ಉಪಚುನಾವಣೆಗೆ ಸ್ಪರ್ಧೆ ಮಾಡಲು ನನಗೆ ಇಷ್ಟವಿಲ್ಲ. ಈ ಬಗ್ಗೆ ಈಗಾಗಲೇ ವರಿಷ್ಠರ ಗಮನಕ್ಕೆ ತಂದಿದ್ದೇನೆ ಎಂದು ಜೆಡಿಎಸ್ ಮಾಜಿ ಶಾಸಕ ಕೆ ಪಿ ಬಚ್ಚೇಗೌಡ ಹೇಳಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ ಅವರು, ಬೈ ಎಲೆಕ್ಷನ್ ಸ್ಪರ್ಧೆ ಬಗ್ಗೆ ಮಾತನಾಡಿದ್ದಾರೆ.
ಚಿಕ್ಕಬಳ್ಳಾಪುರ(ನ.13): ಉಪಚುನಾವಣೆಗೆ ಸ್ಪರ್ಧೆ ಮಾಡಲು ನನಗೆ ಇಷ್ಟವಿಲ್ಲ. ಈ ಬಗ್ಗೆ ಈಗಾಗಲೇ ವರಿಷ್ಠರ ಗಮನಕ್ಕೆ ತಂದಿದ್ದೇನೆ ಎಂದು ಜೆಡಿಎಸ್ ಮಾಜಿ ಶಾಸಕ ಕೆ ಪಿ ಬಚ್ಚೇಗೌಡ ಹೇಳಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ ಅವರು, ಬೈ ಎಲೆಕ್ಷನ್ ಸ್ಪರ್ಧೆ ಬಗ್ಗೆ ಮಾತನಾಡಿದ್ದಾರೆ.
ಉಪಚುನಾವಣೆಗೆ ಸ್ಪರ್ಧೆ ಮಾಡಲು ನನಗೆ ಇಷ್ಟವಿಲ್ಲ. ಈ ಬಗ್ಗೆ ಈಗಾಗಲೇ ವರಿಷ್ಠರ ಗಮನಕ್ಕೆ ತಂದಿದ್ದೇನೆ. ನೀವೆ ನಿಲ್ಲಬೇಕು ಅನ್ನೋ ಒತ್ತಡ ಹಾಕಿದ್ದಾರೆ. ಬೇರೆ ಪ್ರಬಲ ಅಭ್ಯರ್ಥಿಯನ್ನು ಹುಡುಕಿ ಎಂದು ಹೇಳಿದ್ದೇನೆ ಎಂದಿದ್ದಾರೆ.
ಅನರ್ಹರ ತೀರ್ಪು ಬೆನ್ನಲ್ಲೇ ಲಕ್ಷ್ಮೀ ಹೆಬ್ಬಾಳ್ಕರ್ ದಿಢೀರ್ ಸಿಎಂ ಭೇಟಿ: ಅಸಲಿ ಕಾರಣವೇನು..?
ಪಕ್ಷ ಉಳಿಸೋ ಕೆಲಸವನ್ನು ಮಾಡೋಣ ಎಂದಿದ್ದೇನೆ. ಬುಧವಾರದ ಸಭೆಯಲ್ಲಿ ಅಭ್ಯರ್ಥಿ ಯಾರಾಗ್ತಾರೆ, ನಾಮಪತ್ರ ಸಲ್ಲಿಕೆ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ಬಚ್ಚೇಗೌಡ ಸುವರ್ಣ ನ್ಯೂಸ್‌ಗೆ ತಿಳಿಸಿದ್ದಾರೆ.
ಸುಧಾಕರ್ ಮನೆಗಳು ಇಬ್ಭಾಗವಾಗಿದೆ:
ಕಾಂಗ್ರೆಸ್, ಅನರ್ಹ ಶಾಸಕ ಸುಧಾಕರ್ ಮನೆಗಳು ಇಬ್ಭಾಗವಾಗಿದೆ. ಎಲ್ಲಿ ಯಾರು ಉಳಿದುಕೊಳ್ತಾರೆ ಅನ್ನೋ ಗೊಂದಲದಲ್ಲಿದ್ದಾರೆ. ನಮ್ಮ ಪಕ್ಷ ಸುಭದ್ರವಾಗಿದೆ. ಕಾರ್ಯಕರ್ತರೆಲ್ಲ ಗಟ್ಟಿಯಾಗಿದ್ದಾರೆ. ಚುನಾವಣೆಗಾಗಿ ನಾವು ಯಾವುದೇ ಸಿದ್ಧತೆಗಳನ್ನು ನಡೆಸಿಲ್ಲ. ಇಂದು ವರಿಷ್ಠರು ಸಭೆ ಕರೆದಿದ್ದಾರೆ. ಎಲ್ಲ ಮುಖಂಡರು ಸಭೆಗೆ ಹೋಗ್ತಿದ್ದೇವೆ. ನಾಳೆ, ನಾಡಿದ್ದು ಸಭೆ ಸೇರಿ ಕಾರ್ಯಕರ್ತರ ಜೊತೆ ಚರ್ಚೆ ನಡೆಸುತ್ತೇವೆ ಎಂದಿದ್ದಾರೆ.
‘ಪ್ರಧಾನಿ ಯಾರಿಗೂ ನಾಮ ಹಾಕಿಲ್ಲ, ನಿಮಗೆ ನೀವೇ ನಾಮ ಹಾಕಿಕೊಂಡಿದ್ದೀರಿ’