ಶೃಂಗೇರಿ: ಓರ್ವನನ್ನು ರಕ್ಷಿಸಲು ಹೋಗಿ ಒಂದೇ ಕುಟುಂಬದ ನಾಲ್ವರು ನೀರುಪಾಲು

By Web DeskFirst Published Mar 24, 2019, 5:08 PM IST
Highlights

ನೀರಿನಲ್ಲಿ ಮುಳುಗುತ್ತಿದ್ದ ಓರ್ವನನ್ನು ರಕ್ಷಿಸಲು ಹೋಗಿ ಇಡೀ ಕುಟುಂಬವೇ ನೀರು ಪಾಲಾಗಿರುವ ಮನಕಲಕುವ ಘಟನೆ ಶೃಂಗೇರಿಯ ವಿದ್ಯಾರಣ್ಯಪುರ ಬಳಿ ನಡೆದಿದೆ.

ಚಿಕ್ಕಮಗಳೂರು, (ಮಾ.24): ತುಂಗಾನದಿಯಲ್ಲಿ ಸ್ನಾನ ಮಾಡಲು ಹೋಗಿದ್ದ ವೇಳೆ ಸುಳಿಗೆ ಸಿಲುಕಿದ್ದ ಒಬ್ಬರನ್ನು ರಕ್ಷಣೆ ಮಾಡಲು ಹೋಗಿ ಒಂದೇ ಕುಟುಂಬದ ನಾಲ್ವರು ನೀರುಪಾಲಾಗಿರುವ ದಾರುಣ ಘಟನೆ ಶೃಂಗೇರಿಯ ವಿದ್ಯಾರಣ್ಯಪುರ ಬಳಿ ನಡೆದಿದೆ.

ನಾಗೇಂದ್ರ, ಪ್ರದೀಪ್, ರಾಮಣ್ಣ ಮತ್ತು ರತ್ನಾಕರ್ ಮೃತ ದುರ್ದೈವಿಗಳು. ಮೂವರು ಸಂಬಂಧಿಗಳು ರಾಮಣ್ಣ ಮನೆಗೆ ಕಾರ್ಯಕ್ರಮಕ್ಕಾಗಿ ಬಂದಿದ್ದರು. 

ಹಾಗೆಯೇ ಎಲ್ಲರೂ ಇಂದು ತುಂಗಾ ನದಿಗೆ ಈಜಲು ಹೋಗಿದ್ದಾರೆ. ಆಗ ಪ್ರದೀಪ್ ನದಿಯಲ್ಲಿ ಸುಳಿಗೆ ಸಿಲುಕೊಂಡಿದ್ದಾರೆ. ಇದನ್ನು ಗಮನಿಸಿದ ಮೂವರು ಅವರನ್ನ ರಕ್ಷಿಸಲು ಹೋಗಿದ್ದು, ಪ್ರದೀಪ್ ಜೊತೆ ರಕ್ಷಿಸಲು ಹೋದ ಮೂವರೂ ನೀರು ಪಾಲಾಗಿದ್ದಾರೆ. 

Karnataka: Police recovered bodies of four men who drowned in Tunga river at Vidyaranyapura village, near Sringeri in Chikkamagaluru district today; Police investigation underway. pic.twitter.com/IvpOXnaOPj

— ANI (@ANI)

ರತ್ನಾಕರ್ ಕೊಪ್ಪ ತಾಲೂಕಿನ ಬಾಳೆಹಕ್ಲು ಗ್ರಾಮದವರು ಎನ್ನಲಾಗಿದೆ. ಸ್ಥಳಕ್ಕೆ ಶೃಂಗೇರಿ ಪೊಲೀಸರು ಹಾಗೂ ಅಗ್ನಿ ಶಾಮಕ ದಳ, ನುರಿತ ಈಜು ತಜ್ಞರು ಆಗಮಿಸಿದ್ದು, ಮೃತದೇಹಗಳ ಹುಡುಕಾಟ ಮುಂದುವರೆದಿದೆ.

click me!