ವೈದ್ಯಕೀಯ ಸಿಬ್ಬಂದಿಗೆ ಮನೆ ಓನರ್‌ಗಳ ಕಿರಿಕಿರಿ: ಮಾಲೀಕರಿಗೆ ಸಿಎಂ ಖಡಕ್‌ ಸಂದೇಶ!

By Suvarna NewsFirst Published Mar 26, 2020, 12:52 PM IST
Highlights

ಸಾರ್ವಜನಿಕ ಸೇವೆ ಮಾಡುವವರ ಕರ್ತವ್ಯಕ್ಕೆ ಅಡ್ಡಿಪಡಿಸುವಂತಹ ಗಂಭೀರ ಸ್ವರೂಪದ ಅಪರಾಧ| ಮನೆಗಳ ಮಾಲೀಕರು ಯಾವುದೇ ಕಾರಣಕ್ಕೂ ಮನೆ ಖಾಲಿ ಮಾಡುವಂತೆ ಒತ್ತಾಯಿಸುವಂತಿಲ್ಲ| ಮನೆ ಓನರ್‌ಗಳಿಗೆ ಖಡಕ್ ಸಂದೇಶ ರವಾನಿಸಿದ ಸಿಎಂ| 

ಬೆಂಗಳೂರು(ಮಾ.26): ಮಹಾಮಾರಿ ಕೊರೋನಾ ವೈರಸ್‌ ಸೋಂಕು ಹರಡುವಿಕೆ ತಡೆಗಟ್ಟಲು ಶ್ರಮಿಸುತ್ತಿರುವ ವೈದ್ಯಕೀಯ ಕ್ಷೇತ್ರದ ಸಿಬ್ಬಂದಿಗೆ ತಮ್ಮ ಮನೆಗಳನ್ನು ಖಾಲಿ ಮಾಡಲು ಮನೆ ಮಾಲೀಕರು ಒತ್ತಾಯಿಸುತ್ತಿವಂತಿಲ್ಲ ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಹೇಳಿದ್ದಾರೆ. 

ಈ ಸಂಬಂಧ ಟ್ವೀಟ್‌ ಮಾಡಿರುವ ಅವರು, ಸಾರ್ವಜನಿಕ ಸೇವೆ ಮಾಡುವವರ ಕರ್ತವ್ಯಕ್ಕೆ ಅಡ್ಡಿಪಡಿಸುವಂತಹ ಗಂಭೀರ ಸ್ವರೂಪದ ಅಪರಾಧವಾಗುತ್ತದೆ. ಹೀಗಾಗಿ ಮನೆಗಳ ಮಾಲೀಕರು ಯಾವುದೇ ಕಾರಣಕ್ಕೂ ಮನೆ ಖಾಲಿ ಮಾಡುವಂತೆ ಒತ್ತಾಯಿಸುವಂತಿಲ್ಲ ಎಂದು ಮನೆ ಓನರ್‌ಗಳಿಗೆ ಖಡಕ್ ಸಂದೇಶ ರವಾನಿಸಿದ್ದಾರೆ. 

ಕೊರೋನಾ ಭೀತಿ: ಡಾಕ್ಟರ್‌ಗಳಿಗೆ ಜಾಗವಿಲ್ಲ, ಮನೆ ಓನರ್‌ಗಳ ಕಿರಿಕ್!

 

ಸೋಂಕು ಹರಡುವಿಕೆ ತಡೆಗಟ್ಟಲು ಶ್ರಮಿಸುತ್ತಿರುವ ವೈದ್ಯಕೀಯ ಕ್ಷೇತ್ರದ ಸಿಬ್ಬಂದಿಗೆ ತಮ್ಮ ಮನೆಗಳನ್ನು ಖಾಲಿ ಮಾಡಲು ಒತ್ತಾಯಿಸುವುದು ಸಾರ್ವಜನಿಕ ಸೇವೆ ಮಾಡುವವರ ಕರ್ತವ್ಯಕ್ಕೆ ಅಡ್ಡಿಪಡಿಸುವಂತಹ ಗಂಭೀರ ಸ್ವರೂಪದ ಅಪರಾಧವಾಗುತ್ತದೆ.
ಮನೆಗಳ ಮಾಲೀಕರು ಯಾವುದೇ ಕಾರಣಕ್ಕೂ ಮನೆ ಖಾಲಿ ಮಾಡುವಂತೆ ಒತ್ತಾಯಿಸುವಂತಿಲ್ಲ. pic.twitter.com/b3vShOCPjy

— CM of Karnataka (@CMofKarnataka)

ವೈದ್ಯಕೀಯ ಕ್ಷೇತ್ರದ ಸಿಬ್ಬಂದಿಗಳಿಗೆ ನಮ್ಮ ಮನೆಗಳಲ್ಲಿ ಜಾಗ ನೀಡೋದಿಲ್ಲ ಹೀಗಾಗಿ ಮನೆಗಳನ್ನ ಖಾಲಿ ಮಾಡಿ ಎಂದು ಮನೆ ಮಾಲೀಕರು ಒತ್ತಾಯ ಮಾಡಿದ್ದರು. ಈ ಸಂಬಂಧ ವೈದ್ಯಕೀಯ ಕ್ಷೇತ್ರದ ಸಿಬ್ಬಂದಿಗಳು ಸರ್ಕಾರಕ್ಕೆ ದೂರೊಂದನ್ನ ನೀಡಿದ್ದರು. ದೂರಿಗೆ ಸ್ಪಂದಿಸಿದ ಸಿಎಂ ಯಡಿಯೂರಪ್ಪ ಮನೆ ಖಾಲಿ ಮಾಡುವಂತೆ ಒತ್ತಾಯ ಮಾಡುತ್ತಿರುವ ಮನೆ ಮಾಲೀಕರಿಗೆ ಎಚ್ಚರಿಕೆ ಸಂದೇಶ ನೀಡಿದ್ದಾರೆ. 

click me!