ಸಾಮೂಹಿಕ ನಮಾಜ್‌: 15 ಜನರ ಬಂಧನ

By Kannadaprabha NewsFirst Published Apr 4, 2020, 8:59 AM IST
Highlights

ಕೋವಿಡ್‌-19 ಹಿನ್ನೆಲೆಯಲ್ಲಿ ಸರ್ಕಾರ ಕೈಗೊಳ್ಳಲಾಗಿರುವ ಲಾಕ್‌ಡೌನ್‌ ನಡುವೆಯೂ ಕಾನೂನು ಉಲ್ಲಂಘಿಸಿ ಮಸೀದಿಯಲ್ಲಿ ಸಾಮೂಹಿಕ ನಮಾಜ್‌ ಮಾಡುತ್ತಿದ್ದ ಬಗ್ಗೆ ಮುಂಡಗೋಡ ತಾಲೂಕಿನ 2 ಪ್ರತ್ಯೇಕ ಪ್ರಕರಣಗಳಲ್ಲಿ 15 ಜನರನ್ನು ಮುಂಡಗೋಡ ಪೊಲೀಸರು ಬಂಧಿಸಿದ್ದಾರೆ.

ಉತ್ತರ ಕನ್ನಡ(ಏ.04): ಕೋವಿಡ್‌-19 ಹಿನ್ನೆಲೆಯಲ್ಲಿ ಸರ್ಕಾರ ಕೈಗೊಳ್ಳಲಾಗಿರುವ ಲಾಕ್‌ಡೌನ್‌ ನಡುವೆಯೂ ಕಾನೂನು ಉಲ್ಲಂಘಿಸಿ ಮಸೀದಿಯಲ್ಲಿ ಸಾಮೂಹಿಕ ನಮಾಜ್‌ ಮಾಡುತ್ತಿದ್ದ ಬಗ್ಗೆ ಮುಂಡಗೋಡ ತಾಲೂಕಿನ 2 ಪ್ರತ್ಯೇಕ ಪ್ರಕರಣಗಳಲ್ಲಿ 15 ಜನರನ್ನು ಮುಂಡಗೋಡ ಪೊಲೀಸರು ಬಂಧಿಸಿದ್ದಾರೆ.

ತಾಲೂಕಿನ ಹುನಗುಂದ ಗ್ರಾಮದ ಮಸೀದಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಪ್ರಾರ್ಥನೆಯಲ್ಲಿ ತೊಡಗಿದ್ದ 7 ಜನರನ್ನು ವಶಕ್ಕೆ ತೆಗೆದುಕೊಂಡರೆ, ತಾಲೂಕಿನ ಮಳಗಿ ಗ್ರಾಪಂ ವ್ಯಾಪ್ತಿಯ ವೀರಾಪುರ ಗ್ರಾಮದ ನೂರಾನಿ ಮಸೀದಿಯಲ್ಲಿ ನಮಾಜ್‌ ಮಾಡುತ್ತಿದ್ದ 8 ಜನರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.

ಚೆಕ್‌ಪೋಸ್ಟ್‌ನಲ್ಲಿ ವಾಹನ ಬಿಡಲು ಲಂಚ: ವೇಷ ಮರೆಸಿ ಹಿಡಿದ ರವಿ ಡಿ. ಚನ್ನಣ್ಣನವರ್!

ಈಗಾಗಲೇ ರಾಜ್ಯದಲ್ಲಿ ಕೊರೋನಾ ವೈರಸ್ ಹರಡುವಿಕೆ ಅಪಾಯಕಾರಿಯಾಗಿ ಬೆಳೆಯುತ್ತಿದ್ದು, ಜನ ಆದಷ್ಟು ಮನೆಯಲ್ಲೇ ಉಳಿಯಬೇಕಾದ ಅಗತ್ಯವಿದೆ. ಹಾಗಿದ್ದರೂ ಜನ ಮಾತ್ರ ಲಾಕ್‌ಡೌನ್ ಉಲ್ಲಂಘಿಸುತ್ತಿದ್ದಾರೆ.

click me!