ಹಾಸಿನ ಜಿಲ್ಲೆಯ ಸಕಲೇಶಪುರದಲ್ಲಿ ಗಾಂಜಾ ಪ್ರಿಯರ ಬಂಧನ|ಖಾಸಗಿ ಕಲ್ಯಾಣ ಮಂಟಪದ ಸಮೀಪ ಗಾಂಜಾ ಸೇವನೆ ಹಾಗೂ ಮಾರಾಟಕ್ಕೆ ಯತ್ನ| ಗಾಂಜಾ ಅಡ್ಡೆಗಳ ಮೇಲೆ ಪೊಲೀಸರ ದಾಳಿ|
ಸಕಲೇಶಪುರ(ಮಾ.28): ಎಲ್ಲೆಡೆ ಕೊರೋನಾ ಭೀತಿಯಿಂದ ಜನ ಮನೆಯಿಂದ ಆಚೆ ಬರಲು ಹೆದರುತ್ತಿದ್ದರೆ ಈ ನಾಲ್ವರು ಮಾತ್ರ ಗಾಂಜಾ ಸೇವನೆಯಲ್ಲಿ ಮಗ್ನರಾಗಿದ್ದರು. ಪಟ್ಟಣದಲ್ಲಿ ಗಾಂಜಾ ಸೇವನೆ ಹಾಗೂ ಮಾರಾಟ ಮಾಡುತ್ತಿದ್ದ ನಾಲ್ವರು ಯುವಕರನ್ನು ಪೋಲಿಸರು ಬಂಧಿಸಿರುವ ಘಟನೆ ಶುಕ್ರವಾರ ನಡೆದಿದೆ.
ಅಜ್ಜಿಗೆ ಅರಿವೆ ಚಿಂತೆಯಾದರೆ ಮಗಳಿಗೆ ಗಂಡನ ಚಿಂತೆಯಂತೆ ಎಲ್ಲೆಡೆ ಕೊರೋನಾ ಭಯದಿಂದ ನಮ್ಮನ್ನು ಹೇಗೆ ರಕ್ಷಿಸಿಕೊಳ್ಳುವುದೆಂಬ ಚಿಂತೆಯಾದರೆ ಕೆಲವರಿಗೆ ಗಾಂಜಾ ಸೇವನೆ ಮಾಡುವ ಚಿಂತೆಯಾಗಿದೆ. ಪಟ್ಟಣದ ಬಿ.ಎಮ್ ರಸ್ತೆಯ ಖಾಸಗಿ ಕಲ್ಯಾಣ ಮಂಟಪದ ಸಮೀಪ ಗಾಂಜಾ ಸೇವನೆ ಹಾಗೂ ಮಾರಾಟಕ್ಕೆ ಯತ್ನಿಸುತ್ತಿದ್ದ ಬೇಲೂರು ತಾಲೂಕು ಅರೇಹಳ್ಳಿ ಗ್ರಾಮದ ಲಹಿಖಾನ್(24), ಸುಜಿತ್ (22) ಅರೇಹಳ್ಳಿ, ಪಟ್ಟಣದ ಕೆಳಗಿನ ಕೊಪ್ಪಲಿನ, ತಾಲೂಕಿನ ಹಲಸುಲಿಗೆ ಗ್ರಾಮದ ಪುನೀತ್ (21) ಎಂಬ ಯುವಕರನ್ನು ಖಚಿತ ಮಾಹಿತಿಯ ಮೇರೆಗೆ ಮಾಲು ಸಮೇತ ಹಿಡಿದು ಬಂಧಿಸಲಾಗಿದೆ.
undefined
ಕೊರೋನಾ ಲಾಕ್‌ಡೌನ್: ಜೂಜು ಅಡ್ಡೆಗಳ ಮೇಲೆ ದಾಳಿ, ಲಾಠಿ ಚಾರ್ಜ್
ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು ಕಾರ್ಯಾಚರಣೆಯಲ್ಲಿ ಡಿ.ವೈ.ಎಸ್.ಪಿ ಗೋಪಿ, ಆರಕ್ಷಕ ವೃತ್ತ ನಿರೀಕ್ಷಕ ಗಿರೀಶ್, ನಗರ ಠಾಣೆ ಪಿಎಸ್‌ಐ ರಾಘವೇಂದ್ರ, ಪೋಲಿಸ್ ಸಿಬ್ಬಂದಿ ನಾಗರಾಜ್ ಸೇರಿದಂತೆ ಇತರರು ಭಾಗವಹಿಸಿದ್ದರು.