ಜಿಲ್ಲಾಸ್ಪತ್ರೆ ಸಿಬ್ಬಂದಿಗೆ ರೇಗಾಡಿದ ಕೊರೋನಾ ಶಂಕಿತ| ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ನಡೆದ ಘಟನೆ|ಆತನ ರಕ್ತ ಮತ್ತು ಗಂಟಲು ದ್ರವವನ್ನು ಸಂಗ್ರಹಿಸಿ ಲ್ಯಾಬ್‌ಗೆ ರವಾನೆ| ಆಸ್ಪತ್ರೆ ವ್ಯವಸ್ಥೆ ಸರಿಯಿಲ್ಲ ಎಂದು ಕಿರಿಕ್ ತೆಗೆದ ವ್ಯಕ್ತಿ|
ಹಾವೇರಿ(ಏ.06): ಕೊರೋನಾ ಶಂಕಿತ ವ್ಯಕ್ತಿಯೊಬ್ಬ ಜಿಲ್ಲಾಸ್ಪತ್ರೆ ಸಿಬ್ಬಂದಿಯೊಂದಿಗೆ ಕಿರಿಕ್ ಮಾಡಿದ್ದಾನೆ. ಇಲ್ಲಿಯ ವ್ಯವಸ್ಥೆ ಸರಿಯಿಲ್ಲ, ಊಟ ಚೆನ್ನಾಗಿಲ್ಲ ಎಂದು ಸಿಬ್ಬಂದಿ ವಿರುದ್ಧ ರೇಗಾಡಿದ ಘಟನೆ ನಡೆದಿದೆ.
ದೆಹಲಿ ಪ್ರವಾಸದಿಂದ ವಾಪಸಾಗಿದ್ದ ಈತನ ತಪಾಸಣೆಗಾಗಿ ರಾಣಿಬೆನ್ನೂರಿನಿಂದ ಇಲ್ಲಿಯ ಜಿಲ್ಲಾಸ್ಪತ್ರೆಗೆ ಶನಿವಾರ ಕರೆತರಲಾಗಿತ್ತು. ಬಳಿಕ ಆತನ ರಕ್ತ ಮತ್ತು ಗಂಟಲು ದ್ರವವನ್ನು ಸಂಗ್ರಹಿಸಿ ಲ್ಯಾಬ್‌ಗೆ ಕಳುಹಿಸಲಾಗಿತ್ತು. ನನಗೆ ಇಷ್ಟು ಬೇಗ ಊಟ ಬೇಡ, ರಾತ್ರಿ 10 ಗಂಟೆಗೆ ಊಟ ಕೊಡಿ ಎಂದಿದ್ದಾನೆ. ಆಸ್ಪತ್ರೆ ವ್ಯವಸ್ಥೆ ಸರಿಯಿಲ್ಲ ಎಂದು ಸಿಬ್ಬಂದಿ ವಿರುದ್ಧ ರೇಗಾಡಿದ್ದಾನೆ. ತನಗೆ ಟೂತ್ ಬ್ರಶ್ ಇದೆ, ಪೇಸ್ಟ್ ತರಿಸಿಕೊಡಿ ಎಂದು ಹಠ ಹಿಡಿದಿದ್ದಾನೆ. ಇದೆಲ್ಲವನ್ನೂ ಸಹಿಸಿಕೊಂಡು ಸಮಾಧಾನಪಡಿಸಿದ ಆಸ್ಪತ್ರೆ ಸಿಬ್ಬಂದಿ ಆತನನ್ನು ಐಸೋಲೇಶನ್ ವಾರ್ಡ್‌ನಲ್ಲಿಟ್ಟು ಆರೋಗ್ಯ ತಪಾಸಣೆ ನಡೆಸಿದ್ದಾರೆ.
ಪತಂಜಲಿ ಆಸ್ಪತ್ರೆಯಲ್ಲಿದ್ದ ಇಬ್ಬರು ಕೊರೋನಾ ಸೋಂಕಿತರು ಬಹುತೇಕ ಗುಣಮುಖ
ಭಾನುವಾರ ಬೆಳಗ್ಗೆ ಲ್ಯಾಬ್ ರಿಪೋರ್ಟ್‌ನಲ್ಲಿ ನೆಗೆಟಿವ್ ಎಂದು ಬಂದ ಹಿನ್ನೆಲೆಯಲ್ಲಿ ಆತನನ್ನು ಆಂಬ್ಯುಲೆನ್ಸ್‌ನಲ್ಲಿ ರಾಣಿಬೆನ್ನೂರಿಗೆ ಬಿಟ್ಟು ಬರುವ ಸಂದರ್ಭದಲ್ಲೂ ಮತ್ತೆ ಕಿರಿಕ್ ಮಾಡಿದ್ದಾರೆ. ನನಗೆ ಪ್ರತ್ಯೇಕ ವಾಹನದ ವ್ಯವಸ್ಥೆ ಮಾಡಬೇಕು ಎಂದು ಹೇಳಿದ್ದಾನೆ. ಅಂತೂ ಆತನನ್ನು ಹೋಂ ಕ್ವಾರಂಟೈನ್‌ಗೆ ಬಿಟ್ಟು ಬರುವ ವೇಳೆಗೆ ಆಸ್ಪತ್ರೆ ಸಿಬ್ಬಂದಿ ಹೈರಾಣಾಗಿದ್ದಾರೆ.