ಜಿಲ್ಲೆಯಲ್ಲಿ ಇದುವರೆಗೆ ಕೊರೋನಾ ವೈರಸ್ ಸೊಂಕಿತರು ಪತ್ತೆಯಾಗಿಲ್ಲ. ಆದರೆ ಶಂಕಿತರ ಸಂಖ್ಯೆ ಮಾತ್ರ ದಿನದಿಂದ ದಿನಕ್ಕೆ ಏರುತ್ತಿದೆ. ಮಂಗಳವಾರ ಒಂದೇ ದಿನ 25 ಮಂದಿ ಕೊರೋನಾ ವೈರಸ್ ಶಂಕಿತ ಸೋಂಕಿತರನ್ನು ಆಸ್ಪತ್ರೆಗಳಿಗೆ ದಾಖಲಿಸಿಕೊಳ್ಳಲಾಗಿದೆ.
ಉಡುಪಿ(ಮಾ.25): ಜಿಲ್ಲೆಯಲ್ಲಿ ಇದುವರೆಗೆ ಕೊರೋನಾ ವೈರಸ್ ಸೊಂಕಿತರು ಪತ್ತೆಯಾಗಿಲ್ಲ. ಆದರೆ ಶಂಕಿತರ ಸಂಖ್ಯೆ ಮಾತ್ರ ದಿನದಿಂದ ದಿನಕ್ಕೆ ಏರುತ್ತಿದೆ. ಮಂಗಳವಾರ ಒಂದೇ ದಿನ 25 ಮಂದಿ ಕೊರೋನಾ ವೈರಸ್ ಶಂಕಿತ ಸೋಂಕಿತರನ್ನು ಆಸ್ಪತ್ರೆಗಳಿಗೆ ದಾಖಲಿಸಿಕೊಳ್ಳಲಾಗಿದೆ.
ಕುಂದಾಪುರದಲ್ಲಿ 6 ಮಂದಿ, ಕಾರ್ಕಳದಿಂದ 3 ಮಂದಿ, 12 ಮಂದಿ ಉಡುಪಿ ತಾಲೂಕು ನಿವಾಸಿಗಳಾಗಿದ್ದರೇ, 4 ಮಂದಿ ಹೊರಜಿಲ್ಲೆಯವರಾಗಿದ್ದಾರೆ. ಅವರಲ್ಲಿ 10 ಮಂದಿ ವಿದೇಶದಿಂದ ಭಾರತಕ್ಕೆ ಮರಳಿದವರಾಗಿದ್ದು, ಇಬ್ಬರು ಕೊರೋನಾ ಸೋಂಕಿತರೊಂದಿಗೆ ಸಂಪರ್ಕದಲ್ಲಿದ್ದವರು ಮತ್ತು ಉಳಿದ 13 ಮಂದಿ ಜ್ವರ, ಶೀತ, ಕೆಮ್ಮು, ಎದೆನೋವು ಇತ್ಯಾದಿಗಳಿರುವವರಾಗಿದ್ದಾರೆ.
undefined
ವ್ಯಾಪಾರಿಗಳ ದರ ಏರಿಕೆ ನಾಟಕ ನಿಲ್ಲಿಸಿದ ಡಿಸಿ..!
ಇದರಿಂದ ಜಿಲ್ಲೆಯಲ್ಲಿ ಇದುವರೆಗೆ 76 ಮಂದಿ ಶಂಕಿತರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಲ್ಲಿ 51 ಮಂದಿಯ ವೈದ್ಯಕೀಯ ಪರೀಕ್ಷೆಯ ವರದಿಗಳು ಬಂದಿದ್ದು, ಎಲ್ಲವೂ ನೆಗೆಟಿವ್ ಆಗಿವೆ. ಬುಧವಾರ ದಾಖಲಾದ 25 ಮಂದಿಯ ಗಂಟಲ ದ್ರವವನ್ನು ಶಿವಮೊಗ್ಗ ವೈದ್ಯಕೀಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಇದುವರೆಗೆ ದಾಖಲಾದವರಲ್ಲಿ 48 ಮಂದಿ ಜಿಲ್ಲೆಯ ವಿವಿಧ ಖಾಸಗಿ-ಸರ್ಕಾರಿ ಆಸ್ಪತ್ರೆಗಳ ಐಸೊಲೆಟೇಡ್ ವಾರ್ಡ್‌ಗಳಲ್ಲಿ ತೀವ್ರ ನಿಗಾದಲ್ಲಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 905 ಮಂದಿ ವಿದೇಶದಿಂದ ಹಿಂತಿರುಗಿದವರನ್ನು ಗುರುತಿಸಲಾಗಿದ್ದು, ಅವರೆಲ್ಲರಿಗೂ ಕಡ್ಡಾಯ ಹೋಮ್ ಕ್ವಾರಂಟೈನ್ ವಿಧಿಸಲಾಗಿದೆ. ಅವರಲ್ಲಿ 285 ಮಂದಿ 28 ದಿನಗಳ ಹೋಂ ಕ್ವಾರಂಟೈನ್ ಮುಗಿಸಿದ್ದಾರೆ.