ಕೊರೋನಾ ಸಮರಕ್ಕೆ ಮಹೀಂದ್ರಾ ಸಾಥ್: ಸ್ಯಾಲರಿ, ರೆಸಾರ್ಟ್‌ ಎಲ್ಲವೂ ರೋಗಿಗಳ ಸಹಾಯಕ್ಕೆ!

By Suvarna News  |  First Published Mar 23, 2020, 12:31 PM IST

ಕೊರೋನಾ ವಿರುದ್ಧ ಒಂದಾದ ಭಾರತ| ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದಂತೆಯೇ, ಸಮರಕ್ಕೆ ಸಾಥ್ ನಿಡಿದ ಉದ್ಯಮಿ ಆನಂದ್ ಮಹೀಂದ್ರಾ| ವೆಂಟಿಲೇಸರ್ ತಯಾರಿಗೆ ಸಿದ್ಧ, ರೆಸಾರರ್ಟ್‌ಗಳೆಲ್ಲವೂ ಆಸ್ಪತ್ರೆಗಳಾಗಿಇ ಮಾರ್ಪಾಡು


ಮುಂಬೈ(ಮಾ.23): ದೇಶದಾದ್ಯಂತ ಕೊರೋನಾ ವೈರಸ್ ಪ್ರಕರಣಗಳು ಕಳೆದ ಕೆಲ ದಿನಗಳಿಂದ ಗಣನೀಯವಾಗಿ ಹೆಚ್ಚುತ್ತಿವೆ. ಹೀಗಿರುವಾಗ ಎಲ್ಲರೂ ಸಾಧ್ಯವಾದಷ್ಟು ಹೆಚ್ಚು ಜಾಗರೂಕತೆ ವಹಿಸುವ ಅಗತ್ಯವಿದೆ. ಹೀಗಿರುವಾಗ ಅನೇಕ ಮಂದಿ ಕೊರೋನಾ ಪೀಡಿತರ ಸಹಾಯಕ್ಕೆ ಧಾವಿಸಿದ್ದಾರೆ. ಸದ್ಯ ಈ ಪಟ್ಟಿಗೆ ಉದ್ಯಮಿ ಆನಂದ್ ಮಹೀಂದ್ರಾ ಹೆಸರು ಕೂಡಾ ಸೇರ್ಪಡೆಗೊಂಡಿದೆ. 

ಈ ಸಂಬಂಧ ಟ್ವೀಟ್ ಮಾಡಿರುವ ಆನಂದ್ ಮಹೀಂದ್ರಾ ತಾನು ವೆಂಟಿಲೇಡರ್ ತಯಾರಿಸಲು ಸಹಾಯ ಮಾಡಲು ಇಚ್ಚಿಸುತ್ತಿದ್ದು, ಈ ಮೂಲಕ ಈ ವೈರಸ್ ನಿಂದ ಪೀಡಿರಿಗೆ ವೈದ್ಯಕೀಯ ಸೌಲಭ್ಯ ನೀಡಲಿಚ್ಛಿಸುವುದಾಗಿ ಹೇಳಿದ್ದಾರೆ. ಭಾನುವಾರದಂದು ತಮ್ಮ ಟ್ವಿಟರ್ ಖಾತೆಯಲ್ಲಿ ಸರಣಿ ಟ್ವೀಟ್ ಮಾಡುವ ಮೂಲಕ ಆನಂದ್ ಮಹೀಂದ್ರಾ ಈ ವಿಚಾರ ಬಹಿರಂಗಪಡಿಸಿದ್ದಾರೆ.

Going by various reports from epidemiologists, it is highly likely that India is already in Stage 3 of transmission.
—Cases could rise exponentially with millions of casualties, putting a huge strain on medical infrastructure (1/5)

— anand mahindra (@anandmahindra)

Tap to resize

Latest Videos

undefined

ತಮ್ಮ ಮೊದಲ ಟ್ವೀಟ್‌ನಲ್ಲಿ 'ನಾನು ಕೊರೋನಾ ವವೈರಸ್ ಕುರಿತಾದ ಹಲವು ವರದಿಗಳನ್ನು ಗಮನಿಸುತ್ತಿದ್ದು, ಸದ್ಯ ಭಾರತ ಮೂರನೇ ಸ್ಟೇಜ್‌ನಲ್ಲಿದೆ ಎಂದು ತಿಳಿದು ಬಂತು. ಆದರೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುವ ಸಾಧ್ಯತೆಗಳಿವೆ. ಹೀಗಿರುವಾಗ ವೈದ್ಯಕೀಯ ಸೌಲಭ್ಯಗಳ ಅಗತ್ಯ ಕೂಡಾ ಹೆಚ್ಚಾಗಬಹುದು' ಎಂದಿದ್ದಾರೆ.

