ಕೊರೋನಾ ಗೆದ್ದ ವೃದ್ಧ ದಂಪತಿ..! ಚಿಕಿತ್ಸೆಯ ಜೊತೆ ಇವರಿಗೆ ಬಲ ನೀಡಿದ್ದು ಒಲವು..!

By Suvarna News  |  First Published Mar 31, 2020, 1:57 PM IST

ಇಬ್ಬರನ್ನೂ ವಿಐಪಿ ಐಸಿಯುನಲ್ಲಿ ಬೇರೆ ಬೇರೆ ಕೋಣೆಗಳಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇದರಿಂದ ಇಬ್ಬರೂ ಒಬ್ಬರನ್ನೊಬ್ಬರು ನೋಡಲಾಗದೆ ಚಡಪಡಿಸುತ್ತಿದ್ದರು. ನಂತರದಲ್ಲಿ ಇಬ್ಬರನ್ನೂ ಒಂದೇ ಐಸಿಯುಗೆ ಶಿಫ್ಟ್ ಮಾಡಲಾಗಿತ್ತು. ಅವರಿಬ್ಬರೂ ಪರಸ್ಪರ ನೋಡುಂತೆಯೇ ಇಬ್ಬರನ್ನೂ ಮಲಗಿಸಲಾಗಿತ್ತು. ಕೊರೋನಾ ಗೆದ್ದು ಬಂದ ವೃದ್ಧ ದಂಪತಿಯ ಕಥೆ ಕೇಳಿ.


ತಿರುವನಂತಪುರ(ಮಾ.31): ಕೊರೋನಾ ವೈರಸ್ ಸೋಂಕಿತರು ಗುಣಮುಖರಾಗುವುದೇ ಕಷ್ಟ. ಅದರಲ್ಲೂ ಚಿಕ್ಕ ಮಕ್ಕಳು ಹಾಗೂ ವೃದ್ಧರಿಗೆ ಸೋಂಕು ಬಾಧಿಸಿದರೆ ನಂತರ ಅವರನ್ನು ಬದುಕಿಸುವ ಸಾಧ್ಯತೆ ಬಹಳ ಕಡಿಮೆ ಎಂಬ ಮಾತನ್ನು ಕೇರಳದ ವೃದ್ಧ ದಂಪತಿ ಸುಳ್ಳು ಮಾಡಿದ್ದಾರೆ.

93, 88ರ ಇಳಿ ವಯಸ್ಸಿನಲ್ಲಿಯೂ ಈ ವೃದ್ಧ ದಂಪತಿ ಹೋರಾಡಿ ಗೆದ್ದಿದ್ದಾರೆ. ಕೊರೋನಾ ವಿರುದ್ಧ ಹೋರಾಡುತ್ತಿರುವ ಅಷ್ಟೂ ರೋಗಿಗಳಿಗೆ ಮಾದರಿಯಾಗಿದ್ದಾರೆ.
ಕೊರೋನಾ ಸೋಂಕಿತ ಕೇರಳದ 93 ವರ್ಷದ ವೃದ್ಧ ಹಾಗೂ ಅವರ ಪತ್ನಿ ಅವರು ಸಂಪೂರ್ಣ ಗುಣಮುಖರಾಗಿದ್ದಾರೆ ಎಂದು ಕೇರಳ ಆರೋಗ್ಯ ಸಚಿವೆ ಕೆಕೆ ಶೈಲಾಜ ಅವರು ತಿಳಿಸಿದ್ದಾರೆ. ಇಟಲಿಯಿಂದ ಹಿಂದಿರುಗಿದ್ದ ತಮ್ಮ ಮಗ ಹಾಗೂ ಮೊಮ್ಮಗನಿಂದಾಗಿ ಈ ವೃದ್ಧ ದಂಪತಿ ಸೋಂಕಿತರಾಗಿದ್ದರು. ಇದೀಗ ಇಡೀ ಕುಟುಂಬವೇ ಕೊರೋನಾ ಸೋಂಕಿನಿಂದ ಪಾರಾಗಿದೆ.

