ಲಾಕ್‌ಡೌನ್: ಟ್ರಕ್‌​ನಲ್ಲೇ ದಿನ​ದೂ​ಡು​ತ್ತಿ​ರುವ ಜಾರ್ಖಂಡ್‌ ಕಾರ್ಮಿ​ಕ​ರು!

By Kannadaprabha News  |  First Published Apr 4, 2020, 8:21 AM IST

ಜಾರ್ಖಂಡ್‌ ರಾಜ್ಯದಿಂದ ಕೂಲಿ ಕೆಲಸಕ್ಕೆ ಬಂದಿದ್ದ ಕಾರ್ಮಿಕರು ಲಾಕ್‌ಡೌನ್‌ ಘೋಷಣೆಯಾದ ದಿನಗಳಿಂದಲೂ ಮಡಿಕೇರಿಯ ಹಾಕಿ ಕ್ರೀಡಾಂಗಣದ ಎದುರು ಟ್ರಕ್‌ನಲ್ಲೇ ಕಾಲ ಕಳೆಯುತ್ತಿದ್ದಾರೆ.


ಮಡಿಕೇರಿ(ಏ.04): ಜಾರ್ಖಂಡ್‌ ರಾಜ್ಯದಿಂದ ಕೂಲಿ ಕೆಲಸಕ್ಕೆ ಬಂದಿದ್ದ ಕಾರ್ಮಿಕರು ಲಾಕ್‌ಡೌನ್‌ ಘೋಷಣೆಯಾದ ದಿನಗಳಿಂದಲೂ ಮಡಿಕೇರಿಯ ಹಾಕಿ ಕ್ರೀಡಾಂಗಣದ ಎದುರು ಟ್ರಕ್‌ನಲ್ಲೇ ಕಾಲ ಕಳೆಯುತ್ತಿದ್ದಾರೆ.

Tap to resize

Latest Videos

ಜಾರ್ಖಂಡ್‌ನಿಂದ 10 ಮಂದಿ ಕೂಲಿ ಕಾರ್ಮಿಕರು ಬಿಎಸ್‌ಎನ್‌ಎಲ್‌ ಕೇಬಲ್‌ ಕೆಲಸಕ್ಕೆ ಬಂದಿದ್ದರು. ಕೊರೋನಾ ಭೀತಿಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ದೇಶಾದ್ಯಂತ ಲಾಕ್‌ಡೌನ್‌ ಘೋಷಿಸಿದ ಪರಿಣಾಮ ಇವರೆಲ್ಲರೂ ಕೆಲಸವಿಲ್ಲದೆ ಹಲವು ದಿನಗಳಿಂದ ಟ್ರಕ್‌ನಲ್ಲೇ ದಿನದೂಡುತ್ತಿದ್ದಾರೆ. ಅಲ್ಲದೆ, ಪಕ್ಕದಲ್ಲೇ ಟ್ಯಾಂಕರ್‌ ನೀರಿನಿಂದ ಸ್ನಾನ ಮಾಡಿಕೊಳ್ಳುತ್ತಿದ್ದಾರೆ.

ತಬ್ಲಿಘಿನಲ್ಲಿ ಭಾಗಿಯಾದವರನ್ಯಾಕೆ ಪರೀಕ್ಷೆಗೊಳಪಡಿಸುತ್ತಿಲ್ಲ? ಡಿಸಿ ನಿರ್ಲಕ್ಷ್ಯಕ್ಕೆ ಜನರ ಆಕ್ರೊಶ

ನಮ್ಮ ಮಾಲೀಕರು ದಿನ ಬಿಟ್ಟು ದಿನ ಆಹಾರ ತಂದು ಕೊಡುತ್ತಿದ್ದಾರೆ. ಎಲ್ಲರೂ ಲಾರಿಯಲ್ಲೇ ಮಲಗುತ್ತಿದ್ದೇವೆ. ಅಷ್ಟುಸಮಸ್ಯೆ ಆಗುತ್ತಿಲ್ಲ. ಆದರೆ ಹೊರಗೆ ಶೌಚಾಲಯಕ್ಕೆ ಹಾಗೂ ಕುಡಿಯಲು ನೀರಿಲ್ಲ. ಹೊರಗೆ ಹೋಗಬೇಕಾದರೆ ಮಾಸ್ಕ್‌ ಧರಿಸಬೇಕು. ಹಲವೆಡೆ ವಿಚಾರಿಸಿದರೂ ಮಾಸ್ಕ್‌ಗಳೇ ಸಿಗುತ್ತಿಲ್ಲ. ಮಾಸ್ಕ್‌ ಧರಿಸದಿದ್ದರೆ ಪೊಲೀಸರು ಗದರಿಸುತ್ತಾರೆ. ನಮಗೆ ಆಹಾರಕ್ಕಿಂತ ಮುಖ್ಯವಾಗಿ ಮಾಸ್ಕ್‌ಗಳ ಅಗತ್ಯವಿದೆ. ಯಾರಾದರೂ ಮಾಸ್ಕ್‌ ಕೊಟ್ಟರೆ ಬಹಳ ಅನುಕೂಲವಾಗುತ್ತೆ ಎಂದು ಕಾರ್ಮಿಕರು ಅಳಲು ತೋಡಿಕೊಂಡರು.

click me!