
ಚಿಕ್ಕಮಗಳೂರು (ನ.25) ವಿದ್ಯಾರ್ಥಿನಿಗೆ ಐ ಲವ್ ಯು ಎಂದು ಮೆಸೇಜ್ ಮಾಡಿದ್ದಾನೆ. ಇದರ ಉಪನ್ಯಾಸಕನ ಕಿರುಕುಳ ವಿರುದ್ಧ ವಿದ್ಯಾರ್ಥಿನಿ ದೂರು ನೀಡಿದ್ದಾರೆ. ಆದರೆ ಇದೀಗ ವಿದ್ಯಾರ್ಥಿನಿ ವಿರುದ್ಧ ಕಾಲೇಜಿನ ಉಪನ್ಯಾಸಕ ವರ್ಗ ಕೂಡ ದೂರು ನೀಡಿದ್ದು. ಹೈಡ್ರಾಮಾ ಸೃಷ್ಟಿಯಾಗಿದೆ. ಈ ಘಟನೆ ನಡೆದಿರುವುದು ಚಿಕ್ಕಮಗಳೂರಿನ ಮೆಡಿಕಲ್ ಕಾಲೇಜಿನಲ್ಲಿ. ಉಪನ್ಯಾಸಕ ಡಾ.ಗಂಗಾದರ್ ವಿರುದ್ ವಿದ್ಯಾರ್ಥಿನಿ ಸುರಭಿ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ಆದರೆ ವಿದ್ಯಾರ್ಥಿನಿ ದೂರು ಹಾಗೂ ಪ್ರತಿ ದೂರು ಹಲವು ಅನುಮಾಗಳಿಗೆ ಎಡೆಮಾಡಿದೆ.
ವಿದ್ಯಾರ್ಥಿನಿ ಸುರಭಿ ನೀಡಿದ್ದ ದೂರಿನಲ್ಲಿ ಉಪನ್ಯಾಸಕ ಗಂಗಾದರ್ ತನಗೆ ಐ ಲವ್ ಯು ಎಂದು ಮೆಸೇಜ್ ಮಾಡಿದ್ದಾನೆ. ಕಿರಿಕುಳ ನೀಡಿದ್ದಾನೆ ಎಂದು ವಿದ್ಯಾರ್ಥಿನಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಆದರೆ ಉಪನ್ಯಾಸಕ ದೂರು ನೀಡಿದ್ದು 2022-23ನೇ ಸಾಲಿನಲ್ಲಿ. ಇದೀಗ ಎರಡರಿಂದ ಮೂರು ವರ್ಷಗಳ ಬಳಿಕ ವಿದ್ಯಾರ್ಥಿನಿ ಉಪನ್ಯಾಸಕನ ವಿರುದ್ಧ ದೂರು ನೀಡಿದ್ದಾರೆ. ಈ ದೂರಿನ ಹಿಂದೆ ಷಡ್ಯಂತ್ರ ಅಡಗಿದೆ ಎಂದು ಉಪನ್ಯಾಸ ವರ್ಗ ಆರೋಪಿಸಿದೆ.
ವಿದ್ಯಾರ್ಥಿನಿ ಸುರುಭಿ ವಿರುದ್ಧ ಮಡಿಕಲ್ ಕಾಲೇಜಿನ ಉಪನ್ಯಾಸಕ ವರ್ಗ ಕೂಡ ದೂರು ನೀಡಿದೆ. ವಿದ್ಯಾರ್ಥಿನಿ ಸುರಭಿಗೆ ಕಾಲೇಜಿನಲ್ಲಿ ಹಾಜರಾತಿ ತೀರಾ ಕಡಿಮೆ, ಇಂಟರ್ನೆಲ್ ಮಾರ್ಕ್ಸ್ ಕೂಡ ಕಡಿಮೆ ಇದೆ. ಸುರಭಿ ಹಾಜರಾತಿ ಕೊರತೆ ಬಗ್ಗೆ ಆಕೆ ಪೋಷಕರ ಗಮನಕ್ಕೂ ತಂದಿದ್ದ ಮೆಡಿಕಲ್ ಕಾಲೇಜ್ ಡೀನ್. ಹಾಜರಾತಿ ಕುರಿತ ಸಮಸ್ಯೆ ಮುಚ್ಚಿ ಹಾಕಲು ವಿದ್ಯಾರ್ಥಿನಿ ಉಪನ್ಯಾಸಕರ ವಿರುದ್ದ ದೂರು ನೀಡಿದ್ದಾರೆ. 2023ರ ಮೆಸೇಜ್‌ಗೆ ಈಗ ದೂರು ಯಾಕೆ, ಸಮಸ್ಯೆಯಾಗಿದ್ದರೇ ಅಂದೇ ನೀಡಬೇಕಿತ್ತು ಎಂದು ಉಪನ್ಯಾಸಕರು ಪ್ರಶ್ನಿಸಿದ್ದಾರೆ.
ದೂರು ನೀಡಿರುವ ವಿದ್ಯಾರ್ಥಿನಿ ಸುರಭಿ, ಅದೇ ಮೆಡಿಕಲ್ ಕಾಲೇಜಿನಲ್ಲಿ ಕೆಲಸ ಮಾಡುವ ನಿತಿನ್ ಎಂಬುವವರನ್ನು ಮದುವೆಯಾಗಿದ್ದರೆ. ಇತ್ತೀಚೆಗೆ ವಿದ್ಯಾರ್ಥಿನಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೀಗ ಉಪನ್ಯಾಸಕನ ಮೆಸೇಜ್ ಕುರಿತು ದೂರು ನೀಡಿರುವುದು ತನ್ನ ಹಾಜರಾತಿ ಹಾಗೂ ತರಗತಿ ಸಮಸ್ಯೆಗಳನ್ನು ಮುಚ್ಚಿ ಹಾಕಿ ಬೆದರಿಕೆ ಮೂಲಕ ಹಾಲ್ ಟಿಕೆಟ್ ಪಡೆಯುವ ಉದ್ದೇಶ ಅಡಗಿದೆ ಎಂದು ಉಪನ್ಯಾಸ ವರ್ಗ ಆರೋಪಿಸಿದೆ.
ವಿದ್ಯಾರ್ಥಿನಿ ಸುರಭಿ ನೀಡಿದ ದೂರಿನ ಆಧಾರದಲ್ಲಿ ಉಪನ್ಯಾಸಕ ಡಾ.ಗಂಗಾದರ್‌ಗೆ ಮೆಡಿಕಲ್ ಕಾಲೇಜಿನ ಡೀನ್ ನೋಟಿಸ್ ನೀಡಿದ್ದಾರೆ. ಚಿಕ್ಕಮಗಳೂರು ನಗರದ ಹೊರಹೊಲಯದಲ್ಲಿರುವ ಮೆಡಿಕಲ್ ಕಾಲೇಜಿನಲ್ಲಿ ಇದೀಗ ರಂಪಾಟವೇ ನಡೆದಿದೆ.