'ಹೋಂ ಕ್ವಾರೆಂಟೈನ್‌ಗೆ ಸೀಲ್ ಹಾಕಿದ್ರೆ ಸ್ಕಿನ್ ಕ್ಯಾನ್ಸರ್ ಬರುತ್ತೆ': ಯುವಕನ ಉದ್ಧಟತನ

By Kannadaprabha NewsFirst Published Mar 24, 2020, 11:42 AM IST
Highlights

ಕೋವಿಡ್‌-19 ಸಂಬಂಧ ಹೋಂ ಕ್ವಾರೆಂಟೈನ್‌ ಆದೇಶ ಉಲ್ಲಂಘಿಸಿದ ಆಸ್ಟ್ರೆಈಲಿಯಾದಿಂದ ಬಂದ ವ್ಯಕ್ತಿಯ ವಿರುದ್ಧ ವಿ.ವಿ.ಪುರಂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮೈಸೂರು(ಮಾ.24): ಕೋವಿಡ್‌-19 ಸಂಬಂಧ ಹೋಂ ಕ್ವಾರೆಂಟೈನ್‌ ಆದೇಶ ಉಲ್ಲಂಘಿಸಿದ ಆಸ್ಟ್ರೆಈಲಿಯಾದಿಂದ ಬಂದ ವ್ಯಕ್ತಿಯ ವಿರುದ್ಧ ವಿ.ವಿ.ಪುರಂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ವಿ.ವಿ.ಪುರಂ ಠಾಣಾ ವ್ಯಾಪ್ತಿಯ ವ್ಯಕ್ತಿಯೊಬ್ಬರು ಮಾ.22 ರಂದು ಆಸ್ಪ್ರೇಲೀಯಾದಿಂದ ಭಾರತಕ್ಕೆ ವಿಮಾನದ ಮೂಲಕ ಬೆಂಗಳೂರಿಗೆ ಬಂದಿದ್ದು, ಇವರಿಗೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಮುಂಗೈಗೆ ಸೀಲ್ ಹಾಕಿ, ಇವರು ವೈರಾಣು ಬಾಧಿತ ದೇಶದಿಂದ ಬಂದವರಾಗಿದ್ದು, ಇವರಿಗೆ 14 ದಿವಸಗಳ ಕಾಲ ಹೋಂ ಕ್ವಾರೆಂಟೈನ್‌ಗೆ ಒಳಪಡುವಂತೆ ಸೂಚಿಸಲಾಗಿತ್ತು.

ಸಾರ್ವಜನಿಕರ ಸಾರಿಗೆಯಲ್ಲೇ 2 ಬಾರಿ ಮಂಗಳೂರಿಗೆ ಬಂದಿದ್ದ ಕೊರೋನಾ ಸೋಂಕಿತ

ಈ ಸಂಬಂಧ ಇವರಿಗೆ ಏ.6 ರವರೆಗೆ ಮೈಸೂರಿನ ತನ್ನ ಮನೆಯಲ್ಲಿ ಹೋಂ ಕ್ವಾರೆಂಟೈನ್‌ಗೆ ಒಳಪಡಿಸಲಾಗಿತ್ತು. ಆದರೂ ಸಾರ್ವಜನಿಕ ಪ್ರದೇಶಗಳಲ್ಲಿ ಓಡಾಡಿ ಸಾರ್ವಜನಿಕರೊಂದಿಗೆ ಬೆರೆತು ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದ ಆದೇಶ ಉಲ್ಲಂಘನೆ ಮಾಡಿದ್ದು, ಈ ವ್ಯಕ್ತಿಯ ವಿರುದ್ಧ ವಿ.ವಿ.ಪುರಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಸಲಾಗಿದೆ.

click me!