ತಂದೆ ಕೊನೆ ಮುಖ ನೋಡಲು ಬಿಡ್ಲಿಲ್ಲ ಕೊರೋನಾ, ಅಪ್ಪನ ಚಿತೆಗೆ ಪುತ್ರಿ ಅಗ್ನಿ ಸ್ಪರ್ಶ

By Suvarna NewsFirst Published Mar 30, 2020, 8:07 PM IST
Highlights

ಕೊರೋನಾ ವೈರಸ್ ಜನರ ಜೀವನದಲ್ಲಿ ಯಮನಂತೆ ಆಟವಾಡುತ್ತಿದೆ. ಪ್ರತಿನಿತ್ಯ ಜನರು ಕಣ್ಣೀರು ಹಾಕುತ್ತಿದ್ದಾರೆ. ಮತ್ತೊಂದೆಡೆ ಕಿಲ್ಲರ್ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಲಾಕ್‍ಡೌನ್ ಘೋಷಣೆ ಮಾಡಿದ್ದು, ತಂದೆಯ ಅಂತಿಮ ಸಂಸ್ಕಾರಕ್ಕೆ ಮಗನೇ ಬಾರದಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಹುಬ್ಬಳ್ಳಿ, (ಮಾ.30): ಜನರಿಗೆ ಕೊರೋನಾ ಎನ್ನುವ ಮಾಹಾಮಾರಿ ಕೊಡುತ್ತಿರುವ ಕಷ್ಟ ಅಷ್ಟಿಷ್ಟಲ್ಲಾ. ಕೊರೋನಾ ಭೀತಿಯ ನಡುವೆ, ಲಾಕ್ ಡೌನ್ ನಿಯಮದಿಂದ ಮಗಳೇ ತಂದೆಯ ಅಂತ್ಯಸಂಸ್ಕಾರವನ್ನು ಮಾಡಿ ಮುಗಿಸಿದ್ದಾಳೆ.

ಈ ಮನಕುಲುಕುವ ಘಟನೆ ಇಂದು (ಸೋಮವಾರ) ಹುಬ್ಬಳ್ಳಿಯ ಕೇಶ್ವಾಪುರದ ಮುಕ್ತಿ ಧಾಮದಲ್ಲಿ ನಡೆದಿದೆ.

ತಂದೆಯ ಅಂತಿಮ ಸಂಸ್ಕಾರಕ್ಕೆ ಆಗಮಿಸಬೇಕಿದ್ದ ಮಗ ಲಾಕ್‍ಡೌನ್‍ನಿಂದ ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ಸಿಲುಕಿದ್ದಾರೆ. ಹೀಗಾಗಿ ಅನಾರೋಗ್ಯದಿಂದ ಸಾವನ್ನಪ್ಪಿದ್ದ ತಂದೆ ಎನ್.ಎ. ಚವ್ಹಾನ್ ಅವರ ಅಂತಿಮ ಸಂಸ್ಕಾರವನ್ನು ಮಗನ ಅನುಪಸ್ಥಿತಿಯಲ್ಲಿ ಅವರ ಮಗಳಿಂದಲೇ ಅಂತಿಮ ವಿಧಿ ವಿಧಾನ ನೆರವೇರಿಸಿದ್ದಾರೆ.

ಸಖಿಯರ ಜೊತೆ ರಾಜ ಕ್ವಾರಂಟೈನ್, ನಾಯಿ ಸಾವಿನಿಂದ ನಟಿ ರಮ್ಯಾಗೆ ಡಿಪ್ರೆಶನ್; ಮಾ.30ರ ಟಾಪ್ 10 ಸುದ್ದಿ!

ಹುಬ್ಬಳ್ಳಿಯ ಎನ್.ಎ. ಚವ್ಹಾಣ್ ಎನ್ನುವರು ಅನಾರೋಗ್ಯದಿಂದ ಸೋಮವಾರ ನಿಧನರಾಗಿದ್ದಾರೆ. ಅವರ ಮಗ ಯಾವುದೋ ಕೆಲಸದ ನಿಮಿತ್ತ ಗದಗ ಜಿಲ್ಲೆಯ ಲಕ್ಷ್ಮೇಶ್ವರಕ್ಕೆ ತೆರಳಿದ್ದರು. ಆದರೆ ಲಾಕ್‌ಡೌನ್ ಹಿನ್ನೆಲೆ ಕಳೆದ ಮೂರ್ನಾಲ್ಕು ದಿನಗಳಿಂದ ಅಲ್ಲೇ ಸಿಲುಕಿದ್ದಾರೆ.

 ಸೋಮವಾರ ನಿಧನರಾದ ಸುದ್ದಿ ತಿಳಿದರೂ ಇಲ್ಲಿಗೆ ಬರಲು ಸಾಧ್ಯವಾಗಿಲ್ಲ. ಹೀಗಾಗಿ ಮಗನ ಅನುಪಸ್ಥಿತಿಯಲ್ಲೇ ತಂದಯ ಚಿತೆಗೆ. ಪುತ್ರಿಯೇ ಅಗ್ನಿ ಸ್ಪರ್ಶ ಮಾಡಬೇಕಾಯ್ತು.

ಇನ್ನು ಅಂತಿಮ ಕ್ರಿಯೆಯಲ್ಲಿ ಚವ್ಹಾಣ್ ಕುಟುಂಬದ ಐದಾರು ಜನರು ಮಾತ್ರ ಭಾಗಿಯಾಗಿದ್ದು, ಕೊರೊನಾ ಭಯಕ್ಕೆ ಅಂತ್ಯಸಂಸ್ಕಾರದಲ್ಲಿ ಜನರು ಸಹ ಭಾಗವಹಿಸಿರಲಿಲ್ಲ. 

click me!