ಕರ್ನಾಟಕ ಸಂಸದರೊಬ್ಬರ ಪುತ್ರಿಗೆ ಕೊರೋನಾ ವೈರಸ್ ದೃಢ..!

By Suvarna News  |  First Published Mar 24, 2020, 6:13 PM IST

ಒಂದ್ಕಡೆ ಜನರು ಮನೆಯಲ್ಲಿ ಇರುವುದು ಬಿಟ್ಟು ರಸ್ತೆಗೆ ಬರುತ್ತಿದ್ರೆ, ಮತ್ತೊದೆಡೆ ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇದು ತೀವ್ರ ಆಘಾತ ಸೃಷ್ಠಿಸುತ್ತಿದೆ. ಅದರಲ್ಲೂ ಕರ್ನಾಟಕ ಬಿಜೆಪಿ ಪುತ್ರಿಗೆ ಕೊರೋನಾ ದೃಢವಾಗಿದೆ.


ಬೆಂಗಳೂರು, (ಮಾ.24): ಮಾರಕ ಕೊರೋನಾ ವೈರಸ್ ಸೋಂಕು ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಕರ್ನಾಟಕದ ಬಿಜೆಪಿ ಸಂಸದನ ಪುತ್ರಿಗೆ ಕೊರೋನಾ ವೈರಸ್ ಸೋಂಕು ತಗುಲಿರುವುದು ದೃಢವಾಗಿದೆ.

ಬಿಜೆಪಿ ಎಂಪಿ ಮಗಳು 37 ವರ್ಷದ ಮಹಿಳೆಗೆ ಕೊರೋನಾ ಇರುವುದು ಖಚಿತವಾಗಿದೆ ಎಂದು ಮಂಗಳವಾರ ಸ್ಪಷ್ಟವಾಗಿದೆ. ಈ ಮಹಿಳೆ ಅಮೆರಿಕಾದಿಂದ ಆಗಮಿಸಿದ್ದರಿಂದ ಸೋಂಕಿನ ಲಕ್ಷಣಗಳು ಕಂಡುಬಂದಿದ್ದವು.

Tap to resize

Latest Videos

ಕೊರೋನಾ ವೈರಸ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

 ಇದರಿಂದ ಮಹಿಳೆಯನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಿ ಮಾರ್ಚ್ 22ರಂದು ಈಕೆಯ ರಕ್ತದ ಮಾದರಿ ಮತ್ತು ಗಂಟಲು ದ್ರವ ಪಡೆದು ಪರೀಕ್ಷೆಗೆ ಕಳುಹಿಸಲಾಗಿತ್ತು. ಆ ಪರೀಕ್ಷೆಯ ವರದಿ (ಇಂದು (ಮಂಗಳವಾರ) ಬಂದಿದ್ದು, ಮಹಿಳೆಗೆ ಕೊರೋನಾ ವೈರಸ್ ತಗುಲಿರುವುದು ದೃಢವಾಗಿದೆ. 

ಈ ಬಗ್ಗೆ ಚಿತ್ರದುರ್ಗ ಜಿಲ್ಲಾಧಿಕಾರಿ ಸೋಮವಾರ ಸ್ಪಷ್ಟಪಡಿಸಿದ್ದಾರೆ. ಸದ್ಯ ಈ ಮಹಿಳೆಯನ್ನು ಚಿತ್ರದುರ್ಗದಿಂದ ದಾವಣಗೆರೆ ಐಸೋಲೇಷನ್ ವಾರ್ಡ್‌ಗೆ ಶಿಫ್ಟ್ ಮಾಡಲಾಗಿದೆ ಎಂದು ತಿಳಿದುಬಂದಿದೆ. 

ಇನ್ನು ಕೊರೊನಾ ವೈರಸ್‌ ರಾಜ್ಯಾದ್ಯಂತ ವ್ಯಾಪಕವಾಗಿ ಹಬ್ಬುತ್ತಿದ್ದು, ಮಂಗಳೂರಿನಲ್ಲಿ ಇಂದು ಒಂದೇ ದಿನ 4 ಹೊಸ ಕೊರೋನಾ ಕೇಸ್ ಪತ್ತೆಯಾಗಿದ್ದು, ತೀವ್ರ ಆತಂಕ ಮೂಡಿಸಿದೆ.

click me!