ಜಮಾತ್ ಖಾಲಿ ಮಾಡಿಸಲು ರಾತ್ರೋ ರಾತ್ರಿ ಮಸೀದಿ ಆವರಣ ತಲುಪಿದ್ದ ಧೋವಲ್!

Published : Apr 01, 2020, 01:12 PM ISTUpdated : Apr 01, 2020, 01:19 PM IST
ಜಮಾತ್ ಖಾಲಿ ಮಾಡಿಸಲು ರಾತ್ರೋ ರಾತ್ರಿ ಮಸೀದಿ ಆವರಣ ತಲುಪಿದ್ದ ಧೋವಲ್!

ಸಾರಾಂಶ

ಧಾರ್ಮಿಕ ಸಭೆಯಲ್ಲಿ ಕೊರೋನಾ ಪೀಡಿತರು| ಸಬ್ಲೀಗೀ ಜಮಾತ್‌ನಲ್ಲಿ ಪಾಲ್ಗೊಳ್ಳಲು ದೇಶ ವಿದೇಶದಿಂದ ಆಗಮಿಸಿದ ಸಾವಿರಾರು ಮಂದಿ| ಲಾಕ್‌ಡೌನ್ ಇದ್ದರೂ ಸಭೆ ನಿಲ್ಲಿಸಲು ನಕಾರ| ಮೌಲಾನಾರ ಮನವೊಲಿಸುವಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಯಶಸ್ವಿ

ನವದದೆಹಲಿ(ಏ.01): ಜನರಿಂದ ತುಂಬಿದ್ದ ದೆಹಲಿಯ ನಿಜಾಮುದ್ದೀನ್ ಬಳಿ ಇರುವ ಮರ್ಕಜ್‌ ಖಾಲಿ ಮಾಡಿಸುವ ಪ್ರಕ್ರಿಯೆ ಬಹಳ ಕಷ್ಟದಾಯಕವಾಗಿತ್ತು. ಸರ್ಕಾರದ ಮನವಿ ಹಾಗೂ ಪೊಲೀಸರ ಎಚ್ಚರಿಕೆ ಬಳಿಕವೂ ಜನರು ಹಠಕ್ಕೆ ಬಿದ್ದಿದ್ದರು.  ಹೀಗಿರುವಾಗ ಅವರನ್ನು ಸಮಾಧಾನಪಡಿಸಲು ರಾತ್ರೋ ರಾತ್ರಿ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅಲ್ಲಿಗೆ ತೆರಳಿದ್ದರೆಂಬ ಮಾಹಿತಿ ಲಭ್ಯವಾಗಿದೆ. 

ಹೌದು ಮಸೀದಿಯ ಮೌಲ್ವಿ ದೆಹಲಿ ಪೊಲೀಸ್ ಹಾಗೂ ಭದ್ರತಾ ಏಜೆನ್ಸಿಗಳ ಮನವಿಯನ್ನು ತಳ್ಳಿ ಹಾಕಿದ್ದರು. ಹೀಗಿರುವಾಗ ಗೃಹ ಅಚಿವ ಅಮಿತ್ ಶಾ ರಾಷ್ಟ್ರೀಯ ಭದದ್ರತಾ ಸಲಹೆಗಾರ ಅಜಿತ್ ಧೋವಲ್‌ ಬಳಿ ಮಸೀದಿ ಖಾಲಿ ಮಾಡುವಂತೆ ಜಮಾತ್ ಬಳಿ ಮನವಿ ಮಾಡುವಂತೆ ಕೇಳಿಕೊಂಡಿದ್ದಾರೆ.

ದೆಹಲಿ ಮಸೀದಿಯಿಂದ ಕೊರೋನಾ: ನಿಷೇಧದ ನಡುವೆಯೂ 15 ದಿನ ಧರ್ಮಸಭೆ!

