ಕಾರವಾರ ಮೂಲಕ ಭಟ್ಕಳಕ್ಕೆ ತೆರಳಿದ ಕೊರೋನಾ ಪಾಸಿಟಿವ್‌ ಯುವಕ

By Kannadaprabha News  |  First Published Mar 28, 2020, 10:58 AM IST

ಕೊರೋನಾ ಪಾಸಿಟಿವ್‌ ಯುವಕನ ಪ್ರಯಾಣದ ವಿವರ ಲಭ್ಯ| ದುಬೈಯಿಂದ ಗೋವಾ ವಿಮಾನ ನಿಲ್ದಾಣಕ್ಕೆ ಬಂದು ಕಾರವಾರ ಮೂಲಕ ಭಟ್ಕಳಕ್ಕೆ ತೆರಳಿದ ಕೊರೋನಾ ಸೋಂಕಿತ|ದುಬೈ ವಿಮಾನ ನಿಲ್ದಾಣದಿಂದ ಏರ್‌ ಇಂಡಿಯಾ ವಿಮಾನದಲ್ಲಿ ಪ್ರಯಾಣ| 


ಕಾರವಾರ(ಮಾ.28): ಭಟ್ಕಳದಲ್ಲಿ ಶುಕ್ರವಾರ ಕೊರೋನಾ ಪಾಸಿಟಿವ್‌ ಬಂದ 22ರ ಹರೆಯದ ಯುವಕನ ಪ್ರಯಾಣದ ವಿವರ ಲಭ್ಯವಾಗಿದ್ದು, ಆತ ದುಬೈಯಿಂದ ಗೋವಾ ವಿಮಾನ ನಿಲ್ದಾಣಕ್ಕೆ ಬಂದು ಕಾರವಾರ ಮೂಲಕ ಭಟ್ಕಳಕ್ಕೆ ತೆರಳಿದ್ದಾರೆ.

ಮಾ. 19ರಂದು ರಾತ್ರಿ 11 ಗಂಟೆಗೆ ದುಬೈ ವಿಮಾನ ನಿಲ್ದಾಣದಿಂದ ಏರ್‌ ಇಂಡಿಯಾ ವಿಮಾನದಲ್ಲಿ ಹೊರಟಿದ್ದಾರೆ. ಮಾ. 20ರಂದು ನಸುಕಿನ 4.30ಕ್ಕೆ ಗೋವಾದ ದಾಬೋಲಿಂ ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ. ಅಲ್ಲಿಂದ ಖಾಸಗಿ ಟ್ಯಾಕ್ಸಿ ಟೊಯೋಟಾ ಎಟೋಸ್‌ ( ಕೆಎ 20 ಡಿ. 8595)ರಲ್ಲಿ ಪ್ರಯಾಣಿಸಿ ಬೆಳಗ್ಗೆ 6.45ಕ್ಕೆ ಕಾರವಾರಕ್ಕೆ ಬಂದಿದ್ದಾರೆ. ಕಾರವಾರದ ಖಾಸಗಿ ಹೊಟೇಲ್‌ನಲ್ಲಿ ತಿಂಡಿ, ಚಹಾ ಸೇವಿಸಿದ್ದಾರೆ. 

Tap to resize

Latest Videos

ಉತ್ತರ ಕನ್ನಡದಲ್ಲಿ ಇಬ್ಬರು ಸೋಂಕಿತರು; ಭಟ್ಕಳದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ

8.30ಕ್ಕೆ ಕಾರವಾರದಿಂದ ತನ್ನ ಸಹೋದರನೊಂದಿಗೆ ಹೊರಟು ಎಲ್ಲೂ ನಿಲ್ಲದೆ ಭಟ್ಕಳಕ್ಕೆ ತೆರಳಿದ್ದಾರೆ. ಮಧ್ಯಾಹ್ನ 11ಗಂಟೆಗೆ ಮನೆಗೆ ತೆರಳಿದಾಗ ತಾಯಿ ಹಾಗೂ ಸಹೋದರ ಇವರನ್ನು ಸ್ವಾಗತಿಸಿದ್ದಾರೆ. ಮಾ. 23ರ ತನಕ ಮನೆಯಲ್ಲೇ ಇದ್ದು, ಮಾ. 23ರಂದು ಮಧ್ಯಾಹ್ನ 2.30ಕ್ಕೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
 

click me!