ಹರ್ಯಾಣ ಮತ್ತು ಮಹಾರಾಷ್ಟ್ರ ಚುನಾವಣಾ ಫಲಿತಾಂಶದ ಬಗ್ಗೆ ಆರೋಗ್ಯ ಸಚಿವರ ಪ್ರತಿಕ್ರಿಯೆ/ ಡಿಕೆಶಿ ಬಗ್ಗೆ ಶ್ರೀರಾಮಲು ಸಾಫ್ಟ್ ಕಾರ್ನರ್/ ಕೆಟ್ಟದಾಗಲಿ ಎಂದು ಯಾರಿಗೂ ಭಯಸಿಲ್ಲ
ಚಿತ್ರದುರ್ಗ(ಅ. 24) ಮಹಾರಾಷ್ಟ್ರ ಸಿಎಂ ಮತ್ತು ಹರಿಯಾಣ ಸಿಎಂ ಜನಪ್ರಿಯತೆ ಗಳಿಸಿಕೊಂಡವರು. ಮೋದಿ ದೇಶದ ಜನರ ಜರ ಪ್ರೀತಿ ಗಳಿಸಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ನೆಲಸಮವಾಗುತ್ತೆದೆ ಎಂದು ಮಹಾರಾಷ್ಟ್ರ ಮತ್ತು ಹರ್ಯಾಣ ಫಲಿತಾಂಶದ ನಂತರ ಆರೋಗ್ಯ ಸಚಿವ ಬಿ. ಶ್ರೀರಾಮುಲು ಭವಿಷ್ಯ ನುಡಿದಿದ್ದಾರೆ.
ಡಿಕೆಶಿ ಕುರಿತು ರಾಮುಲು ಮೃದುವಾಗಿ ಮಾತನಾಡಿದ್ದಾರೆ. ಡಿಕೆಶಿ ಬಗ್ಗೆ ನಾನು ಮನಸ್ಸಿನಿಂದ ಮಾತನಾಡಿಲ್ಲ. ಜೈಲಿಗೆ ಹೋಗುವಂತೆ ಹೇಳಿದವನೂ ನಾನಲ್ಲ. ನ್ಯಾಯಾಲಯದಿಂದ ಜಾಮೀನು ಪಡೆದು ಬಂದಿದ್ದಾರೆ. ಕಾನೂನಿನ ಮೇಲೆ ಎಲ್ಲರಿಗೂ ಗೌರವ ಇದೆ ಎಂದಿದ್ದಾರೆ.
ಹೊರಬಂದ ಡಿಕೆಶಿಯಿಂದ ಬಿಜೆಪಿ ಸ್ನೇಹಿತರಿಗೂ ಧನ್ಯವಾದ
ದೇಶದಲ್ಲಿ ಮೋದಿ ಅಲೆ ಇದೆ. ರಾಜ್ಯದಲ್ಲಿ 3 ವರ್ಷ ಅಲ್ಲ, ಇನ್ನೂ 20 ವರ್ಷದ ಬಿಜೆಪಿ ಸರ್ಕಾರ ಇರಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮಾಡಿದ ರಾಮುಲು, ಸಿದ್ದರಾಮಯ್ಯ ಎಲ್ಲಿಯೂ ಸಮಾಧಾನದಿಂದ ಇರಲ್ಲ. ಅವರು ಪ್ರಚೋದನಕಾರಿ ಮಾತುಗಳು ಆಡಿದ್ದರು. ಮೈತ್ರಿ ಸರ್ಕಾರ ಬಿಳಿಸಲು ಸಿದ್ದರಾಮಯ್ಯ ಕಾರಣರಾಗಿದ್ದರು. ಕೆಳಗೆ ಬಿದ್ದರೂ ಮೀಸೆ ಮಣ್ಣಾಗಿಲ್ಲ ಅನ್ನುವ ಹಾಗೆ ಈಗ ಮಾತನಾಡುತ್ತಿದ್ದಾರೆ ಎಂದಿದ್ದಾರೆ.
ಕೆಟ್ಟದನ್ನ ಬಯಸುವವರು ಹಿಂದೂಗಳಲ್ಲ. ಕೆಟ್ಟದನ್ನ ಶತ್ರುಗಳಿಗೂ ಬಯಸಲ್ಲ, ದೇವರೆ ಕೈ ಹಿಡಿದು ಕಷ್ಟಗಳಿಂದ ಎಲ್ಲರನ್ನು ಪಾರು ಮಾಡಲಿ. ಡಿಕೆಶಿ ಜೈಲಿಗೆ ಹೋದಾಗ ನಾವು ಹೊರಗೆ ಬರಲಿ ಎಂದು ಪ್ರಾರ್ಥಿಸಿದ್ದೇವೆ. ಕೆಟ್ಟದನ್ನ ಯಾರು ಬಯಸಲ್ಲ ಎಂದು ಹೇಳಿದರು.