ಅಯೋಧ್ಯೆಯ ತೀರ್ಪು ನೀಡಿದ ಐತಿಹಾಸಕ ತೀರ್ಪು ಆಗಿದೆ|ಕಳೆದೊಂದು ವರ್ಷದಿಂದ ನಿಂತ ಸರ್ಕಾರಕ್ಕೆ ಈಗ ವೇಗಕ್ಕೆ ಚಾಲನೆ ನೀಡಲಾಗಿದೆ|ಬಿಎಸ್ ವೈ ಅವರಿಗೂ ನನಗೂ ಭಿನ್ನಾಭಿಪ್ರಾಯವಿಲ್ಲ| ಅವರು ಸರ್ಕಾರ ನೋಡಿಕೊಳ್ಳುತ್ತಾರೆ| ನಾನು ಪಕ್ಷ ನೋಡಿಕೊಳ್ಳುತ್ತೇನೆ|
ಚಿಕ್ಕಮಗಳೂರು[ನ.10]: ಅಯೋಧ್ಯೆಯ ತೀರ್ಪು ನೀಡಿದ ಐತಿಹಾಸಕ ತೀರ್ಪು ಆಗಿದೆ. ರಾಮಮಂದಿರವಲ್ಲದೆ ರಾಷ್ಟ್ರ ಮಂದಿರವಾಗಿ ಪರಿವರ್ತನೆಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವರು ಹೇಳಿದ್ದಾರೆ.
ಭಾನುವಾರ ನಗರದಲ್ಲಿ ಮಾತನಾಡಿದ ಅವರು, ಜಮ್ಮು- ಕಾಶ್ಮೀರಕ್ಕೆ ನೀಡಿದ 370 ವಿಧಿ ರದ್ದು ಹಾಗೂ ನಿನ್ನೆ ಬಂದಿರುವ ತೀರ್ಪು ವಿಶ್ವಾಸವನ್ನು ಹೆಚ್ಚು ಮಾಡಿದೆ ಎಂದಿದ್ದಾರೆ.
undefined
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ನೆರೆಯನ್ನು ಸರಿಯಾಗಿ ನಿರ್ವಹಣೆ ಮಾಡಿದ್ದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಮಾತ್ರ. ಕಳೆದೊಂದು ವರ್ಷದಿಂದ ನಿಂತ ಸರ್ಕಾರಕ್ಕೆ ಈಗ ವೇಗಕ್ಕೆ ಚಾಲನೆ ನೀಡಲಾಗಿದೆ. ರಾಜುಕಾಗೆ, ಮಾಜಿ ಡಿ. ಕೆ. ಶಿವಕುಮಾರ್ ಭೇಟಿ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ರಾಜಕೀಯದಲ್ಲಿ ವೈಯುಕ್ತಿಕ ಸಂಬಂಧಗಳು ಇರುತ್ತವೆ.ಎಲ್ಲರ ಜೊತೆ ಸಂಬಂದ ಇರುತ್ತದೆ. ಸಂಬಂಧ ಇದ್ದ ಕೂಡಲೇ ಕಾಂಗ್ರೆಸ್ ಸೇಪರ್ಡೆಯಾಗಲ್ಲ. ನಾನು, ಜನಾರ್ಧನ ಪೂಜಾರಿ ಹಳೆಯ ಸ್ನೇಹಿತರು. ಅವರು ಬಿಜೆಪಿಗೆ ಬರ್ಲಿಲ್ಲ, ನಾನು ಕಾಂಗ್ರೆಸ್ ಗೆ ಹೋಗ್ಲಿಲ್ಲ ಎಂದು ತಿಳಿಸಿದ್ದಾರೆ.
ಅನರ್ಹ ಶಾಸಕರ ನ್ಯಾಯಲಯದ ತೀರ್ಪಿಗೆ ಕಾಯುತ್ತೇವೆ. ಬಿಎಸ್ ವೈ ಅವರಿಗೂ ನನಗೂ ಭಿನ್ನಾಭಿಪ್ರಾಯವಿಲ್ಲ. ಅವರು ಸರ್ಕಾರ ನೋಡಿಕೊಳ್ಳುತ್ತಾರೆ. ನಾನು ಪಕ್ಷ ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.