ಸೀಫುಡ್ ಪ್ರಿಯರಿಗೆ ಸ್ಯಾಡ್ ನ್ಯೂಸ್: ಮೂರ್ನಾಲ್ಕು ತಿಂಗಳು ಮೀನು ಸಿಗೋದು ಕಷ್ಟ

By Suvarna NewsFirst Published Mar 27, 2020, 11:11 AM IST
Highlights

ಕೊರೋನಾ ವೈರಸ್ ಹರಡುವುದನ್ನು ತಡೆಯಲು ಈಗಾಗಲೇ ಲಾಕ್‌ಡೌನ್ ಮಾಡಲಾಗಿದ್ದು ಇದೀಗ ಮಂಗಳೂರಿನಲ್ಲಿ ಮೀನುಗಾರಿಕೆಯೂ ಸಂಪೂರ್ಣ ಬಂದ್ ಆಗಿದೆ. ಸಾವಿರಾರು ಮೀನುಗಾರಿಕಾ ಬೋಟ್‌ಗಳು ತೀರಕ್ಕೆ ಬಂದು ನಿಂತಿವೆ.

ಮಂಗಳೂರು(ಮಾ.27): ಕೊರೋನಾ ವೈರಸ್ ಹರಡುವುದನ್ನು ತಡೆಯಲು ಈಗಾಗಲೇ ಲಾಕ್‌ಡೌನ್ ಮಾಡಲಾಗಿದ್ದು ಇದೀಗ ಮಂಗಳೂರಿನಲ್ಲಿ ಮೀನುಗಾರಿಕೆಯೂ ಸಂಪೂರ್ಣ ಬಂದ್ ಆಗಿದೆ. ಸಾವಿರಾರು ಮೀನುಗಾರಿಕಾ ಬೋಟ್‌ಗಳು ತೀರಕ್ಕೆ ಬಂದು ನಿಂತಿವೆ.

ಕಡಲತಡಿಯಲ್ಲಿ ಇನ್ನು ಮುಂದೆ ಮೀನುಗಾರರು ಕಡಲಿಗೆ ಇಳಿಯುವುದಿಲ್ಲ. ಮಂಗಳೂರಿನಲ್ಲಿ ಮೀನುಗಾರಿಕೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಆಳ ಸಮುದ್ರದಿಂದ ರಾತ್ರೋರಾತ್ರಿ ನೂರಾರು ಬೋಟ್‌ಗಳು ವಾಪಾಸ್ ಆಗಿವೆ.

'60 ವರ್ಷ ಮೇಲ್ಪಟ್ಟವರಿಗೆ 7 ದಿನಕ್ಕೇ ಕೊರೋನಾ ಪರೀಕ್ಷೆ'

ಜಿಲ್ಲಾಡಳಿತದ ಖಡಕ್ ಸೂಚನೆ ಹಿನ್ನೆಲೆಯಲ್ಲಿ ಸಂಪೂರ್ಣ ಮೀನುಗಾರಿಕೆ ಸ್ಥಗಿತ ಮಾಡಲಾಗಿದ್ದು, ರಾತ್ರಿಯೇ 30ಕ್ಕೂ ಅಧಿಕ ಬಸ್‌ಗಳಲ್ಲಿ ಕಾರ್ಮಿಕರನ್ನು ಸ್ಥಳಾಂತರ ಮಾಡಲಾಗಿದೆ. ಮೀನುಗಾರಿಕಾ ಬೋಟ್‌ಗಳ ಸಾವಿರಾರು ಕಾರ್ಮಿಕರನ್ನ ಊರಿಗೆ ಕಳುಹಿಸಲಾಗಿದೆ.

ಹೋಂ ಕ್ವಾರಂಟೈನ್‌ನಲ್ಲಿದ್ದ ವ್ಯಕ್ತಿಯ ಬೇಕಾಬಿಟ್ಟಿ ತಿರುಗಾಟ : ಬಿಸಿಲಲ್ಲಿ ನಿಲ್ಲುವ ಶಿಕ್ಷೆ

ಖಾಸಗಿ ಬಸ್ಸುಗಳ ಮೂಲಕ ಕೇರಳ, ತಮಿಳುನಾಡು ಮತ್ತು ಆಂಧ್ರಪ್ರದೇಶಕ್ಕೆ ಕಾರ್ಮಿಕರನ್ನು ಕಳುಹಿಸಲಾಗಿದೆ. ಜಿಲ್ಲಾಡಳಿತದ ಮೂಲಕವೇ ಎಲ್ಲಾ ಮೀನುಗಾರರು, ಕಾರ್ಮಿಕರು ಊರುಗಳಿಗೆ ವಾಪಾಸ್ ಆಗಿದ್ದು, ಸದ್ಯ ಮಂಗಳೂರು ಬಂದರಿನಲ್ಲಿ ಸಾವಿರಾರು ಬೋಟ್‌ಗಳು ಲಂಗರು ಹಾಕಿವೆ. ಇನ್ನು 3-4 ತಿಂಗಳು ಮೀನು ಸಿಗುವ ಸಾಧ್ಯತೆ ಕಡಿಮೆ ಇದೆ.

click me!