ಇದರ ಬೆನ್ನಲ್ಲೇ ಮತ್ತೊಂದು ಟ್ವೀಟ್ ಮಾಡಿರುವ ಮಹೀಂದ್ರಾ 'ಕೆಲ ಸಮಯ ಲಾಕ್‌ಡೌನ್ ಮಾಡುವುದರಿಂದ ಮೆಡಿಕಲ್ ಕೇರ್ ಮೇಲಿನ ಒತ್ತಡ ಕಡಿಮೆ ಮಾಡಲು ಸಾಧ್ಯ. ಹೀಗಿದ್ದರೂ ಅಲ್ಪಕಾಲಿಕ ಆಸ್ಪತ್ರೆ ನಿರ್ಮಾಣ ಮಾಡಿ ವೆಂಟಿಲೇಟರ್ಸ್ ಸಂಖ್ಯೆ ಹೆಚ್ಚಿಸಬೇಕಿದೆ' ಎಂದಿದ್ದಾರೆ.

ತಮ್ಮ ಮೂರನೇ ಟ್ವೀಟ್‌ನಲ್ಲಿ 'ಈ ಸಂಕಷ್ಟದ ಸಮಯವನ್ನೆದುರಿಸಲು ಮಹೀಂದ್ರಾ ಗ್ರೂಪ್‌ನಲ್ಲಿ ನಾವು ನಮ್ಮ ಕೆಲ ಆರಂಭಿಸಿದ್ದೇವೆ ಹಾಗೂ ಹೇಗೆ ನಮ್ಮ ಉತ್ಪಾದನಾ ಘಟಕದಿಂದ ವೆಂಟಿಲೇಟರ್ಸ್ ತಯಾರಿಸಬಹುದೆಂದು  ನೋಡುತ್ತಿದ್ದೇವೆ. ಇದರೊಂದಿಗೆಎ ಮಹೀಂದ್ರಾ ತನ್ನ ರೆಸಾರ್ಟ್ ಕೆಲ ಸಮಯಕ್ಕೆ ಹೆಲ್ತ್ ಕೇರ್ ಫೆಸಿಲಿಟಿಯಾಗಿ ಮಾರ್ಪಾಡು ಮಾಡಲು ತಯಾರಿದ್ದೇವೆ' ಎಂದಿದ್ದಾರೆ. 

—To help in the response to this unprecedented threat, we at the Mahindra Group will immediately begin work on how our manufacturing facilities can make ventilators.
—At Mahindra Holidays, we stand ready to offer our resorts as temporary care facilities. (3/5)

— anand mahindra (@anandmahindra)

'ನಮ್ಮ ಪ್ರಾಜೆಕ್ಟ್ ತಂಡ ಸರ್ಕಾರ  ಹಾಗೂ ಸೇನೆಯ ಸಹಾಯ ಮಾಡಲು ತಯಾರಿದೆ. ಮಹೀಂದ್ರಾ ಫೌಂಡೇಷನ್ ತನ್ನ ಫಂಡ್‌ನಿಂದ ಸಣ್ಣ ಉದ್ದಿಮೆದಾರರು ಹಾಗೂ ದಿನಗೂಲಿ ಕಾರ್ಮಿಕರ ಸಹಾಯ ಮಾಡಲಿದ್ದೆ' ಎಂದಿದ್ದಾರೆ. 

—We will encourage associates to voluntarily contribute to the Fund. I will contribute 100% of my salary to it & will add more over the next few months. I urge all our various businesses to also set aside contributions for those who are the hardest hit in their ecosystems (5/5)

— anand mahindra (@anandmahindra)

ತಮ್ಮ ಕೊನೆಯ ಟ್ವೀಟ್‌ನಲ್ಲಿ 'ಈ ಫಂಡ್‌ಗೆ ತಮ್ಮ ಕೊಡುಗೆ ನೀಡಲಿಚ್ಛಿಸುವವರು ನೀಡಬಹುದು. ನಾನು ನನ್ನ ಸಂಪೂರ್ಣ ಸ್ಯಾಲರಿಯನ್ನು ಈ ಫಂಡ್‌ಗೆ ದಾನ ಮಾಡುತ್ತೇನ ಹಾಗೂ ಮುಂದಿನ ದಿನಗಳಲ್ಲಿ ಇನ್ನಷ್ಟು ಇದಕ್ಕೆ ಕೊಡುಗೆ ನೀಡುತ್ತೇನೆ. ಅಲ್ಲದೇ ಎಲ್ಲಾ ಉದ್ದಿಮೆದಾರರಲ್ಲೂ ಈ ಫಂಡ್‌ಗೆ  ತಮ್ಮ ಕೊಡುಗೆ ನೀಡುವಂತೆ ಮನವಿ ಮಾಡುತ್ತೇನೆ. ಈ ಮೂಲಕ ಅಗತ್ಯವಿದ್ದವರ ಸಹಾಯ ಮಾಡಬಹುದು' ಎಂದಿದ್ದಾರೆ.

click me!