ಕೊರೋನಾ ಭೀತಿ: ಗಾಳಿಗೆ ತೂರಿದ ಸಾಮಾಜಿಕ ಅಂತರ, APMCಯಲ್ಲಿ ಜನವೋ ಜನ!

By Kannadaprabha NewsFirst Published Mar 29, 2020, 2:53 PM IST
Highlights

ಮಾರುಕಟ್ಟೆಯಲ್ಲಿ ಹೋಲ್‌ಸೇಲ್‌ ದರದಲ್ಲಿ ತರಕಾರಿ ಕೊಳ್ಳಲು ಮುಗಿಬಿದ್ದ ಜನರು| ಹಾಸನ ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಜನಸ್ತೋಮ| ಕೆಲವರು ಮಾಸ್ಕ್‌ ಹಾಕಿದ್ರೆ ಬಹುತೇಕ ಜನರು ಮಾಸ್ಕ್‌ ಹಾಕೇ ಇಲ್ಲ| 

ಹಾಸನ(ಮಾ.29): ಇಡೀ ಪ್ರಪಂಚವೇ ಕೊರೋನಾ ಭಯದಲ್ಲಿ ಇದ್ದು, ಜಿಲ್ಲೆಯಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಿ, ಕಾನೂನು ಕ್ರಮ ಜರುಗಿಸಲು ಮುಂದಾಗಿದ್ದರೆ, ಹಾಸನ ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಅಂತಹ ಬಿಸಿ ತಟ್ಟಿಲ್ಲ. ಎಪಿಎಂಸಿಯಲ್ಲಿ ತರಕಾರಿ ಖರೀದಿಸುತ್ತಿರುವ ಜನರಿಂದಲೇ ತುಂಬಿ ಹೋಗಿತ್ತು.

ನಗರದ ಸಂತೇಪೇಟೆ ಬಳಿ ಇರುವ ಎಪಿಎಂಸಿ ಮಾರುಕಟ್ಟೆಯಲ್ಲಿ ಪ್ರತಿನಿತ್ಯ ಬೆಳಗಿನ ಸಮಯದಲ್ಲಿ ಹೋಲ್‌ಸೇಲ್‌ ದರದಲ್ಲಿ ಎಲ್ಲಾ ತರಹದ ತರಕಾರಿ ಮಾರಾಟ ಮಾಡುತ್ತಾರೆ. ಕೊಂಡುಕೊಳ್ಳಲು ಜನರು ಮುಗಿ ಬೀಳುವುದು ಸಹಜ. ಆದರೇ ಕೊರೋನಾ ಎಂಬ ಮಹಾಮಾರಿ ಹರಡಿರುವಾಗ ಈ ಸಮಯದಲ್ಲಿ ವ್ಯಾಪಾರ ಮಾಡುವ ಗ್ರಾಹಕರು ತಮಗೆ ಪ್ರಜ್ಞೆ ಇಲ್ಲದಂತೆ ನೂಕು ನುಗ್ಗಲಿನಲ್ಲಿ ವ್ಯಾಪಾರ ಮಾಡುತ್ತಿದ್ದಾರೆ.

ಸಿಎಂರಿಂದ ಸರ್ವ ಪಕ್ಷಗಳ ಸಭೆ; ಮುಂದಿನ ಕ್ರಮಗಳ ಬಗ್ಗೆ ಚರ್ಚೆ

ಇನ್ನು ಕೆಲವರು ಮಾಸ್ಕ್‌ ಹಾಕಿದರೇ ಬಹುತೇಕ ಜನರು ಮಾಸ್ಕ್‌ ಹಾಕದೇ ಇರುವುದು ಕಂಡು ಬಂದಿತು. ಕೊರೋನಾ ವೈರಸ್‌ ಹರಡುತ್ತದೆ ಎಂದರೇ ಏನು ಮಟನ್‌ ಕುರ್ಮಾನಾ ಎಂದು ವ್ಯಾಪಾರಸ್ತರು ಹಾಸ್ಯ ಚಟಾಕಿಯಲ್ಲಿ ಮಾತನಾಡಿಕೊಳ್ಳುತ್ತಿದ್ದುದು ಕಂಡುಬಂತು.

