ಲಾಕ್‌ಡೌನ್‌: ರೋಗಿಗಳ ಪರದಾಟ, ಜನತೆಗೆ ಕೇಂದ್ರ ಸಚಿವ ಜೋಶಿ ಉಚಿತ ಕ್ಯಾಬ್‌ ಸೌಲಭ್ಯ

By Kannadaprabha NewsFirst Published Apr 4, 2020, 7:40 AM IST
Highlights

ಲಾಕ್‌ಡೌನ್‌ನಂದ ಜನರಿಗೆ ಉಂಟಾದ ಸಂಚಾರ ಸಮಸ್ಯೆ| ಆಸ್ಪತ್ರೆಗೆ ತೆರಳಲು ಉಚಿತ ಕ್ಯಾಬ್‌ ಸೇವೆ| ಡಯಾಲಿಸೀಸ್‌, ಚಿಕ್ಕ ಮಕ್ಕಳ ಅನಾರೋಗ್ಯ, ಗರ್ಭಿಣಿಯರಿಗೆ ಸಮಸ್ಯೆ ಹೀಗೆ ಪ್ರತಿಯೊಂದಕ್ಕೂ ಉಚಿತ ಕಾರು ಒದಗಿಸುವುದಾಗಿ ಹೇಳಿದ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ|

ಹುಬ್ಬಳ್ಳಿ(ಏ.04): ಕೊರೋನಾ ಭೀತಿ ಹಿನ್ನೆಲೆಯಲ್ಲಿ ಘೋಷಣೆಯಾದ ಲಾಕ್‌ಡೌನ್‌ ಕಾರಣದಿಂದ ಜನರಿಗೆ ಉಂಟಾಗಿರುವ ಸಂಚಾರ ಸಮಸ್ಯೆ ಅದರಲ್ಲೂ ಆಸ್ಪತ್ರೆಗೆ ತೆರಳಲು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, 13 ಕ್ಯಾಬ್‌ಗಳನ್ನು ಜನತೆಗೆ ಉಚಿತವಾಗಿ ಮೀಸಲಿಟ್ಟಿದ್ದಾರೆ.

ಲಾಕ್‌ಡೌನ್‌ ಹಿನ್ನೆಲೆ ವಾಹನಗಳ ಓಡಾಟಕ್ಕೆ ಬ್ರೇಕ್‌ ಹಾಕಿದ ಹಿನ್ನೆಲೆಯಲ್ಲಿ ಜನರಿಗೆ ತುರ್ತು ಸಂದರ್ಭದ ಸಂಚಾರಕ್ಕೆ ಪರದಾಡುವಂತಾಗಿದೆ. ಹೀಗಾಗಿ ಡಯಾಲಿಸೀಸ್‌, ಚಿಕ್ಕ ಮಕ್ಕಳ ಅನಾರೋಗ್ಯ, ಗರ್ಭಿಣಿಯರಿಗೆ ಸಮಸ್ಯೆ ಹೀಗೆ ಪ್ರತಿಯೊಂದಕ್ಕೂ ಉಚಿತ ಕಾರು ಒದಗಿಸುವುದಾಗಿ ಕೇಂದ್ರ ಸಚಿವರ ಕಚೇರಿ ತಿಳಿಸಿದೆ.

ಕೊರೋನಾ ಶಂಕೆ: ಚಿಕಿತ್ಸೆ ಸಿಗದೆ ಕಾಮಾಲೆ ರೋಗಿ ಸಾವು

ತುರ್ತು ಸಂದರ್ಭದಲ್ಲಿ ಮನೆಯಿಂದ ಆಸ್ಪತ್ರೆಗೆ ಕರೆತಂದು, ಪುನಃ ಮನೆಗೆ ತಲುಪಿಸುಲು ಕ್ಯಾಬ್‌ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯ ಪ್ರತಿ ತಾಲೂಕು, ಹಾಗೂ ನಗರದಲ್ಲಿ ಕ್ಯಾಬ್‌ಗಳ ವ್ಯವಸ್ಥೆ ಮಾಡಲಾಗಿದೆ. ಕ್ಯಾಬ್‌ ಬೇಕಿದ್ದವರು ವಾಟ್ಸ್‌ ಆ್ಯಪ್‌ ನಂಬರ್‌ ಪ್ರವೀಣ ಶೀಲವಂತರ 9538075626, ರಾಘವೇಂದ್ರ ಯರಕಲ್‌ 7353467416 ಸಂಪರ್ಕಿಸಬಹುದು. ತಮ್ಮ ವಿಳಾಸ ಜತೆಗೆ ವಿವರವಾದ ಮಾಹಿತಿ ನೀಡಿದಲ್ಲಿ ಕ್ಯಾಬ್‌ ಮನೆ ಬಾಗಿಲಿಗೆ ಬರಲಿದೆ ಎಂದು ಸಚಿವರ ಕಚೇರಿ ತಿಳಿಸಿದೆ.
 

click me!