ಕಂಡ ಕಂಡಲ್ಲಿ ಉಗಿಯುತ್ತಿದ್ದ ವ್ಯಕ್ತಿ: ಬಿಹಾರ ಮೂಲದ ವ್ಯಕ್ತಿ ಹೋಂ ಕ್ವಾರಂಟೈನ್‌ಗೆ

By Kannadaprabha News  |  First Published Apr 8, 2020, 8:56 AM IST

ಕೊರೋನಾ ವೈರಸ್‌ ಸೋಂಕು ಇರುವ ಶಂಕೆ| ಬಿಹಾರ ಮೂಲದ ವ್ಯಕ್ತಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು| ಈತನ ವರ್ತನೆಯಿಂದ ಭೀತಿಗೊಂಡ ಆರೋಗ್ಯ ಸಿಬ್ಬಂದಿ| 


ಬಳ್ಳಾರಿ(ಏ.08): ನಗರದ ರಥಬೀದಿಯಲ್ಲಿ ಕಂಡು ಬಂದ ಬಿಹಾರ ಮೂಲದ ವ್ಯಕ್ತಿಯನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ.

ಸುಮಾರು 28 ವರ್ಷದ ಈತ ಹಿಂದಿಯಲ್ಲಿ ಮಾತನಾಡುತ್ತಿದ್ದು, ಬಿಹಾರ ಮೂಲದವನು ಎಂದು ತಿಳಿದು ಬಂದಿದೆ. ಈತನಿಗೆ ಕೊರೋನಾ ವೈರಸ್‌ ಸೋಂಕು ಇರಬಹುದು ಎಂದು ಸಾರ್ವಜನಿಕರು ಈತ ನಗರದಲ್ಲಿ ಓಡಾಡುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. 

Tap to resize

Latest Videos

ಕೊರೋನಾ ಆತಂಕ: ವಾಹನಕ್ಕೆ ಮುಗಿಬಿದ್ದು ಆಹಾರಧಾನ್ಯ ಹೊತ್ತೊಯ್ದ ಜನ!

ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಈತನನ್ನು ಹೊತ್ತೊಯ್ದು ಮಯೂರ ಹೋಟೆಲ್‌ನ ಹೋಂ ಕ್ವಾರಂಟೈನ್‌ಗೆ ಇರಿಸಿದ್ದಾರೆ. ಸರಿಯಾದ ಮಾಹಿತಿ ನೀಡದ ಈತ ಕಂಡ ಕಂಡಲ್ಲಿ ಉಗಿಯುತ್ತಿದ್ದಾನೆ ಎಂದು ತಿಳಿದು ಬಂದಿದ್ದು, ಇದರಿಂದ ಆರೋಗ್ಯ ಸಿಬ್ಬಂದಿ ಭೀತಿಗೊಂಡಿದ್ದಾರೆ. ಈತನಿಗೆ ಆರೋಗ್ಯ ತಪಾಸಣೆ ಕಾರ್ಯ ನಡೆದಿದೆ.
 

click me!