ತಬ್ಲೀಘಿಗಳದೇ 1023 ಕೇಸು: ಕೊರೋನಾ ಸಾವು 100ರ ಗಡಿಯತ್ತ!

By Kannadaprabha NewsFirst Published Apr 5, 2020, 7:12 AM IST
Highlights

ತಬ್ಲೀಘಿಗಳದೇ 1023 ಕೇಸು!| 400 ಹೊಸ ಸೋಂಕಿತರು, ಒಟ್ಟು 3450| ಮತ್ತೆ 8 ಬಲಿ, ಸಾವು 100ರ ಗಡಿಯತ್ತ

ನವದೆಹಲಿ(ಏ.05): ಭಾರತದಲ್ಲಿ ಕೊರೋನಾ ಮತ್ತಷ್ಟುವ್ಯಾಪಕಗೊಂಡಿದ್ದು, ಶನಿವಾರ 400ಕ್ಕೂ ಹೆಚ್ಚು ಹೊಸ ಪ್ರಕರಣ ಬೆಳಕಿಗೆ ಬಂದಿವೆ. ಇದರೊಂದಿಗೆ ಒಟ್ಟು ಸೋಂಕು ಪೀಡಿತರ ಸಂಖ್ಯೆ 3450ರ ಗಡಿ ದಾಟಿದೆ. ಇದೇ ವೇಳೆ ಸೋಂಕಿಗೆ ಶನಿವಾರ 8 ಜನ ಬಲಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 96ಕ್ಕೆ ತಲುಪಿದೆ.

"

ಈ ನಡುವೆ ಕಳೆದ ಹೊಸ ಪ್ರಕರಣಗಳಲ್ಲಿ ಭಾರೀ ಏರಿಕೆಯಾಗಿದ್ದರೂ, ಇತರೆ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಸೋಂಕಿತರ ಸಂಖ್ಯೆ ದುಪ್ಪಟ್ಟಾಗುವ ವೇಗ ಸಾಕಷ್ಟುಕಡಿಮೆಯಿದೆ. ಜೊತೆಗೆ ಈವರೆಗಿನ ಒಟ್ಟಾರೆ 3450 ಪ್ರಕರಣಗಳ ಪೈಕಿ ಶೇ.30ರಷ್ಟುಪ್ರಕರಣಗಳು ಒಂದೇ ಸ್ಥಳಕ್ಕೆ (ತಬ್ಲೀಘಿ ಜಮಾತ್‌) ಸೀಮಿತವಾಗಿರುವ ಕಾರಣ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

ಲಾಕ್‌ಡೌನ್‌ ಮಧ್ಯೆಯೂ ಮಾಂಸ ಮಾರಾಟಕ್ಕೆ ಸಿಕ್ತು ಪರ್ಮಿಷನ್!

ಅಲ್ಲದೆ 17 ರಾಜ್ಯಗಳಲ್ಲಿ ದೃಢಪಟ್ಟಒಟ್ಟು ಕೊರೋನಾ ಪ್ರಕರಣಗಳಲ್ಲಿ 1023 ಪ್ರಕರಣಗಳು ತಬ್ಲೀಘಿ ಜಮಾತ್‌ ಸಮಾವೇಶದ ಜೊತೆ ನಂಟು ಹೊಂದಿವೆ. ದೇಶದಲ್ಲಿ ಒಟ್ಟಾರೆ ಪತ್ತೆಯಾದ ಕೊರೋನಾ ಸೋಂಕುಗಳ ಪೈಕಿ ತಬ್ಲೀಘಿ ಜಮಾತ್‌ನ ಸೋಂಕಿನ ಪ್ರಮಾಣವೇ ಶೇ.30ರಷ್ಟಿದೆ. ತಬ್ಲೀಘಿ ಜಮಾತ್‌ ಮರ್ಕಜ್‌ನಲ್ಲಿ ಭಾಗವಹಿಸಿ 17 ರಾಜ್ಯಗಳಿಗೆ ತೆರಳಿದವರ ಹಾಗೂ ಅವರೊಂದಿಗೆ ಸಂಪರ್ಕಕ್ಕೆ ಬಂದವರ ಪತ್ತೆಗೆ ತೀವ್ರ ಕಾರ್ಯಾಚರಣೆ ನಡೆಯುತ್ತಿದೆ. ದೆಹಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತಬ್ಲೀಘಿಗಳು ಮತ್ತು ಅವರ ಸಂಪರ್ಕಕ್ಕೆ ಬಂದ 22000 ಜನರನ್ನು ವಿವಿಧ ರಾಜ್ಯಗಳಲ್ಲಿ ಹೋಮ್‌ ಕ್ವಾರಂಟೈನ್‌ಗೆ ಗುರಿಪಡಿಸಲಾಗಿದೆ ಎಂದು ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್‌ ಅಗರ್ವಾಲ್‌ ಹೇಳಿದ್ದಾರೆ.

ವಯೋಮಾನ:

ಒಟ್ಟು ಸೋಂಕಿತರಲ್ಲಿ ಶೇ.9ರಷ್ಟುಪಾಲು 20 ವರ್ಷಕ್ಕಿಂತ ಕೆಳಗಿನ ವಯಸ್ಸಿನವರು, ಶೇ.41ರಷ್ಟುಕೇಸು 21-40ರ ವಯೋಮಾನದವರು, ಶೇ.33ರಷ್ಟುಪ್ರಕರಣ 40-50ರ ವಯೋಮಾನದವರು ಮತ್ತು ಶೇ.17ರಷ್ಟುಪ್ರಕರಣ 60 ವರ್ಷ ಮೇಲ್ಪಟ್ಟವರದ್ದು. ಈ ನಡುವೆ ಕೇರಳ, ಮಧ್ಯಪ್ರದೇಶ ಮತ್ತು ದೆಹಲಿಯಲ್ಲಿ ಕೊರೋನಾ ಸೋಂಕು ಪೀಡಿತ 58 ಜನರ ಆರೋಗ್ಯ ಗಂಭೀರವಾಗಿದೆ ಎಂದು ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ತಬ್ಲೀಘಿ ಹಣದ ಮೂಲ ಯಾವುದು? ಜಮಾತ್‌ ಮುಖ್ಯಸ್ಥ ಸಾದ್‌ಗೆ ನೋಟಿಸ್‌!

ಒಟ್ಟು ಸೋಂಕಿತರ ವಯೋಮಾನ ಪಟ್ಟಿ

ಶೇ.9: 20ಕ್ಕಿಂತ ಕೆಳಗಿನ ವಯಸ್ಸು

ಶೇ.41: 21-40ರ ವಯೋಮಾನ

ಶೇ.33: 40-50ರ ವಯೋಮಾನ

ಶೇ.17: 60 ವರ್ಷ ಮೇಲ್ಪಟ್ಟವರು

"

click me!