ಭಾರತ ಲಾಕ್‌ಡೌನ್|ಮಸೀದಿಗಳಲ್ಲಿ ನಮಾಜ಼್ ಮಾಡದಿರಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆದೇಶ| ಕರ್ನಾಟಕ ವಕ್ಫ್ ಬೋರ್ಡ್ ಹಾಗೂ ಇಸ್ಲಾಮಿಕ್ ಸ್ಕಾಲರ್ ಹಾಗೂ ಧಾರ್ಮಿಕ ಮುಖಂಡರ ಜೊತೆ ಚರ್ಚಿಸಿದ ಬಳಿಕ ನಿರ್ಧಾರ|
ಬೆಂಗಳೂರು(ಮಾ.26): ಕೊರೋನಾ ವೈರಸ್‌ನಿಂದ ನಮ್ಮನ್ನ ನಾವು ರಕ್ಷಿಸಿಕೊಳ್ಳಲು ಸಾಮಾಜಿಕ ಅಂತರವೊಂದೇ ದಾರಿಯಾಗಿದೆ. ಹೀಗಾಗಿಯೇ ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 14 ರವರೆಗೆ ಭಾರತ ಲಾಕ್‌ಡೌನ್‌ಗೆ ಆದೇಶಿಸಿದ್ದಾರೆ.
ಇನ್ನು ರಾಜ್ಯದಲ್ಲಿರುವ ಎಲ್ಲ ಮಸೀದಿಗಳಲ್ಲಿ ಇನ್ಮುಂದೆ ನಮಾಜ಼್ ಮಾಡದಿರಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಹತ್ವದ ಆದೇಶವೊಂದನ್ನ ಹೊರಡಿಸಿದೆ. ಈ ಸಂಬಂಧ ಕರ್ನಾಟಕ ವಕ್ಫ್ ಬೋರ್ಡ್ ಹಾಗೂ ಇಸ್ಲಾಮಿಕ್ ಸ್ಕಾಲರ್ ಹಾಗೂ ಧಾರ್ಮಿಕ ಮುಖಂಡರ ಜೊತೆ ಚರ್ಚಿಸಿದ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ.
ಮುಸ್ಲಿಂ ಬಾಂಧವರು ನಮಾಜ಼್ ವೇಳೆ ಅಕ್ಕ ಪಕ್ಕದಲ್ಲಿ ಕೂಡುತ್ತಾರೆ. ಬಳಿಕ ಹಸ್ತಲಾಘವ ಮಾಡಿ, ಕೈ ಕುಲುಕರ್ನಾಟಕ ವಕ್ಫ್ ಬೋರ್ಡ್ ಹಾಗೂ ಇಸ್ಲಾಮಿಕ್ ಸ್ಕಾಲರ್ ಹಾಗೂ ಧಾರ್ಮಿಕ ಮುಖಂಡರ ಜೊತೆ ಚರ್ಚಿಸಿದ ಬಳಿಕ ಈ ನಿರ್ಧಾರಕ್ಕೆ ಕಲಾಗುತ್ತದೆ. ಇದರಿಂದ ಕೊರೋನಾ ಹರಡುವ ಸಾಧ್ಯತೆ ಇದೆ. ಹೀಗಾಗಿ ರಾಜ್ಯ ಸರ್ಕಾರ ಈ ಮಹತ್ವದ ನಿರ್ಣಯವನ್ನ ತೆಗೆದುಕೊಂಡಿದೆ.
ಕೊರೋನಾ ಕಾಟದಿದಂದ ಈಗಾಗಲೇ ಸೌದಿ ಅರೇಬಿಯಾದಲ್ಲೂ ನಮಾಜ಼್ ರದ್ದುಗೊಳಿಸಲಾಗಿದೆ. ಹೀಗಾಗಿ ಮಾರ್ಚ್ 31 ರವರೆಗೂ ನಮಾಜ಼್ ಮಾಡದಂತೆ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.