪಾಯಿ ದಂಢ ವಿಧಿಸುವ ಎಚ್ಚರಿಕೆಯನ್ನು ನೀಡಿರುವುದು ಗಮನಕ್ಕೆ ಬಂದಿದೆ.

ದೇಶ ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾಗ ಶಾಲಾ ಆಡಳಿತ ಮಂಡಳಿಗಳು ಪೋಷಕರ ಮೇಲೆ ಶುಲ್ಕ ಪಾವತಿ ಮಾಡುವಂತೆ ಒತ್ತಡ ಹೇರಿದರೆ ಅಂತವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ವಾರ್ನಿಂಗ್ ಕೊಟ್ಟಿದ್ದಾರೆ.

ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲಿ ಖಾಸಗಿ ಶಾಲೆಗಳು ಉದ್ಧಟತನ ತೋರಿಸಿದರೆ ಅವರ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುತ್ತದೆ. ಅಗತ್ಯ ಬಿದ್ದರೆ ಮಾನ್ಯತೆ ರದ್ದು ಹಾಗೂ ಭಾರೀ ಪ್ರಮಾಣದ ದಂಢ ವಿಧಿಸುವ ಎಚ್ಚರಿಕೆಯನ್ನು ನೀಡಿದರು.

ಇನ್ನು ಮುಂದಿನ ಆದೇಶ ಹೊರಡಿಸುವವರಿಗೆ ಶಾಲೆ ಹೊಸ ದಾಖಲಾತಿಗಳನ್ನು ಮಾಡಿಕೊಳ್ಳುವಂತಲ್ಲ ಎಂದು ಸೂಚಿಸಿದರು.

click me!