ಕೊರೋನಾ ವೈರಸ್‌ ನಿವಾರಣೆ ಹೋಮದ ವೇಳೆ ಜೇನು ದಾಳಿ!

By Kannadaprabha News  |  First Published Apr 2, 2020, 10:28 AM IST

ಕೊರೋನಾ ವೈರಸ್‌ ನಿವಾರಣೆ ಸಂಬಂಧ ನಗರದ ದೇವಾಲಯವೊಂದರಲ್ಲಿ ನಡೆಯುತ್ತಿದ್ದ ಹೋಮದ ವೇಳೆ ಜೇನು ದಾಳಿ ನಡೆಸಿದೆ. ಅಗ್ರಹಾರದ ಕಾಶಿ ವಿಶ್ವನಾಥ ದೇವಾಲಯದಲ್ಲಿ ಈ ಘಟನೆ ನಡೆದಿದ್ದು, ಶಾಸಕ ಎಸ್‌.ಎ. ರಾಮದಾಸ್‌ ಅವರು ಈ ಹೋಮದಲ್ಲಿ ಪಾಲ್ಗೊಂಡಿದ್ದರು.


ಮೈಸೂರು(ಎ.02): ಕೊರೋನಾ ವೈರಸ್‌ ನಿವಾರಣೆ ಸಂಬಂಧ ನಗರದ ದೇವಾಲಯವೊಂದರಲ್ಲಿ ನಡೆಯುತ್ತಿದ್ದ ಹೋಮದ ವೇಳೆ ಜೇನು ದಾಳಿ ನಡೆಸಿದೆ. ಅಗ್ರಹಾರದ ಕಾಶಿ ವಿಶ್ವನಾಥ ದೇವಾಲಯದಲ್ಲಿ ಈ ಘಟನೆ ನಡೆದಿದ್ದು, ಶಾಸಕ ಎಸ್‌.ಎ. ರಾಮದಾಸ್‌ ಅವರು ಈ ಹೋಮದಲ್ಲಿ ಪಾಲ್ಗೊಂಡಿದ್ದರು.

ಈ ವೇಳೆ ಹೋಮ ಆರಂಭಕ್ಕೂ ಮುನ್ನ ಜೇನು ದಾಳಿ ನಡೆಸಿದೆ. ಜೇನು ದಾಳಿ ನಡೆಸಿದ್ದನ್ನು ನೋಡಿದ ಆಯೋಜಕರು ಮತ್ತು ಅರ್ಚಕರು ಪೂಜಾ ಸಾಮಗ್ರಿಯನ್ನು ಬಿಟ್ಟು ಓಡಿದ್ದಾರೆ. ಸ್ವಲ್ಪ ಸಮಯದ ಬಳಿಕ ಜೇನು ಕಡಿಮೆಯಾಗುತ್ತಿದ್ದಂತೆಯೇ ಪೂಜೆ ಮುಂದುವರೆಸಿದರು.

Tap to resize

Latest Videos

undefined

ವೈದ್ಯಕೀಯ ಸಿಬ್ಬಂದಿ ಸಾವಿಗೀಡಾದರೆ 1 ಕೋಟಿ ಪರಿಹಾರ!

ಈಗಾಗಲೇ ಮೈಸೂರು ಭಾಗದಲ್ಲಿ ಕೊರೋನಾ ವೈರಸ್ ಪ್ರಕರಣಗಳು ಹೆಚ್ಚಿದ್ದು, ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ದೆಹಲಿ ಮಸೀದಿಗೆ ಹೋಗಿ ಬಂದವರ ಸಂಖ್ಯೆಯೂ ಹೆಚ್ಚಿದ್ದು ಕೊರೋನಾ ವೈರಸ್ ಇನ್ನಷ್ಟು ವ್ಯಾಪಿಸುವ ಭೀತಿ ಉಂಟಾಗಿದೆ.

click me!