ಚೀನಾದಲ್ಲಿ ಹುಟ್ಟಿಕೊಂಡು ಈ ಮಾಹಾಮಾರಿ ಕೊರೋನಾ ವೈರಸ್ ಈಗ ದೇಶ ಮಾತ್ರವಲ್ಲದೇ, ಕರ್ನಾಟಕಕ್ಕೂ ಕಾಲಿಟ್ಟಿದ್ದು, ಜಿಲ್ಲೆ-ಜಿಲ್ಲೆಗಳಲ್ಲಿ ವ್ಯಾಪಿಸುತ್ತಿದೆ. ಈಗ ಗಣಿನಾಡಿಗೆ ಕಾಲಿಟ್ಟಿದೆ.
ಬಳ್ಳಾರಿ, (ಮಾ.30): ಗಣಿನಾಡು ಬಳ್ಳಾರಿಗೆ ಡೆಡ್ಲಿ ಕೊರೋನಾ ವೈರಸ್ ವ್ಯಾಪಿಸಿದ್ದು, ಒಂದೇ ಕುಟುಂಬದ ಮೂವರಿಗೆ ಕೊರೋನಾ ಸೋಂಕು ತಗುಲಿರುವುದು ದೃಢವಾಗಿದೆ.
ಕರ್ನಾಟಕದಲ್ಲಿ ಹೈ ರಿಸ್ಕ್ ಇರುವ ಜಿಲ್ಲೆಗಳ ಪಟ್ಟಿ, ಆತಂಕ ನಿಜಕ್ಕೂ ಇದೆ!
ಈ ಬಗ್ಗೆ ಸ್ವತಃ ಆರೋಗ್ಯ ಸಚಿವ ಬಿ.ಶ್ರೀರಾಮುಲು ಟ್ವೀಟ್ ಮೂಲಕ ಖಚಿತಪಡಿಸಿದ್ದಾರೆ. ಅಲ್ಲದೇ ಈ ಬಗ್ಗೆ ಬಳ್ಳಾರಿ ಜಿಲ್ಲಾಧಿಕಾರಿ SS ನಕುಲ್ ಮಾಹಿತಿ ನೀಡಿದ್ದಾರೆ.
ಇಂದು ಹೊಸಪೇಟೆಯಲ್ಲಿ ಒಂದೇ ಕುಟುಂಬದ ಮೂವರಿಗೆ ಸೋಂಕು ಖಚಿತವಾಗಿದ್ದು, ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 91ಕ್ಕೆ ಏರಿದೆ. ಇವರನ್ನು ಈಗಾಗಲೇ ಪ್ರತ್ಯೇಕಿಸಲ್ಪಟ್ಟ ಕೇಂದ್ರದಲ್ಲಿ ದಾಖಲಿಸಲಾಗಿದೆ.
— B Sriramulu (@sriramulubjp)ಬಳ್ಳಾರಿ ಜಿಲ್ಲೆಯ ಹೊಸಪೇಟೆ ಒಂದೇ ಕುಟುಂಬದ ಮೂವರಿಗೆ ಕೊರೋನಾ ಸೋಂಕು ಇರುವುದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಐಸೋಲೇಶನ್ ವಾರ್ಡ್‌ಗೆ ಶಿಫ್ಟ್ ಮಾಡಲಾಗಿದೆ ಎಂದು ನಕುಲ್ ತಿಳಿಸಿದರು.
ಹೊಸಪೇಟೆಯ ರಾಮಾ ಟಾಕೀಸ್ ಹಿಂಭಾಗದಲ್ಲಿರುವ ಎಸ್.ಆರ್.ನಗರದ ನಿವಾಸಿಗಳು. ಇವರು ಜಿಂದಾಲ್ ಹೊರಗುತ್ತಿಗೆ ನೌಕರರಾಗಿದ್ದು, ವಿದೇಶಕ್ಕೆ ಹೋಗಿ ಬಂದಿದ್ದರು.
ಇದೀಗ ಎಸ್.ಆರ್.ನಗರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಯಾರು ಸೋಂಕಿತರ ನಿವಾಸದ ಬಳಿ ಹೋಗದಂತೆ ಸೂಚಿಸಲಾಗಿದ್ದು, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ನಗರಸಭೆಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಈ ಮೂರು ಕೇಸ್ ಮೂಲಕ ಕರ್ನಾಟಕದಲ್ಲಿ ಸೊಂಕಿತರ ಸಂಖ್ಯೆ 91ಕ್ಕೆ ಏರಿಕೆಯಾದಂತಾಗಿದೆ. ಇನ್ನಾದರೂ ಜನರು ಎಚ್ಚೆತ್ತುಕೊಳ್ಳದಿದ್ದರೆ ಗ್ರಾಮಗಳಿಗೆ ಸೊಂಕು ಹರುಡುವುದರಲ್ಲಿ ಅನುಮಾನವಿಲ್ಲ.
ಒಂದು ವೇಳೆ ಹಳ್ಳಿಗಳಿಗೆ ವ್ಯಾಪಿಸಿದರೆ, ಮಾರಿಯನ್ನು ತಡೆಗಟ್ಟುವುದು ಕಷ್ಟ ಸಾಧ್ಯ. ಈ ಹಿನ್ನೆಲೆಯನ್ನು ದಯವಿಟ್ಟು ಏಪ್ರಿಲ್ 14ರ ವರೆಗೆ ಹೊರಗಡೆ ಬರದೇ ಸೇಫ್ ಆಗಿ ಮನೆಯಲ್ಲಿರುವುದು ನಿಮಗೂ ಒಳಿತು. ನಮ್ಮ ದೇಶಕ್ಕೆ ಮಾತ್ರವಲ್ಲ ನಮ್ಮ ಊರಿಗೂ ಒಳ್ಳೆಯದು.