'ಗುಂಡೂರಾವ್ KPCC ಅಧ್ಯಕ್ಷರಾದ ದಿನವೇ ಕಾಂಗ್ರೆಸ್ ಸತ್ತೋಯ್ತು'..!

By Kannadaprabha News  |  First Published Oct 19, 2019, 2:52 PM IST

ದಿನೇಶ್ ಗುಂಡೂರಾವ್ ಅವರು ಕೆಪಿಸಿಸಿ ಅಧ್ಯಕ್ಷರಾದ ದಿನವೇ ಕಾಂಗ್ರೆಸ್ ಪಕ್ಷ ಸತ್ತು ಹೋಗಿದೆ ಎಂದು ಅನರ್ಹ ಶಾಸಕ ಡಾ. ಕೆ. ಸುಧಾಕರ ಅವರು ವಾಗ್ದಾಳಿ ನಡೆಸಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಬಗ್ಗೆ ಮಾತನಾಡುವ ನೈತಿಕತೆ ದಿನೇಶ್ ಗೆ ಇಲ್ಲ ಎಂದು ಅವರು ಹೇಳಿದ್ದಾರೆ.


ಚಿಕ್ಕಬಳ್ಳಾಪುರ(ಅ.19): ದಿನೇಶ್ ಗುಂಡೂರಾವ್ ಅವರು ಕೆಪಿಸಿಸಿ ಅಧ್ಯಕ್ಷರಾದ ದಿನವೇ ಕಾಂಗ್ರೆಸ್ ಪಕ್ಷ ಸತ್ತು ಹೋಗಿದೆ ಎಂದು ಅನರ್ಹ ಶಾಸಕ ಡಾ. ಕೆ. ಸುಧಾಕರ ಅವರು ವಾಗ್ದಾಳಿ ನಡೆಸಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಬಗ್ಗೆ ಮಾತನಾಡುವ ನೈತಿಕತೆ ದಿನೇಶ್ ಗೆ ಇಲ್ಲ ಎಂದು ಅವರು ಹೇಳಿದ್ದಾರೆ.

"

Tap to resize

Latest Videos

ಚಿಕ್ಕಬಳ್ಳಾಪುರದ ಮಂಡಿಕಲ್ ಗ್ರಾಮದಲ್ಲಿ ಐಟಿಐ ಕಾಲೇಜು ಕಟ್ಟಡ ಉದ್ಘಾಟನೆ ಆಗಮಿಸಿದ ಅಂದರ್ಭ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋತ ದಿನವೇ ರಾಜೀನಾಮೆ ನೀಡಬೇಕಿತ್ತು ಎಂದಿದ್ದಾರೆ.

'ಸಿಎಂಗೆ ಏನ್ ಕೇಳಿದ್ರೂ ನನ್ನಲ್ಲಿ ಹಣ ಇಲ್ಲಾ ಅಂತಾರೆ, ಇವ್ರಿಗೇನ್ ಹೇಳ್ಬೇಕು'..?

ಮಂಗಳವಾರ ಸುಪ್ರೀಂ ಕೋರ್ಟ್ ನಲ್ಲಿ ಅನರ್ಹ ಶಾಸಕರ ಅರ್ಜಿ ವಿಚಾರಣೆ ನಡೆಯಲಿದೆ. ಈಗಾಗಲೇ ಕೆಲ‌ ಸ್ನೇಹಿತರು ದೆಹಲಿಗೆ ತೆರಳಿದ್ದಾರೆ. ನಾನು ಕೂಡ ದೆಹಲಿಗೆ ಹೋಗಬೇಕು. ಸಚಿವ ನಾಗೇಶ್ ಅವರ ಮೊದಲ‌ ಭೇಟಿ ಆದ ಕಾರಣ ಹೋಗಲು ಆಗಲಿಲ್ಲ ಎಂದಿದ್ದಾರೆ. ಸಂಜೆ ದೆಹಲಿಗೆ ಹೋಗುವುದಾಗಿ ಹೇಳಿದ್ದಾರೆ.

ಇನ್ನೂ ಸಿದ್ದರಾಮಯ್ಯ ಕರ್ನಾಟಕದ ಮುಖ್ಯಮಂತ್ರಿ!

click me!