ಚಿಕ್ಕಮಗಳೂರಿನಲ್ಲಿ ದೇವಾಲಯದ ಮುಂದುವರಿದ ತೆಂಗಿನ ಮರಕ್ಕೆ ಬೆಂಕಿ ಹೊತ್ತಿದ್ದು ಜನರಲ್ಲಿ ಆತಂಕ ಎದುರಾಗಿದೆ.
ಚಿಕ್ಕಮಗಳೂರು (ಅ.07) : ಮಳೆಗಾಲ ಮುಕ್ತಾಯವಾದರೂ ಕೂಡ ರಾಜ್ಯದಲ್ಲಿ ಮಳೆಯ ಅಬ್ಬರ ಮಾತ್ರ ನಿಂತಿಲ್ಲ. ಹಲವೆಡೆ ಇನ್ನೂ ವರುಣ ಅಬ್ಬರಿಸುತ್ತಿದ್ದಾನೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿಯೂ ಮಳೆಯಾಗುತ್ತಿದ್ದು, ತರೀಕೆರೆ ಅಜ್ಜಂಪುರ ತಾಲೂಕಿನಲ್ಲಿ ಸಿಡಿಲು ಬಡಿದು ತೆಂಗಿನ ಮರವೊಂದು ಹೊತ್ತಿ ಉರಿದಿದೆ.
undefined
ಇಲ್ಲಿನ ಕಿರಾಳಮ್ಮ ದೇವಾಲಯದ ಬಳಿ ಇರುವ ತೆಂಗಿನಮರಕ್ಕೆ ಸಿಡಿಲು ಬಡಿದು ಬೆಂಕಿ ಹೊತ್ತಿ ಉರಿದಿದೆ. ಈ ವೇಳೆ ಮರವು ಸಂಪೂರ್ಣ ಸುಟ್ಟು ಕರಕಲಾಗಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ದೇವಾಲಯದ ಬಳಿ ಇರುವ ತೆಂಗಿನಮರ ಹೊತ್ತಿ ಉರಿದಿದ್ದು, ಜನರಲ್ಲಿ ಆತಂಕ ಮೂಡಿಸಿದೆ.