ಚಾಲಕ, ಕ್ಲೀನರ್‌ಗಳಿಂದ ಊಟ ನೀಡಿದ ಧಾರವಾಡ ಎಸ್‌ಪಿ ವರ್ಟಿಕಾ ಕಟಿಯಾರ್| ವರೂರ ಗ್ರಾಮದ ಬಳಿ ಹಾಕಿದ ಚೆಕ್ ಪೋಸ್ಟ್‌ನಲ್ಲಿ ಊಟದ ವ್ಯವಸ್ಥೆ| ಲಾಕ್‌ಡೌನ್ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಹೋಟೆಲ್ ಮತ್ತು ದಾಬಾಗಳು ಮುಚ್ಚಿದ್ದರಿಂದ ಊಟಗೆ ಸಿಗದೆ ಹಸಿವಿನಿಂದ ಬಳಲುತ್ತಿರುವ ಚಾಲಕರು|
ಹುಬ್ಬಳ್ಳಿ(ಏ.05): ಲಾಕ್‌ಡೌನ್ ಹಿನ್ನಲೆಯಲ್ಲಿ ಆಹಾರ ಇಲ್ಲದೇ ಪರದಾಡುತ್ತಿದ್ದ ಲಾರಿ ಚಾಲಕರು ಹಾಗೂ ಕ್ಲೀನರ್‌ಗಳಿಗೆ ಶನಿವಾರ ಧಾರವಾಡ ಎಸ್‌ಪಿ ವರ್ಟಿಕಾ ಕಟಿಯಾರ್ ಹಾಗೂ ಸಿಬ್ಬಂದಿ ಊಟ ನೀಡಿ ಮಾನವೀಯತೆ ಮೆರೆದಿದ್ದಾರೆ.
ತಾಲೂಕಿನ ವರೂರ ಗ್ರಾಮದ ಬಳಿ ಹಾಕಿದ ಚೆಕ್ ಪೋಸ್ಟ್‌ನಲ್ಲಿ ಊಟದ ವ್ಯವಸ್ಥೆ ಕಲ್ಪಿಸಿದ್ದಾರೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಹೋಟೆಲ್ ಮತ್ತು ದಾಬಾಗಳು ಮುಚ್ಚಿದ್ದರಿಂದ ಊಟಗೆ ಸಿಗದೆ ಚಾಲಕರು ಹಸಿವಿನಿಂದ ಬಳಲುತ್ತಿದ್ದಾರೆ.
ಧಾರವಾಡದಲ್ಲಿ ನಿಷೇಧಾಜ್ಞೆ ಸಡಿಲಿಕೆ ಆಯ್ತಾ? ಜನರ ನಿರಾತಂಕ ಓಡಾಟ
ಹೀಗಾಗಿ ಧಾರವಾಡ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಎರಡೂ ಚೆಕ್‌ಪೋಸ್ಟ್‌ನಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ಪೊಲೀಸ್ ಅಧಿಕಾರಿಗಳ ಈ ಕಾರ್ಯಕ್ಕೆ ಲಾರಿ ಚಾಲಕರು ಮತ್ತು ಕ್ಲೀನರ್‌ಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.