ಕೊರೋನಾ ಭೀತಿ: ಹೊಟ್ಟೆ ನೋವಿನಿಂದ ನರಳಾಡುತ್ತಿದ್ದ ರೋಗಿಯನ್ನೇ ಮುಟ್ಟದ ವೈದ್ಯರು!

By Kannadaprabha News  |  First Published Apr 1, 2020, 7:51 AM IST

ಹೊಟ್ಟೆ ನೋವಿನಿಂದ ನರಳಾಡುತ್ತಿದ್ದ ರೋಗಿಗೆ ಚಿಕಿತ್ಸೆ ನೀಡದ ವೈದ್ಯರು| ಕೊಪ್ಪಳ ಜಿಲ್ಲೆಯ ಕುಕನೂರು ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಘಟನೆ| ರೋಗಿಯನ್ನ ಕೊಪ್ಪಳದ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ|


ಕೊಪ್ಪಳ(ಏ.01): ಹೊಟ್ಟೆ ನೋವಿನಿಂದ ನರಳಾಡುತ್ತಾ ಜಿಲ್ಲೆಯ ಕುಕನೂರು ಸರ್ಕಾರಿ ಆಸ್ಪತ್ರೆಗೆ ಬಂದ ರೋಗಿಯನ್ನು ಕೊರೋನಾ ಸೋಂಕು ಇರಬಹುದು ಎಂದು ಶಂಕಿಸಿ ಅಲ್ಲಿಯ ಸಿಬ್ಬಂದಿ ಮತ್ತು ವೈದ್ಯರು ಯಾರೂ ಮುಟ್ಟದೆ ಇರುವ ಅಮಾನವೀಯ ಘಟನೆ ಮಂಗಳವಾರ ನಡೆದಿದೆ.

ರೋಗಿಯನ್ನು ಕರೆದುಕೊಂಡು ಬಂದ ಸಂಬಂಧಿಕರ ಮೂಲಕವೇ ವಾಪಸ್ಸು ಕಳುಹಿಸಿದ್ದಾರೆ. ದೂರದಲ್ಲಿಯೇ ನಿಂತ ಆಸ್ಪತ್ರೆಯ ಸಿಬ್ಬಂದಿ ಬೇಗ ಕರೆದುಕೊಂಡು ಕೊಪ್ಪಳ ಜಿಲ್ಲಾಸ್ಪತ್ರೆಗೆ ಹೋಗಿ ಎಂದು ಹೇಳುವ ವೀಡಿಯೋ ವೈರಲ್‌ ಆಗಿದ್ದು, ಇದರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. 

Tap to resize

Latest Videos

undefined

ಮಧ್ಯಾ​ಹ್ನ​ದ ವೇಳೆಗೆ ತರ​ಕಾರಿ, ಹಣ್ಣು, ಮಾಂಸ ಖಾಲಿ

ಬಳಿಕ ಜಿಲ್ಲಾಸ್ಪತ್ರೆಗೆ ದಾಖಲಿಸಿ, ಆತನಿಗೆ ಚಿಕಿತ್ಸೆ ಕೊಡಿಸಲಾಗಿದೆ. ಈ ವಿಷಯವನ್ನು ಕೇಳಿದ ಆರೋಗ್ಯ ಸಚಿವ ಶ್ರೀರಾಮುಲು ತೀವ್ರ ಬೇಸರ ವ್ಯಕ್ತಪಡಿಸಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
 

click me!