ಲಾಕ್‌ಡೌನ್‌ ಮಧ್ಯೆಯೂ ಫ್ರೀ ಕ್ಯಾಪ್ಸಿಕಂ: ಸಿಕ್ಕಿದ್ದೇ ಚಾನ್ಸ್‌ ಅಂತ ಮುಗಿಬಿದ್ದ ಜನ!

Suvarna News   | Asianet News
Published : Mar 29, 2020, 01:30 PM IST
ಲಾಕ್‌ಡೌನ್‌ ಮಧ್ಯೆಯೂ ಫ್ರೀ ಕ್ಯಾಪ್ಸಿಕಂ: ಸಿಕ್ಕಿದ್ದೇ ಚಾನ್ಸ್‌ ಅಂತ ಮುಗಿಬಿದ್ದ ಜನ!

ಸಾರಾಂಶ

ಕೊರೋನಾ ಎಫೆಕ್ಟ್ ಹಿನ್ನೆಲೆ ವಾಹನ ಸಮಸ್ಯೆಯಿಂದ ಮಾರುಕಟ್ಟೆಗೆ ಹಾಕಲಾಗದೆ ಉಚಿತವಾಗಿ ಕ್ಯಾಪ್ಸಿಕಂ ನೀಡಿದ ರೈತ| ಕೋಲಾರ ತಾಲೂಕಿನ ದಿನ್ನೂರು ಗ್ರಾಮದಲ್ಲಿ ನಡೆದ ಘಟನೆ| ಎರಡು ಟನ್‌ನಷ್ಟು ಕ್ಯಾಪ್ಸಿಕಂ ದಾನ ಮಾಡಿದ ರೈತ| 

ಕೋಲಾರ(ಮಾ.29): ಕೊರೋನಾ ವೈರಸ್‌ ಎಫೆಕ್ಟ್‌ ಹಿನ್ನೆಲೆಯಲ್ಲಿ ವಾಹನದ ಸಮಸ್ಯೆಯಿಂದ ರೈತನೊಬ್ಬ ಕ್ಯಾಪ್ಸಿಕಂ ಅನ್ನು ಮಾರುಕಟ್ಟೆಗೆ ಹಾಕಲಾಗದೆ ಉಚಿತವಾಗಿ ಜನರಿಗೆ ಹಂಚಿದ ಘಟನೆ ನೀಡಿದ ತಾಲೂಕಿನ ದಿನ್ನೂರು ಗ್ರಾಮದಲ್ಲಿ ಇಂದು(ಭಾನುವಾರ) ನಡೆದಿದೆ. 

ಕೋಲಾರ ತಾಲೂಕಿನ ದಿನ್ನೂರು ಗ್ರಾಮದ ಪ್ರವೀಣ್ ಎಂಬುವವರು ತಮ್ಮ ಜಮೀನಿನಲ್ಲಿ ಬೆಳೆದ ಕ್ಯಾಪ್ಸಿಕಂ ಅನ್ನು ಟೆಂಪೋದಲ್ಲಿ ತುಂಬಿಕೊಂಡು ಜನರಿಗೆ ಉಚಿತವಾಗಿ ಹಂಚಿದ್ದಾರೆ. ರೈತ ಪ್ರವೀಣ್ ಅವರು ಸುಮಾರು ಎರಡು ಟನ್‌ನಷ್ಟು ಕ್ಯಾಪ್ಸಿಕಂ ಅನ್ನು ಗ್ರಾಮಗಳಿಗೆ ತೆರಳಿ ಜನರಿಗೆ ದಾನ ಮಾಡಿದ್ದಾರೆ. 

ಲಾಕ್‌ಡೌನ್‌: ಗಗನಕ್ಕೇರಿದ ತರಕಾರಿ ಬೆಲೆ

ಈ ವೇಳೆಯಲ್ಲಿ ಮಾದ್ಯಮವರ ಜೊತೆ ಮಾತನಾಡಿದ ರೈತ ಪ್ರವೀಣ್ ಅವರು, ಅಂತರರಾಜ್ಯ ಮಾರುಕಟ್ಟೆಗೆ ಸರಬರಾಜು ಮಾಡಲಾಗದೆ ಸ್ಥಳೀಯ ಜನರಿಗೆ ಹಂಚಿಕೆ ಮಾಡಿದ್ದೇನೆ ಎಂದು ಹೇಳಿದ್ದಾರೆ. 
 

PREV
click me!

Recommended Stories

ವೈರಸ್‌ ಕಾಟ: ಕೊರೋನಾ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ, ಸಚಿವ ಪಾಟೀಲ್‌
ಮತ್ತೆ ಕೊರೋನಾರ್ಭಟ: ಪೂಲಿಂಗ್ ಟೆಸ್ಟ್ ಮೊರೆಹೋದ ಆರೋಗ್ಯ ಇಲಾಖೆ, ಏನಿದು ಹೊಸ ಪರೀಕ್ಷೆ?