ರಾತ್ರಿ ಎರಡು ಗಂಟೆ ಮರ್ಕಜ್ ತಲುಪಿದ್ದ ಧೋವಲ್

ಹಿಂದೂಸ್ತಾನ್ ಟೈಮ್ಸ್ ವರದಿಯನ್ವಯ ಗೃಹ ಸಚಿವರ ಮನವಿ ಮೇರೆಗೆ ಧೋವಲ್ ಮಾರ್ಚ್ 29 ರಂದು ರಾತ್ರಿ ಎರಡು ಗಂಟೆಗೆ ಮರ್ಕಜ್ ತಲುಪಿದ್ದರು. ಬಳಿಕ ಮೌಲಾನಾ ಸಾದ್‌ರನ್ನು ಭೇಟಿಯಾದ ಅಜಿತ್ ಧೋವಲ್ ಮಸೀದಿ ಖಾಲಿ ಮಾಡಿಸುವಂತೆ ಕೋರಿ, ಪರಿಸ್ಥಿತಿಯನ್ನು ಅರ್ಥವಾಗುವಂತೆ ವಿವರಿಸಿದ್ದರು. ಅಲ್ಲದೇ ಅಲ್ಲಿರುವ ಜನರಿಗೆ ಕೊರೋನಾ ಟೆಸ್ಟ್ ಹಾಗೂ ಕ್ವಾರಂಟೈನ್‌ನಲ್ಲಿ ಇರಿಸಲು ಮನವೊಲಿಸಿದ್ದರು. ಧೋವಲ್‌ರಿಗೆ ಪರಿಸ್ಥಿತಿಯ ಗಂಭೀರತೆ ಅರಿವಾಗಿತ್ತು ಯಾಕೆಂದರೆ ಭದ್ರತಾ ಪಡೆಗಳು ಕರೀಂನಗರದಲ್ಲಿ ಇಂಡೋನೇಷ್ಯಾದ ಒಂಭತ್ತು ಕೊರೋನಾ ಸೋಂಕಿತರನ್ನು ಪತ್ತೆ ಹಚ್ಚಿತ್ತು.

ದಿಲ್ಲಿ ಮಸೀದಿ ಜಮಾತ್‌: ರಾಜ್ಯದ 9 ಜಿಲ್ಲೆಯಿಂದ 300 ಜನ ಭಾಗಿ!

ಮೌಲಾನಾರ ಮನವೊಲಿಸಿದ ಧೋವಲ್

ಭದ್ರತಾ ಏಜೆನ್ಸಿಗಳು ಮರ್ಕಜ್‌ಗೆ ಆಗಮಿಸಿದವರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿರುವ ಮಾಹಿತಿಇಯನ್ನು ಕೂಡಲೇ ಎಲ್ಲಾ ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆಗೆ ರವಾನಿಸಿದೆ. ಧೋವಲ್‌ ಮಾತುಗಳನ್ನಾಲಿಸಿದ ಮೌಲಾನಾ ಮಾರ್ಚ್ 27, 28 ಹಾಗೂ 29 ರಂದು 167 ತಬ್ಲೀನ್ ಕಾರ್ಮಿಕರನ್ನು ಪರೀಕ್ಷೆಗೊಳಪಪಡಿಸಲು ಸಮ್ಮತಿ ಸೂಚಿಸಿದ್ದಾರೆ. ಧೋವಲ್ ಮುಸಲ್ಮಾನರೊಂದಿಗೆ ತನಗಿದ್ದ ಹಳೆಯ ಸಂಪರ್ಕವನ್ನು ಬಳಸಿ ಇದನ್ನು ಮಾಡುವಲ್ಲಿ ಯಶಸವಿಯಾಗಿದ್ದಾರೆನ್ನಲಾಗಿದೆ.

PREV
click me!

Recommended Stories

ಅಕ್ಷಯ್ ಕುಮಾರ್ ರಾಮಸೇತು ಚಿತ್ರದ 45 ಕಿರಿಯ ಕಲಾವಿದರಿಗೂ ಕೊರೊನಾ ಪಾಸಿಟಿವ್!
ಕೊರೋನಾ ಅಟ್ಟಹಾಸ; 3 ರಾಜ್ಯಗಳಿಗೆ ತಜ್ಞರ ತಂಡ ಕಳುಹಿಸಿದ ಮೋದಿ!