ಲಾಕ್‌ಡೌನ್‌: ತಪ್ಪಿಸಿಕೊಳ್ಳಲು ಹೋಗಿ ಪೇದೆ ಮೇಲೆಯೇ ಬೈಕ್‌ ಹರಿಸಿ ಪರಾರಿ!

Kannadaprabha News   | Asianet News
Published : Apr 05, 2020, 12:27 PM IST
ಲಾಕ್‌ಡೌನ್‌: ತಪ್ಪಿಸಿಕೊಳ್ಳಲು ಹೋಗಿ ಪೇದೆ ಮೇಲೆಯೇ ಬೈಕ್‌ ಹರಿಸಿ ಪರಾರಿ!

ಸಾರಾಂಶ

ನಿಯಂತ್ರಿಸಲು ಬಂದ ಪೊಲೀಸ್‌ ಪೇದೆಯ ಮೇಲೆಯೇ ಬೈಕ್‌ ಹರಿಸಿದ ವ್ಯಕ್ತಿ| ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ನಡೆದ ಘಟನೆ| ಕೆಎಸ್‌ಆರ್‌ಪಿ ಪೇದೆ ಸುನೀಲ ಚಂದರಗಿ ಗಾಯಗೊಂಡ ಪೇದೆ| ಬೈಕ್‌ ಸವಾರನ ವಿರುದ್ಧ ಪ್ರಕರಣ ದಾಖಲು| 

ಅಥಣಿ(ಏ.05): ಲಾಕ್‌ಡೌನ್‌ ವೇಳೆ ಬೇಕಾಬಿಟ್ಟಿ ತಿರುಗಾಡುವ ಬೈಕ್‌ ಸವಾರರನ್ನು ನಿಯಂತ್ರಿಸಲು ರಸ್ತೆಗೆ ಇಳಿದಿದ್ದ ಪೊಲೀಸ್‌ ಪೇದೆಯ ಮೇಲೆಯೇ ಬೈಕ್‌ ಸವಾರನೊಬ್ಬ ಹರಿಸಿದ ಪರಿಣಾಮ ಪೇದೆಯ ಕಾಲಿಗೆ ಗಂಭೀರ ಗಾಯವಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಶನಿವಾರ ನಡೆದಿದೆ.

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆಎಸ್‌ಆರ್‌ಪಿ ಪೇದೆ ಸುನೀಲ ಚಂದರಗಿ (26) ಎಂಬವರು ಬೈಕ್‌ ಸವಾರನನ್ನು ತಡೆಯುತ್ತಿದ್ದಂತೆ ಬೈಕ್‌ ಸವಾರ ತಪ್ಪಿಸಿಕೊಳ್ಳಲು ಪೊಲೀಸ್‌ ಪೇದೆ ಕಾಲಿನ ಮೇಲೆ ಬೈಕ್‌ ಹಾಯಿಸಿಕೊಂಡು ಪರಾರಿಯಾಗಿದ್ದಾನೆ. 

ಪ್ರಾಣವನ್ನೇ ಪಣಕ್ಕಿಟ್ಟು ಕೊರೋನಾ ವಿರುದ್ಧ ಹೋರಾಟ: ಆಶಾ ಕಾರ್ಯಕರ್ತೆಯರಿಗೆ ಹೂಮಳೆ ಸ್ವಾಗತ 

ಕಾಲಿಗೆ ತೀವ್ರ ಗಾಯವಾಗಿರುವ ಪೊಲೀಸ್‌ ಪೇದೆ ಅಥಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪರಾರಿಯಾದ ಬೈಕ್‌ ಸವಾರನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
 

PREV
click me!

Recommended Stories

ವೈರಸ್‌ ಕಾಟ: ಕೊರೋನಾ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ, ಸಚಿವ ಪಾಟೀಲ್‌
ಮತ್ತೆ ಕೊರೋನಾರ್ಭಟ: ಪೂಲಿಂಗ್ ಟೆಸ್ಟ್ ಮೊರೆಹೋದ ಆರೋಗ್ಯ ಇಲಾಖೆ, ಏನಿದು ಹೊಸ ಪರೀಕ್ಷೆ?