ಇನ್ನು ಕೆಲ ಪೊಲೀಸರು ಇದ್ದರೂ ಅವರ ಪಾಡಿಗೆ ಅವರು ಇದ್ದು, ಮೈಕಿನಲ್ಲಿ ಜಾಗೃತಿ ಮೂಡಿಸುವಷ್ಟಕ್ಕೆ ಸೀಮಿತವಾಗಿದ್ದರು. ಕೊರೋನಾ ವೈರಸ್‌ ಸೋಂಕು ಇರುವ ಯಾರಾದರೂ ವ್ಯಕ್ತಿ ಇಲ್ಲಿಗೆ ಕಾಲಿಟ್ಟರೇ ಮುಗಿತು ಕಥೆ! ಒಬ್ಬರಿಂದ ಒಬ್ಬರಿಗೆ ಸೋಂಕು ತಗಲಿ ಮುಂದಿನ ಅನಾಹುತವನ್ನು ಎದುರಿಸಬೇಕಾಗುತ್ತದೆ. ಎಪಿಎಂಸಿ ಮಾರುಕಟ್ಟೆಯಲ್ಲಿ ವ್ಯಾಪಾರ ಇರಲಿ. ಆದರೇ ಕಾನೂನನ್ನು ಪಾಲಿಸಿ ಒಬ್ಬರ ನಡುವೇ ಅಂತರ ಕಾಯ್ದುಕೊಳ್ಳುವುದು ಸೂಕ್ತ. ಕೂಡಲೇ ಎಚ್ಚೆತ್ತುಕೊಂಡು ಎಪಿಎಂಸಿ ಮಾರುಕಟ್ಟೆಯಲ್ಲಿ ಜಾಗ್ರತೆ ವಹಿಸುವುದು ಸೂಕ್ತ ಎಂಬುದು ಬುದ್ಧಿಜೀವಿಗಳ ಅಭಿಪ್ರಾಯವಾಗಿದೆ.

ದಮ್ಮಯ್ಯ ನಮ್ಮನ್ನು ಊರಿಗೆ ಹೋಗಲು ಬಿಡಿ ಎಂದು ಅಂಗಲಾಚುತ್ತಿರುವ ಕಾರ್ಮಿಕರು!

ಈ ಬಗ್ಗೆ ತರಕಾರಿ ವರ್ತಕರ ಸಂಘದ ಅಧ್ಯಕ್ಷ ಆನಂದ್‌ ಮಾತನಾಡಿ, ಕೊರೋನಾ ವೈರಸ್‌ ಭೀತಿ ಇರುವುದರಿಂದ ಸೋಮವಾರದಿಂದ ಏಪ್ರಿಲ್‌ 14ರ ವರೆಗೂ ಎಪಿಎಂಸಿ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟನ್ನು ಬಂದ್‌ ಮಾಡಲು ನಿರ್ಧರಿಸಿದ್ದೇವೆ. ಕೇರಳ, ಮಂಗಳೂರು ಇತರೆ ಭಾಗಗಳಿಂದ ಹೆಚ್ಚು ತರಕಾರಿ ಬರುವದರಿಂದ ವೈರಸ್‌ ಹರಡುವ ಭೀತಿ ಹೆಚ್ಚು ಇದೆ. ಏಪ್ರಿಲ್‌ 14ರ ವರೆಗೂ ಯಾವ ರೈತರು ತರಕಾರಿಯನ್ನು ಇಲ್ಲಿಗೆ ತರಬಾರದು. ಯಾರಾದರೂ ತರಕಾರಿ ತಂದರೆ ಅಂತಹವರಿಗೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿ ಮನವಿ ಮಾಡಿದರು.
 

click me!