ಕೊರೋನಾ ವೈರಸ್‌ನಿಂದ ಇಡೀ ಭಾರತವನ್ನೇ ಲಾಕ್ ಡೌನ್ ಮಾಡಲಾಗಿದ್ದು, ಯಾರು ಮನೆ ಬಿಟ್ಟು ಹೊರಗಡೆ ಬರಬೇಡಿ ಅಂತೆಲ್ಲಾ ಕೇಂದ್ರ, ಸರ್ಕಾರ, ರಾಜ್ಯ ಸರ್ಕಾರ, ಜಿಲ್ಲಾಡಳಿತ ಹಾಗೂ ಸುದ್ದಿ ಮಾಧ್ಯಮಗಳು ಕಳಕಳಿಯ ಮನವಿ ಮಾಡಿಕೊಳ್ಳುತ್ತಿವೆ. ಆದ್ರೂ ಜನ ಹೊರಗಡೆ ತಿರುಗಾಡುತ್ತಿದ್ದಾರೆ. ಇದೀಗ ಅಂತವರಿಗೆ ಪೊಲೀಸರಿಗೆ ಕೊಟ್ಟ ಶಿಕ್ಷೆ ನೋಡಿ...
ಕಲಬುರಗಿ, (ಮಾ.24): ಈ ಹಿಂದೆ ನಾವು ಶಾಲೆಗಳಲ್ಲಿ ತಪ್ಪು ಮಾಡಿದ್ರೆ ಶಿಕ್ಷಕರು ಇಂತಿಷ್ಟು ಬಸ್ಕಿ ಹೊಡೆಬೇಕು ಅಂತ ಶಿಕ್ಷೆ ನೀಡುತ್ತಿದ್ದರು.
ಆದ್ರೆ, ಇದೀಗ ಈ ಬಸ್ಕಿ ಶಿಕ್ಷೆಯನ್ನ ಕೊರೋನಾ ವೈರಸ್ ತಡೆಗೆ ದೇಶಾದ್ಯಂತ ಲಾಕ್‌ಡೌನ್ ಇದ್ದರೂ ಅನಗತ್ಯವಾಗಿ ಹೊರಗಡೆ ಓಡಾಡಿಕೊಂಡು ಎಂಜಾಯ್ ಮಾಡುತ್ತಿದ್ದವರಿಗೆ ನೀಡಿದ್ದಾರೆ.
ಕಲಬುರಗಿಯ ಶಹಬಜಾರ್ ಚೆಕ್‌ಪೋಸ್ಟ್ ಬಳಿ ಅನಗತ್ಯವಾಗಿ ಬೈಕ್ ತಗೊಂಡು ತಿರುಗಾಡುತ್ತಿದ್ದ ಯುವಕರನ್ನ ಹಿಡಿದು ಸಾರ್ವಜನಿಕವಾಗಿಯೇ ಬಸ್ಕಿ ಹೊಡೆಸಿ ಬುದ್ಧಿ ಕಲಿಸಿರುವ ಪ್ರಸಂಗ ನಡೆದಿದೆ.
ಕರ್ನಾಟಕದಲ್ಲಿ ಮತ್ತೊಂದು ಕೊರೋನಾ ಪತ್ತೆ: ಒಟ್ಟು ಸೋಂಕಿತರ ಸಂಖ್ಯೆ 42ಕ್ಕೇರಿಕೆ
ಕೇಲವ ಬಸ್ಕಿ ಪನಿಷ್ಮೆಂಟ್ ಕೊಟ್ಟಿದ್ದಲ್ಲದೇ ಕೊನೆಗೆ ನಾನು ಯಾವುದೇ ಕಾರಣಕ್ಕೂ ಸರ್ಕಾರ ಆದೇಶವನ್ನ ಪಾಲನೆ ಮಾಡುತ್ತೆ. ಅನಗತ್ಯವಾಗಿ ಮನೆಬಿಟ್ಟು ಹೊರಗೆ ಬರುವುದಿಲ್ಲ ಎಂದು ಪ್ರತಿಜ್ಞೆ ಮಾಡಿಸಿ ಬಿಟ್ಟಿದ್ದಾರೆ.
ಈಗಾಗಲೇ ಇಡೀ ದೇಶದ ಮೊದಲ ಸಾವು ಇದೇ ಕಲಬುರಗಿಯಲ್ಲಿ ಆಗಿದೆ. ಆದರೂ ಜನರಿಗೆ ಬುದ್ಧಿ ಬಂದಿಲ್ಲ. ಸುಖಸುಮ್ಮನೆ ಮನೆ ಬಿಟ್ಟು ಹೊರಗಡೆ ತಿಗುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ಒಳ್ಳೆಯದಕ್ಕೆ ಇಡೀ ದೇಶವನ್ನೇ ಲಾಕ್ ಡೌನ್ ಮಾಡಿದ್ದಾರೆ. ಅದನ್ನು ಸಾರ್ವಜನಿಕರು ಅರ್ಥ ಮಾಡಿಕೊಳ್ಳಬೇಕು.