ಅಕ್ರಮ ಮದ್ಯ ಸಾಗಾಟ| ಖಚಿತ ಮಾಹಿತಿ ಮೇರೆಗೆ ದಾಳಿ| ಹಾವೇರಿ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಆದ್ರಹಳ್ಳಿ ತಾಂಡಾದಲ್ಲಿ ನಡೆದ ಘಟನೆ| ದ್ವಿಚಕ್ರ ವಾಹನ, ಅಕ್ರಮ ಮದ್ಯ ವಶ|
ಶಿರಹಟ್ಟಿ(ಏ.04): ಖಚಿತ ಮಾಹಿತಿ ಮೇರೆಗೆ ಶುಕ್ರವಾರ ತಾಲೂಕಿನ ಆದ್ರಹಳ್ಳಿ ತಾಂಡಾದ ಹತ್ತಿರ ದ್ವಿಚಕ್ರ ವಾಹನದಲ್ಲಿ ಸಾಗಿಸುತ್ತಿದ್ದ ಸುಮಾರು 8280 ಲೀಟರ್‌ನಷ್ಟು ಅಕ್ರಮ ಮದ್ಯ ವಶಕ್ಕೆ ಪಡೆಯಲಾಗಿದೆ.
ಜಿಲ್ಲಾ ಅಬಕಾರಿ ಉಪ ಆಯುಕ್ತ ಮೋತಿಲಾಲ ಜಿಲ್ಲಾ ಅಬಕಾರಿ ಉಪ ಅಧೀಕ್ಷಕ ಮಲ್ಲಿಕಾರ್ಜುನ್ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ದ್ವಿಚಕ್ರ ವಾಹನ ಹಾಗೂ ಅಕ್ರಮ ಮದ್ಯ ವಶಕ್ಕೆ ಪಡೆಯಲಾಗಿದೆ.
ಲಕ್ಷಾಂತರ ಮೌಲ್ಯದ ಮದ್ಯ ಕಳವು! ಸಿಸಿಟಿವಿ ಡಿವಿಆರ್ ಕದ್ದ ಸ್ಮಾರ್ಟ್ ಕಳ್ಳರು
ಶಿರಹಟ್ಟಿ ವಲಯದ ಅಬಕಾರಿ ನಿರೀಕ್ಷಕ ದೀಪಕ್ ಎಸ್. ಅವರು ಪ್ರಕರಣ ದಾಖಲಿಸಿಕೊಂಡಿರುತ್ತಾರೆ. ಅಬಕಾರಿ ರಕ್ಷಕ ರವೀಂದ್ರ ಬಡಫಕ್ಕೀರಪ್ಪನವರ, ನದಾಫ್, ವೀರಣ್ಣ ಹಳೆಮನಿ ಇತರರು ದಾಳಿ ವೇಳೆ ಹಾಜರಿದ್ದರು.