ಕೊರೋನಾ ಎಫೆಕ್ಟ್: ನಮ್ಮೂರಿಗೆ ಕರೆಸಿಕೊಳ್ಳಿ ಎಂದು ಅಂಗಲಾಚಿ ಬೇಡಿಕೊಳ್ಳುತ್ತಿರುವ ಕನ್ನಡಿಗರು!

Suvarna News   | Asianet News
Published : Mar 28, 2020, 01:24 PM ISTUpdated : Mar 28, 2020, 02:10 PM IST
ಕೊರೋನಾ ಎಫೆಕ್ಟ್: ನಮ್ಮೂರಿಗೆ ಕರೆಸಿಕೊಳ್ಳಿ ಎಂದು ಅಂಗಲಾಚಿ ಬೇಡಿಕೊಳ್ಳುತ್ತಿರುವ ಕನ್ನಡಿಗರು!

ಸಾರಾಂಶ

ಕೇರಳ ಪೊಲೀಸರಿಂದ ಥಳಿತಕ್ಕೊಳಗಾದ ಕನ್ನಡಿಗರು| ಕೇರಳದಿಂದ ಕರ್ನಾಟಕಕ್ಕೆ ಬರುವ ಪ್ರಯತ್ನದಲ್ಲಿ ವಿಫಲರಾಗಿರುವ ಹಾವೇರಿ ಜಿಲ್ಲೆಯ ಯುವಕರು| ಆತಂಕದಲ್ಲಿ ಯುವಕರ ಪೋಷಕರು|  

ಹಾವೇರಿ(ಮಾ.28): ಕೊರೋನಾ ವೈರಸ್‌ ಹಿನ್ನಲೆಯಲ್ಲಿ ದೇಶಾದ್ಯಂತ ಲಾಕ್‌ಡೌನ್‌ ಇರುವುದರಿಂದ ನೆರೆಯ ಕೇರಳಕ್ಕೆ ಕೂಲಿ ಮಾಡಿ ಬದುಕು ಕಟ್ಟಿಕೊಳ್ಳಲು ತೆರಳಿದ್ದ ಕನ್ನಡಿಗರು ತುತ್ತು ಅನ್ನ ಸಿಗದೆ ಪರದಾಡುತ್ತಿದ್ದಾರೆ. 

"

ಹೌದು, ಜಿಲ್ಲೆಯ ಸವಣೂರು ಪಟ್ಟಣದ ಎಸ್.ಎಂ ಕೃಷ್ಣ ನಗರದ ನಿವಾಸಿಗಳಾದ ರಮೇಶ ಉಪ್ಪಿನ ಹಾಗೂ ಇತರರು ಕೇರಳ ಗಡಿ ಭಾಗದ ಕಾಸರಗೋಡಿನಲ್ಲಿ ಕೂಲಿ ಕೆಲಸಕ್ಕೆ ತೆರಳಿದ್ದರು. ಇದೀಗ ಭಾರತ ಲಾಕ್‌ಡೌನ್‌ನಿಂದ ಇವರು ಪರದಾಡುತ್ತಿದ್ದಾರೆ. 

ಗೋವಾದಲ್ಲಿ ಕನ್ನಡಿಗರ ನಿರ್ಲಕ್ಷ್ಯ; ಕಾಲ್ನಡಿಗೆಯಲ್ಲಿ ರಾಜ್ಯಕ್ಕೆ ಕಾರ್ಮಿಕರು ವಾಪಸ್

ತಿನ್ನಲು ಆಹಾರ ಸಿಗದೆ ಇರಲು ನೆಲೆ ಸಿಗದೆ ನಮ್ಮೂರಿಗೆ ನಮ್ಮನ್ನು ಕರೆಸಿಕೊಳ್ಳಿ ಎಂದು ಅಂಗಲಾಚಿ ಬೇಡಿಕೊಳ್ಳುತ್ತಿದ್ದಾರೆ. ಸಹಾಯ ಕೋರಿ ಹಾವೇರಿ ಜಿಲ್ಲೆಯವರೇ ಆದ ಗೃಹ ಸಚಿವ ಬಸವರಾಜ  ಬೊಮ್ಮಾಯಿ ಅವರಿಗೆ ವಿಡಿಯೋ ಮಾಡಿ ಕಳುಹಿಸಿದ್ದಾರೆ. 

ನಮ್ಮನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ. ನಮಗೆ ಕೊರೋನಾ ಇದ್ದರೆ ನಾವು ನಮ್ಮೂರಿಗೂ ಹೋಗುವುದಿಲ್ಲ, ನಮ್ಮ ಮನೆಗೂ ಹೋಗುವುದಿಲ್ಲ. ಅವರಿಗೆ ಕೊರೋನಾ ಕಾಯಿಲೆ ಹಚ್ಚೋದು ಬೇಡಾ ಎಂದು‌ ಯುವಕರು ಮನವಿ ಮಾಡಿಕೊಂಡಿದ್ದಾರೆ.
 

PREV
click me!

Recommended Stories

ವೈರಸ್‌ ಕಾಟ: ಕೊರೋನಾ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ, ಸಚಿವ ಪಾಟೀಲ್‌
ಮತ್ತೆ ಕೊರೋನಾರ್ಭಟ: ಪೂಲಿಂಗ್ ಟೆಸ್ಟ್ ಮೊರೆಹೋದ ಆರೋಗ್ಯ ಇಲಾಖೆ, ಏನಿದು ಹೊಸ ಪರೀಕ್ಷೆ?