SBI ಬ್ಯಾಂಕ್ ಶಾಖೆಗಳ ಟೈಮಿಂಗ್ಸ್ ಬದಲಾವಣೆ

By Suvarna NewsFirst Published Mar 27, 2020, 11:41 AM IST
Highlights

ಸೋಷಿಯಲ್ ಡಿಸ್ಟೆನ್ಸಿಂಗ್ ನೋಡಿಕೊಳ್ಳಲು ಎಸ್‌ಬಿಐ ತನ್ನ ಶಾಖೆಗಳ ಸಮಯ ಬದಲಾವಣೆ ಮಾಡಿದೆ. ಜನರು ಗುಂಪು ಗೂಡುವುದನ್ನು ತಪ್ಪಿಸಲು ಬ್ಯಾಂಕ್‌ ವರ್ಕಿಂಗ್ ಹವರ್‌ಗಳಲ್ಲಿ ಬದಲಾವಣೆ ಮಾಡಲಾಗಿದೆ.

ನವದೆಹಲಿ(ಮಾ.27): ಸೋಷಿಯಲ್ ಡಿಸ್ಟೆನ್ಸಿಂಗ್ ನೋಡಿಕೊಳ್ಳಲು ಎಸ್‌ಬಿಐ ತನ್ನ ಶಾಖೆಗಳ ಸಮಯ ಬದಲಾವಣೆ ಮಾಡಿದೆ. ಜನರು ಗುಂಪು ಗೂಡುವುದನ್ನು ತಪ್ಪಿಸಲು ಬ್ಯಾಂಕ್‌ ವರ್ಕಿಂಗ್ ಹವರ್‌ಗಳಲ್ಲಿ ಬದಲಾವಣೆ ಮಾಡಲಾಗಿದೆ.

ಬ್ಯಾಂಕ್ ಓಪನ್ ಮಾಡುವ ಸಮಯದಲ್ಲಿ ಬದಲಾವಣೆ ಮಾಡಲಾಗಿದ್ದು, ಕೆಲವು ರಾಜ್ಯಗಳಲ್ಲಿ ಬೆಳಗ್ಗೆ 7ರಿಂದ 10 ಗಂಟೆ, ಇನ್ನು ಕೆಲವು ರಾಜ್ಯಗಳಲ್ಲಿ 8ರಿಂದ 11 ಗಂಟೆ ಇನ್ನೂ ಕೆಲವು ರಾಜ್ಯಗಳಲ್ಲಿ 10ರಿಂದ 2 ಗಂಟೆಯವರೆಗೆ ಬ್ಯಾಂಕ್ ಟೈಮಿಂಗ್ಸ್ ಬದಲಾಗಿದೆ ಎಂದು ಎಸ್‌ಬಿಐ ರೀಟೆಲ್‌ ಬ್ಯಾಂಕಿಂಗ್ ವ್ಯವಸ್ಥಾಪಕ ನಿರ್ದೇಶಕ ಪಿಕೆ ಗುಪ್ತಾ ತಿಳಿಸಿದ್ದಾರೆ.

ಸೀಫುಡ್ ಪ್ರಿಯರಿಗೆ ಸ್ಯಾಡ್ ನ್ಯೂಸ್: ಮೂರ್ನಾಲ್ಕು ತಿಂಗಳು ಮೀನು ಸಿಗೋದು ಕಷ್ಟ

ಅದರೊಂದಿಗೆ ನೌಕರರಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್‌ಗಳನ್ನು ಒದಗಿಸಲಾಗಿದೆ. ಬ್ಯಾಂಕ್‌ ಸಾಲಿನಲ್ಲಿಯೂ 1 ಮೀಟರ್ ಅಂತರ ಕಾಯ್ದುಕೊಳ್ಳಲು ನಿರ್ದೇಶಿಸಲಾಗಿದೆ. ನೌಕರರಿಗೆ ಬದಲಿ ದಿನಗಳಲ್ಲಿ ಕೆಲಸ ಮಾಡಲು ಅವಕಾಶ ನೀಡಲಾಗಿದೆ. ಜನ ಹಣ ಡ್ರಾ ಮಾಡಲು ಎಟಿಎಂಗೆ ಬರುವುದನ್ನು ತಪ್ಪಿಸಲು ಮೊಬೈಲ್‌ ಎಟಿಎಂ ಸೇವೆಯನ್ನೂ ಒದಗಿಸಲಾಗಿದೆ. ಹಣ ಡ್ರಾ ಮಾಡುವಾಗ ಅನುಸರಿಸಬೇಕಾದ 7 ಟಿಪ್ಸ್‌ಗಳನ್ನು ಬ್ಯಾಂಕ್ ಗ್ರಾಹಕರಿಗೆ ತಿಳಿಸಿದೆ. 

71 ವರ್ಷದ ತಂದೆ ನೆನೆದು ಕಣ್ಣೀರಿಟ್ಟ ನಟಿ; ಇದಕ್ಕೆಲ್ಲಾ ಕೊರೋನಾನೇ ಕಾರಣ!

ಎಚ್‌ಡಿ ಎಫ್‌ಸಿ, ಐಸಿಐಸಿಐ, ಸಿಂಡಿಕೇಟ್ ಬ್ಯಾಂಕ್, ಇಂಡಿಯನ್ ಬ್ಯಾಂಕ್‌ಗಳ ಸಮಯವನ್ನು ಬದಲಾಯಿಸಲಾಗಿದೆ. ಹಾಗೆಯೇ ಕನಿಷ್ಠ ಪ್ರಾಮುಖ್ಯೆ ಉಳ್ಳಂತಹ ಬ್ಯಾಂಕಿಂಗ್ ಸೇವೆಗಳನ್ನೂ ರದ್ದುಗೊಳಿಸಲಾಗಿದೆ. ಪಾಸ್‌ಬುಕ್ ಅಪ್‌ಡೇಟ್‌, ಕೌಂಟರ್ ಚೆಕ್ ಕಲೆಕ್ಷನ್‌ನಂತಹ ಸೇವೆಗಳನ್ನು ಬ್ಯಾಂಕ್‌ಗಳನ್ನು ನೀಡುತ್ತಿಲ್ಲ. ಎಲ್ಲ ಬ್ಯಾಂಕಿಂಗ್‌ ಸೇವೆಗಳಿಗಾಗಿ ಆದಷ್ಟು ಮಟ್ಟಿಗೆ ಆನ್‌ಲೈನ್‌ ಸೇವೆ ಬಳಸಬೇಕಾಗಿ ಬ್ಯಾಂಕ್‌ಗಳು ಗ್ರಾಹಕರಿಗೆ ಸೂಚನೆ ನೀಡಿದೆ. 

click me!