ಮೆಕ್ಕಾ ಯಾತ್ರೆಗೆ ಕೂಡಿಟ್ಟ 5 ಲಕ್ಷ ಆರೆಸ್ಸೆಸ್‌ನ ಸೇವಾ ಭಾರತಿಗೆ ನೀಡಿದ ಮಹಿಳೆ| ಸೌದಿ ಅರೇಬಿಯಾದಲ್ಲಿರುವ ಪವಿತ್ರ ಧಾರ್ಮಿಕ ಕ್ಷೇತ್ರ ಮೆಕ್ಕಾ ಯಾತ್ರೆ
ನವದೆಹಲಿ(ಮಾ.31): ಸೌದಿ ಅರೇಬಿಯಾದಲ್ಲಿರುವ ಪವಿತ್ರ ಧಾರ್ಮಿಕ ಕ್ಷೇತ್ರ ಮೆಕ್ಕಾ ಯಾತ್ರೆಗಾಗಿ ಕೂಡಿಟ್ಟಿದ್ದ 5 ಲಕ್ಷ ರು. ಅನ್ನು ವೃದ್ಧೆಯೊಬ್ಬರು ಆರ್‌ಎಸ್‌ಎಸ್‌ನ ಸೇವಾ ಭಾರತಿಗೆ ದೇಣಿಗೆಯಾಗಿ ನೀಡಿದ್ದಾರೆ.
ಮುಸಲ್ಮಾನರಿಗೆ ಮೆಕ್ಕಾ, ಮದೀನಾ ಪ್ರವೇಶ ನಿರ್ಬಂಧ: ಕಾರಣವೇನು?
ಈ ಮೂಲಕ ಕೊರೋನಾ ಲಾಕ್‌ಡೌನ್ ಬಳಿಕ ಜಮ್ಮು-ಕಾಶ್ಮೀರದಲ್ಲಿ ಜನ ಸಾಮಾನ್ಯರ ನೆರವಿಗಾಗಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಆರ್‌ಎಸ್‌ಎಸ್‌ನ ಸೇವಾ ಭಾರತಿ ಬಗ್ಗೆ ವೃದ್ಧೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಾಶ್ಮೀರ ಮೂಲದ ಖಲೀದಾ ಬೇಗಂ(87) ತಮ್ಮ ಹಜ್ ಯಾತ್ರೆಯ 5 ಲಕ್ಷ ರು. ದೇಣಿಗೆಯಾಗಿ ನೀಡಿದವರು. ದೇಶದಲ್ಲಿ ಲಾಕ್‌ಡೌನ್ ಇಲ್ಲದಿದ್ದರೆ, ಇಷ್ಟೊತ್ತಿಗಾಗಲೇ ಅವರು ಮೆಕ್ಕಾ ಯಾತ್ರೆಗೆ ಹೋಗಬೇಕಿತ್ತು.