
ಚಿಕ್ಕಬಳ್ಳಾಪುರ (ಮಾ.01) ಅಮೆರಿಕ ಹಾಗೂ ಇಸ್ರೇಲ್ ನಡೆಸಿದ ದಾಳಿಯಲ್ಲಿ ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲ ಖಮೇನಿ ಹತ್ಯೆಯಾಗಿದ್ದಾರೆ. ಖಮೇನಿ ಹತ್ಯೆಗೆ ಇರಾನ್ ಮಾತ್ರವಲ್ಲ ಹಲವು ಮುಸ್ಲಿಂ ರಾಷ್ಟ್ರಗಳು ಸಂತಾಪ ಸೂಚಿಸಿದೆ. ಘಟನೆಯನ್ನು ತೀವ್ರವಾಗಿ ಖಂಡಿಸಿದೆ. ಇತ್ತ ಭಾರತದಲ್ಲಿ ಮುಸ್ಲಿಮರು ಬೀದಿಗೆ ಇಳಿದು ಅಮೆರಿಕ ವಿರುದ್ದ ಪ್ರತಿಭಟನೆ ಮಾಡುತ್ತಿದ್ದಾರೆ. ಬೆಂಗಳೂರಿನಿಂದ ಕೂಗಳತೆ ದೂರದಲ್ಲಿರುವ ಚಿಕ್ಕಬಲ್ಳಾಪುರದ ಅಲೀಪುರದಲ್ಲಿ ಖಮೇನಿ ಹತ್ಯೆಗೆ ಮೂರು ದಿನ ಶೋಕಾಚರಣೆ, ಸ್ವಯಂಘೋಷಿತ ಬಂದ್ ಮಾಡಲಾಗಿದೆ. ಜನರು ಮಸೀದಿ ಬಳಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಇದೇ ವೇಳೆ ಅಮೆರಿಕ ವಿರುದ್ದ ಪ್ರತೀಕಾರ ತೀರಿಸಿಕೊಳ್ಳುವ ಮಾತುಗಳು ಕೇಳಿಬಂದಿದೆ. ಅಲೀಪುರ ಜನ ಕಣ್ಣೀರಿನ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದೆ. ಇದನ್ನು ಹಲವರು ಸೋಶಿಯಲ್ ಮೀಡಿಯಾ ಮೂಲಕ ಪ್ರಶ್ನಿಸಿದ್ದಾರೆ.
ಮತ್ತೊಂದು ದೇಶದ ಮೇಲೆ ಆಕ್ರಮಣ ಮಾಡಿ ಅಲ್ಲಿನ ನಾಯಕನ ಹತ್ಯೆ ಖಂಡನೀಯ. ಆದರೆ ಖಮೇನಿ ಹತ್ಯೆಗೆ ಭಾರತದಲ್ಲಿ ಹಲವರು ಕಣ್ಣೀರಿಡುತ್ತಿದ್ದಾರೆ. ಇದೇ ಕಣ್ಮೀರಿಡುವ ಜನ ಪೆಹಲ್ಗಾಂ, ಪುಲ್ವಾಂ ಘಟನೆ ಸಂದರ್ಭದಲ್ಲಿ ಒಂದು ಹನಿ ಕಣ್ಣೀರು ಹಾಕಿಲ್ಲ. ಭಾರತೀಯ ಸೈನಿಕರು ಹುತಾತ್ಮರಾದಾಗ ಕಣ್ಣೀರು ಬರಲೇ ಇಲ್ಲ. ಇದೀಗ ಗಳಗಳನೇ ಅಳುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಗೌರಿಬಿದನೂರಿನ ಅಲೀಪುರ ಗ್ರಾಮ ಮಿನಿ ಇರಾನ್ ಎಂದು ಕರೆಯಲಾಗುತ್ತೆ. ಇಲ್ಲಿನ ಬಹುತೇಕರ ಸಂಬಂಧ ಇರಾನ್ ಜೊತೆಗಿದೆ. ವಿದ್ಯಾಭ್ಯಾಸ, ಉದ್ಯೋಗಕ್ಕಾಗಿ ಇರಾನ್‌ನಲ್ಲಿ ನೆಲೆಸಿದ್ದಾರೆ. ಅಲೀಪುರದಿಂದ ಇರಾನ್ ಜೊತೆಗಿ ಮದುವೆ ಸಂಬಂಧಗಳು ಇವೆ. ಅಲೀಪುರದಲ್ಲಿ ಶಿಯಾ ಮುಸ್ಲಿಮರೇ ಪ್ರಾಬಲ್ಯ ಸಾಧಿಸಿದ್ದಾರೆ. 80ರ ದಶಕದಲ್ಲಿ ಆಯತೊಲ್ಲ ಖಮೇನಿ ಇದೇ ಅಲೀಪುರಕ್ಕೆ ಭೇಟಿ ನೀಡಿದ್ದರು. ಈ ಭೇಟಿ ಬಳಿಯ ಇಲ್ಲಿಯ ಆಸ್ಪತ್ರೆ ಖಮೇನಿ ಆಸ್ಪತ್ರೆ ಎಂದು ಮರುನಾಮಕರಣ ಮಾಡಲಾಗಿದೆ.
ಚಿಕ್ಕಬಳ್ಳಾಪುರದ ಅಲೀಪುರದಲ್ಲಿ ಖಮೇನಿ ಹತ್ಯೆಗೆ 3 ದಿನ ಶೋಕಾಚರಣೆ ಘೋಷಣೆ ಮಾಡಲಾಗಿದೆ. ಮುಸ್ಲಿಮರು ಬೀದಿ ಬಿದಿಯಲ್ಲಿ ಅಮೆರಿಕ ವಿರುದ್ದ ಪ್ರತಿಭಟನೆ ಮಾಡಿದ್ದಾರೆ. ಮೂರು ದಿನಗಳ ಕಾಲ ಅಲೀಪುರ ಗ್ರಾಮದಲ್ಲಿ ಶೋಕಚರಣೆ ಮಾಡಲು ನಿರ್ಧಾರಿಸಲಾಗಿದೆ. ಇತ್ತ ಎಲ್ಲಾ ಅಂಗಡಿ ಮುಂಗಟ್ಟುಗಳು ಮುಚ್ಚಿ ಸ್ವಯಂಘೋಷಿತ ಬಂದ್ ಮಾಡಲಾಗಿದೆ. ಇಷ್ಟೇ ಅಲ್ಲ ಪ್ರತಿ ಮನೆ ಮೇಲೆ ಕಪ್ಪು ಬಾವುಟ ಹಾರಿಸಲು ನಿರ್ಧಾರ ಮಾಡಲಾಗಿದೆ.
ಇರಾನ್ ಮೇಲೆ ಅಮೆರಿಕ ಇಸ್ರೇಲ್ ನಡೆಸುತ್ತಿರುವ ದಾಳಿಯನ್ನು ಹಲವು ದೇಶಗಳು ಖಂಡಿಸಿದೆ. ಭಾರತ ಸೇರಿದಂತೆ ಹಲವು ರಾಷ್ಟ್ರಗಳು ಶಾಂತಿಯ ಮಾತುಕತೆಗೆ ಒತ್ತಾಯಿಸಿದೆ. ಇತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಖಮೇನಿ ಹತ್ಯೆಯನ್ನು ಖಂಡಿಸಿದ್ದಾರೆ. ಇದೇ ವೇಳೆ ಅಮೆರಿಕದ ಆಕ್ರಮಣಕಾರಿ ನೀತಿ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ.