ಕೊರೋನಾ ಆತಂಕ: ನೀವು ಹೋಗೋ ATMಗಳಲ್ಲಿ ಸ್ಯಾನಿಟೈಸರ್‌ ಇರುತ್ತಾ?

By Kannadaprabha News  |  First Published Mar 25, 2020, 3:16 PM IST

ಪ್ರತಿ ATMಗಳಲ್ಲಿ ಸ್ಯಾನಿಟೈಸರ್‌ ಕಡ್ಡಾಯ| ಯಾವುದೇ ಎಟಿಎಂನಲ್ಲಿ ಸ್ಯಾನಿಟೇಸರ್‌ ಇಲ್ಲದಿದ್ದರೆ ಅಂತಹ ಎಟಿಎಂ, ಬ್ಯಾಂಕ್‌ಗೆ ನೋಟೀಸ್‌ ನೀಡಿ, ಶಿಸ್ತು ಕ್ರಮ ಕೈಗೊಳ್ಳಿ|ಅಗತ್ಯ ಮುಂಜಾಗ್ರತಾ, ಸುರಕ್ಷತಾ ಕ್ರಮ ಕೈಗೊಳ್ಳಬೇಕು| ವೈಯಕ್ತಿಕ ಅಂತರವನ್ನೂ ಕಾಯ್ದುಕೊಳ್ಳಬೇಕು|


ದಾವಣಗೆರೆ(ಮಾ.25): ಪ್ರತಿ ಎಟಿಎಂಗಳಲ್ಲೂ ಸ್ಯಾನಿಟೈಸರ್‌ಗಳನ್ನು ಇಡುವುದು ಕಡ್ಡಾಯವಾಗಿದ್ದರೂ ತಾವೇ ಸ್ವತಃ ಪರಿಶೀಲಿಸಿದಾಗ ಯಾವುದೇ ಎಟಿಎಂನಲ್ಲೂ ಸ್ಯಾನಿಟೈಸರ್‌ ಇರಲಿಲ್ಲ ಎಂದು ಜಿಲ್ಲಾಧಿಕಾರಿ ಮಹಾಂತೇಶ ಜಿ.ಬೀಳಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಸ್ಯಾನಿಟೈಸರ್‌ಗಳನ್ನು ಪ್ರತಿಯೊಂದು ಎಟಿಎಂಗಳಲ್ಲೂ ಕಡ್ಡಾಯವಾಗಿ ಇಡಬೇಕು. ಒಂದು ವೇಳೆ ಯಾವುದೇ ಎಟಿಎಂನಲ್ಲಿ ಸ್ಯಾನಿಟೇಸರ್‌ ಇಲ್ಲದಿದ್ದರೆ ಅಂತಹ ಎಟಿಎಂ, ಬ್ಯಾಂಕ್‌ಗೆ ನೋಟೀಸ್‌ ನೀಡಿ, ಶಿಸ್ತು ಕ್ರಮ ಕೈಗೊಳ್ಳಿ ಎಂದು ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‌ ವ್ಯವಸ್ಥಾಪಕರಿಗೆ ಅವರು ಆದೇಶಿಸಿದ್ದಾರೆ. 

Tap to resize

Latest Videos

ಕರ್ನಾಟಕ ಸಂಸದರೊಬ್ಬರ ಪುತ್ರಿಗೆ ಕೊರೋನಾ ವೈರಸ್ ದೃಢ..!

ಜಿಲ್ಲಾಧಿಕಾರಿ ಸೇರಿದಂತೆ ಎಲ್ಲಾ ಅಧಿಕಾರಿಗಳು, ಪಿಡಿಓಗಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಅವಲೋಕನಾ ಅವದಿಯಲ್ಲಿರುವ ಯಾವುದೇ ವ್ಯಕ್ತಿಗೆ ಭೇಟಿ ಮಾಡುವ ಸಂದರ್ಭದಲ್ಲಿ ಅಗತ್ಯ ಮುಂಜಾಗ್ರತಾ, ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ವೈಯಕ್ತಿಕ ಅಂತರವನ್ನೂ ಕಾಯ್ದುಕೊಳ್ಳಬೇಕು ಎಂದು ಡಿಸಿ ಕಚೇರಿಯಲ್ಲಿ ಬುಧವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ತಿಳಿಸಿದರು.
 

click me!