ಗಾಯಕನ ಮೇಲೆ ಕಾಂಗ್ರೆಸ್ ನಾಯಕನ ನೋಟಿನ ಸುರಿಮಳೆ

By Kannadaprabha News  |  First Published Nov 13, 2019, 11:13 AM IST

ರಾಜ್ಯದಲ್ಲಿ 15 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದ್ದು, ಇಲ್ಲಿ  ನೀತಿ ಸಂಹಿತೆ ಜಾರಿಯಲ್ಲಿದ್ದರೂ ಧಾರ್ಮಿಕ ಕಾರ್ಯಕ್ರಮದಲ್ಲಿ ಗಾಯಕನ ಮೇಲೆ ನೋಟುಗಳ ಸುರಿಮಳೆ ಮಾಡುವ ಮೂಲಕ ಕಾಂಗ್ರೆಸ್ ಮುಖಂಡರೊ ಬ್ಬರು ಟೀಕೆಗೆ ಗುರಿಯಾಗಿದ್ದಾರೆ. 


ಚಿಕ್ಕಬಳ್ಳಾಪುರ (ನ.13): ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಧಾರ್ಮಿಕ ಕಾರ್ಯಕ್ರಮದಲ್ಲಿ ಗಾಯಕನ ಮೇಲೆ ನೋಟುಗಳ ಸುರಿಮಳೆ ಮಾಡುವ ಮೂಲಕ ಕಾಂಗ್ರೆಸ್ ಮುಖಂಡರೊ ಬ್ಬರು ಟೀಕೆಗೆ ಗುರಿಯಾಗಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ, ಜಿಲ್ಲಾ ವಕ್ಫ್ ಬೋರ್ಡಿನ ಮಾಜಿ ಅಧ್ಯಕ್ಷ ಎಂ.ರಫೀ ವುಲ್ಲಟೀಕೆಗೆ ಗುರಿಯಾದ ವ್ಯಕ್ತಿಯಾಗಿದ್ದಾರೆ.

Tap to resize

Latest Videos

ಇವರು ಗಾಯಕರೊಬ್ಬರ ಮೇಲೆ ಕಂತೆಕಂತೆ ಹಣ ಚೆಲ್ಲುವ ಮೂಲಕ ಅತಿರೇಕದ ವರ್ತನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಚಿಂತಾಮಣಿ ತಾಲೂಕಿನ ಪ್ರಮುಖ ಧಾರ್ಮಿಕ ಕ್ಷೇತ್ರವಾಗಿರುವ ಮುರಗಮಲ್ಲ ಎಂಬಲ್ಲಿ ಮೂರು ದಿನಗಳಿಂದ ಉರೂಸ್ ಕಾರ್ಯಕ್ರಮ ನಡೆಯುತ್ತಿದೆ. ಸೋಮವಾರ ರಾತ್ರಿ ಗಂಧೋತ್ಸವ ಮತ್ತು ಕವ್ವಾಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಗಾಯಕ ಹಾಡುವಾಗ ವೇದಿಕೆ ಹತ್ತಿ ನೋಟಿನ ಸುರಿಮಳೆ ಮಾಡಲಾಗಿದೆ.

click me!