ಬಡ ಕುಟುಂಬಕ್ಕೆ ಆಹಾರ ಕಿಟ್ ವಿತರಿಸಿದ ವ್ಯಾಪಾರಾಸ್ಥ| ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಪಟ್ಟಣದಲ್ಲಿ ಆಹಾರ ಕಿಟ್ ವಿತರಣೆ| ಬಡಜನರಿಗೆ ಜನಪ್ರತಿನಿಧಿಗಳು, ಶ್ರೀಮಂತರು ನೆರವು ನೀಡಬೇಕು ಎಂದು ಆಗ್ರಹಿಸಿದ ವ್ಯಾಪಾರಸ್ಥ|
ಬಾಗಲಕೋಟೆ(ಮಾ.26): ಭಾರತ ಲಾಕ್‌ಡೌನ್ ಆದ ಹಿನ್ನೆಲೆಯಲ್ಲಿ ವ್ಯಾಪಾರಸ್ಥನೊಬ್ಬ ಬಡ ಕುಟುಂಬಕ್ಕೆ ಆಹಾರ ಕಿಟ್ ನೀಡುವ ಮೂಲಕ ಮಾನವೀಯತೆ ಮರೆದಿದ್ದಾನೆ. ಎಂಟು ದಿನಕ್ಕೆ ಆಗುವಷ್ಟು ರೇಷನ್ ನೀಡಿ ಸಹಾಯ ಹಸ್ತ ಚಾಚಿದ್ದಾನೆ.
ಜಿಲ್ಲೆಯ ಬಾದಾಮಿಯ ಕಟ್ಟಿಗೆ ವ್ಯಾಪಾರಸ್ಥ ಟೋಪೆಶ್ ಬಾದಾಮಿ ಎಂಬುವರು ಕೆರೂರು ಪಟ್ಟಣದ ಹೊಸಪೇಟೆ ಸುಣಗಾರ ಬಡಾವಣೆಯಲ್ಲಿ ರೇಷನ್ ಹಂಚಿಕೆ ಮಾಡಿದ್ದಾರೆ. ಎಂಟು ದಿನಕ್ಕೆ ಆಗುವಷ್ಟು ಒಂದೊಂದು ಕಿಟ್ ಅನ್ನು 40 ಬಡ ಕುಟುಂಬಗಳಿಗೆ ಹಂಚಿದ್ದಾರೆ.
ಕರ್ತವ್ಯ ನಿರತ ಪೊಲೀಸರಿಗೆ ಊಟದ ವ್ಯವಸ್ಥೆ: ಮಾನವೀಯತೆ ಮೆರೆದ ಯುವಕರು
10 ಕೆಜೆ ಅಕ್ಕಿ, ರವೆ, ಹಿಟ್ಟು,ಸಕ್ಕರೆ,ಉಪ್ಪು,ಜೀರಿಗೆ,ಸಾಸಿವೆ,ಎಣ್ಣೆ, ಮಾಸ್ಕ್ ಒಳಗೊಂಡ ಆಹಾರ ಕಿಟ್ ಅನ್ನು ಮನೆ ಮನೆಗೆ ತೆರಳಿ ಬಡ ಕುಟುಂಬಕ್ಕೆ ವಿತರಣೆ ಮಾಡಿದ್ದಾರೆ. ಟೋಪೆಶ್ ಅವರಿಗೆ ಬಾದಾಮಿಗೆ ಸ್ಥಳೀಯರೂ ಕೂಡ ಸಾಥ್ ನೀಡಿದ್ದಾರೆ.
ಈ ವೇಳೆ ಮಾತನಾಡಿದ ಟೋಪೆಶ್ ಅವರು, ಈ ಸಂದರ್ಭದಲ್ಲಿ ಬಡಜನರಿಗೆ ಜನಪ್ರತಿನಿಧಿಗಳು, ಶ್ರೀಮಂತರು ನೆರವು ನೀಡಬೇಕು ಎಂದು ಆಗ್ರಹಿಸಿದ್ದಾರೆ.