Tap to resize

Latest Videos

ಈ ಹಿರಿಯ ದಂಪತಿ ಅಕ್ಷರಶಃ ಸಾವಿನಿಂದ ಮರಳಿದ್ದಾರೆ ಎಂದು ಕೇರಳ ಆರೋಗ್ಯ ಸಚಿವಾಲಯ ಹೊರಡಿಸಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇಬ್ಬರಿಗೂ ಸಕ್ಕರೆ ಕಾಯಿಲೆ, ಬಿಪಿ ಹಾಗೂ ಇತರ ವೃದ್ಧಾಪ್ಯದಲ್ಲಿ ಸಾಧಾರಣವಾಗಿ ಕಾಣಿಸಿಕೊಳ್ಳುವ ರೋಗಗಳು ಇತ್ತು ಎನ್ನಲಾಗಿದೆ.

ಡೆಡ್ಲೀ ವೈರಸ್‌ ವಿರುದ್ಧ ಹೋರಾಡಿ ಗೆದ್ದ ಪುಟ್ಟ ರಾಜ್ಯದ ಕಥೆ ಇದು..!

93 ವರ್ಷದ ವೃದ್ಧನಿಗೆ ಕೆಮ್ಮು, ಎದೆ ನೋವು, ಯೂರಿನ್ ಇನ್‌ಫೆಕ್ಷನ್‌ನಂತಹ ಸಮಸ್ಯೆಯೂ ಇತ್ತು. ಅವರನ್ನು ವೆಂಟಿಲೇಟರ್‌ನಲ್ಲಿ ಇಡಲಾಗಿತ್ತು. ಅವರ ಪತ್ನಿಗೂ ಯೂರಿನ್ ಇನ್‌ಫೆಕ್ಷನ್ ಆಗಿತ್ತು. ಗಂಭೀರ ಸ್ಥಿತಿಯಲ್ಲಿದ್ದರೂ ಇದೀಗ ಯಶಸ್ವಿಯಾಗಿ ಸೋಂಕಿನಿಂದ ಪಾರಾಗಿದ್ದಾರೆ. ವೃದ್ಧ ದಂಪತಿಯನ್ನು ಕೊಟ್ಟಾಯಂ ವೈದ್ಯಕೀಯ ಕಾಲೇಜಿನಲ್ಲಿ ದಾಖಲಿಸಲಾಗಿತ್ತು.

ಇಬ್ಬರನ್ನೂ ವಿಐಪಿ ಐಸಿಯುನಲ್ಲಿ ಬೇರೆ ಬೇರೆ ಕೋಣೆಗಳಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇದರಿಂದ ಇಬ್ಬರೂ ಒಬ್ಬರನ್ನೊಬ್ಬರು ನೋಡಲಾಗದೆ ಚಡಪಡಿಸುತ್ತಿದ್ದರು. ನಂತರದಲ್ಲಿ ಇಬ್ಬರನ್ನೂ ಒಂದೇ ಐಸಿಯುಗೆ ಶಿಫ್ಟ್ ಮಾಡಲಾಗಿತ್ತು. ಅವರಿಬ್ಬರೂ ಪರಸ್ಪರ ನೋಡುಂತೆಯೇ ಇಬ್ಬರನ್ನೂ ಮಲಗಿಸಲಾಗಿತ್ತು. 

ಲಾಕ್‌ಡೌನ್: ಹಿಂದೂ ಸಹೋದರನ ಅಂತ್ಯ ಸಂಸ್ಕಾರ ನೆರವೇರಿಸಿದ ಮುಸ್ಲಿಂ ಬಾಂಧವರು!

ಆಹಾರವನ್ನೂ ನಿರಾಕರಿಸುತ್ತಿದ್ದ ವೃದ್ಧ ದಂಪತಿಯನ್ನು ದಾದಿಯರು ಪ್ರೀತಿಯಿಂದ ಉಪಚರಿಸಿದ್ದಾರೆ. ದುರಾದೃಷ್ಟವೆಂದರೆ ವೃದ್ಧ ದಂಪತಿಯನ್ನು ಅತ್ಯಂತ ಆತ್ಮೀಯವಾಗಿ ಉಪಚರಿಸಿದ ಒಬ್ಬ ದಾದಿ ಕೊರೋನಾ ವೈರಸ್ ಸೋಂಕಿತರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಸಂದರ್ಭ ಆರೋಗ್ಯ ಸಚಿವ ಶೈಲಜಾ ನರ್ಸ್‌ಗೆ ಖುದ್ದಾಗಿ ಕರೆ ಮಾಡಿ ಧೈರ್ಯ ಹೇಳಿದ್ದಾರೆ. ಕೇರಳದಲ್ಲಿಈಗಾಗಲೇ 194 ಪ್ರಕರಣಗಳು ಪತ್ತೆಯಾಗಿದೆ.

click me!