ಚಿತ್ರದುರ್ಗ : ಭಾರಿ ಮಳೆಗೆ ಬೆಟ್ಟ ಕುಸಿದರೂ ಅಚ್ಚರಿ ರೀತಿಯಲ್ಲಿ ಉಳಿದ ಗರ್ಭಗುಡಿ

By Web Desk  |  First Published Oct 22, 2019, 12:37 PM IST

ರಾಜ್ಯದ ವಿವಿಧೆಡೆ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಜನಜೀವನ ಮತ್ತೊಮ್ಮೆ ತತ್ತರಿಸುತ್ತಿದೆ. ನೆರೆಯಿಂದ ನೆಲೆಯಿಲ್ಲದ ಹಲವೆಡೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. 


ಚಿತ್ರದುರ್ಗ (ಅ.22): ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಮತ್ತೆ ಮಳೆಯಬ್ಬರದಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಮಲೆನಾಡು, ಉತ್ತರ, ಕರಾವಳಿಯ ಜಿಲ್ಲೆಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. 

ಇತ್ತ ಕೋಟೆನಾಡು ಚಿತ್ರದುರ್ಗದಲ್ಲಿಯೂ ಕೂಡ ಕಳೆದ ಎರಡು ದಿನಗಳಿಂದ ಎಡೆಬಿಡದೆ ಮಳೆಯಾಗುತ್ತಿದ್ದು, ಹಲವು ರೀತಿಯ ಅನಾಹುತ ಸೃಷ್ಟಿಯಾಗಿದೆ. 

Latest Videos

undefined

ಧಾರಾಕಾರ ಮಳೆಯಿಂದ ಹೊಳಲ್ಕೆರೆ ತಾಲೂಕಿನ ಲೋಕದೊಳಲು ಗ್ರಾಮದಲ್ಲಿ ಐತಿಹಾಸಿಕ ಬೆಟ್ಟ ಕುಸಿದಿದ್ದು, ಇಲ್ಲಿರುವ ಹೊಟ್ಟೆ ರಂಗನಾಥ ಸ್ವಾಮಿ ದೇಗುಲಕ್ಕೆ ಹೆಚ್ಚಿನ ಹಾನಿಯುಂಟಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇತಿಹಾಸ ಪ್ರಸಿದ್ಧವಾದ ರಂಗನಾಥ ಸ್ವಾಮಿಯ ದೇಗುಲದ ಪ್ರದೇಶ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಆದರೆ ಅಚ್ಚರಿ ರೀತಿಯಲ್ಲಿ ಗರ್ಭಗುಡಿಗೆ ಮಾತ್ರ ಯಾವುದೇ ಹಾನಿಯುಂಟಾಗಿಲ್ಲ. ರಂಗನಾಥಸ್ವಾಮಿ ವಿಗ್ರಹ ದ ಪ್ರದೇಶವೂ ಸುರಕ್ಷಿತವಾಗಿದೆ.

ಇನ್ನೂ ಮೂರು ದಿನಗಳ ಕಾಲ, ಅಕ್ಟೋಬರ್ 25ರವರೆಗೆ ರಾಜ್ಯದಲ್ಲಿ ಮಳೆಯ ಅಬ್ಬರ ಇರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. 

"

click me!