Chamarajanagara ಬ್ಯಾಗ್ ನಲ್ಲಿ ನವಜಾತ ಗಂಡು ಶಿಶು ಪತ್ತೆ!

By Suvarna NewsFirst Published Apr 25, 2022, 11:34 AM IST
Highlights

ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಬ್ಯಾಗ್‌ನಲ್ಲಿ  ನವಜಾತ ಗಂಡು ಶಿಶು ಪತ್ತೆಯಾಗಿದೆ.

ಚಾಮರಾಜನಗರ (ಏ.25):  ನವಜಾತ ಗಂಡು ಶಿಶುವನ್ನು (New born Baby) ಬ್ಯಾಗ್‌ನಲ್ಲಿಟ್ಟು ಹೋಗಿರುವ ಮನಕಲಕುವ ಘಟನೆ ಚಾಮರಾಜನಗರ (Chamarajnagara) ಜಿಲ್ಲೆಯ ಹನೂರು (Hanur) ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದಿದೆ. ಬಟ್ಟೆ ಬ್ಯಾಗ್ ನಲ್ಲಿ ನವಜಾತ ಶಿಶು ಇಟ್ಟು ಅದನ್ನು ಬಸ್ ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದಾರೆ. ಬಟ್ಟೆ ಬ್ಯಾಗ್ ಅಲಗಾಡುತ್ತಿದ್ದರಿಂದ ಅನುಮಾನಗೊಂಡ ಸ್ಥಳೀಯರು  ಬ್ಯಾಗ್ ತೆರೆದು ನೋಡಿದಾಗ ನವಜಾತ ಶಿಶು ಇರುವುದು ಕಂಡುಬಂದಿದೆ. 

ಎರಡ್ಮೂರು ದಿನಗಳ ಈ ನವಜಾತ ಶಿಶು ಜೀವಂತವಾಗಿದ್ದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಸ್ಥಳಕ್ಕೆ ಹನೂರು ಪೊಲೀಸರು ಭೇಟಿ ನೀಡಿ
ಸಿಸಿ ಕ್ಯಾಮೆರಾ ಪರಿಶೀಲಿಸಿ ವಾರಸುದಾರರ ಪತ್ತೆಗೆ ಮುಂದಾಗಿದ್ದಾರೆ.

ಸದ್ಯಕ್ಕೆ ಈ  ಮಗುವಿಗೆ ಹನೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಾರೈಕೆ ಮಾಡಲಾಗುತ್ತಿದೆ. ಅನೈತಿಕ ಸಂಬಂಧಿಂದ ಹುಟ್ಟಿದ ಕಾರಣಕ್ಕೆ ಹೀಗೆ ಮಾಡಲಾಗಿದೆಯೇ ಅಥವ ಯಾರಾದರೂ ಮಗವನ್ನು ಅಪಹರಿಸಿ ಇಲ್ಲಿ ತಂದು ಇಟ್ಟು ಹೋಗಿದ್ದಾರಾ, ಅಥವಾ ಯಾವ ಕಾರಣಕ್ಕೆ ಈ ಮಗು ಪೋಷಕರಿಗೆ ಬೇಡವಾಯ್ತು, ಈ ನತದೃಷ್ಟ ಮಗುವಿನ ಪೋಷಕರಾದರು ಯಾರು ಎಂಬುದು ತನಿಖೆಯಿಂದ ತಿಳಿದು ಬರಬೇಕಿದೆ. 

Covid 19 Cases ರಾಜ್ಯದಲ್ಲಿ ಕೊರೋನಾ 4ನೇ ಅಲೆ ಲಕ್ಷಣ ಗೋಚರ, ತಜ್ಞರ ಸಮಿತಿ ಎಚ್ಚರಿಕೆ!

ಮದ್ವೆಗೂ ಮುನ್ನವೇ ಗರ್ಭಿಣಿ ಮಾಡಿದ, ಬಳಿಕ ಯಾರಿಗೂ ಗೊತ್ತಾಗದಂತೆ ತಾಳಿಕಟ್ಟಿ ಎಸ್ಕೇಪ್: ಹಣ ಅಂದ್ರೆ ಹೆಣನೂ ಬಾಯಿ ಬಿಡುತ್ತೆ ಅನ್ನೋ ಗಾದೆ ಇದೆ. ಹಣಕ್ಕಾಗಿ ಕೆಲವರು ಮಾಡಬಾರದ್ದೆನ್ನೆಲ್ಲಾ ಮಾಡ್ತಾರೆ. ಹಾಗೇನೆ ಇಲ್ಲೊಬ್ಬ ಯುವಕ   ಹಣಕ್ಕಾಗಿ  ಮದುವೆಯಾಗಿ ಒಂದು  ಹುಡುಗಿಯ ಬಾಳನ್ನೇ ಹಾಳು ಮಾಡಿದ್ದಾನೆ. ಹುಡುಗಿ ಈಗ ತನಗೆ ಹಣ ಬೇಡ, ಮದುವೆಯಾದ ಹುಡುಗನೊಂದಿಗೆ ಬಾಳು ಬೇಕು ಎಂದು ಕಣ್ಣೀರಿಡುತ್ತಿದ್ದಾಳೆ

ಹುಡುಗಿ ಬಳಿ ಲಕ್ಷಾಂತರ ರೂಪಾಯಿ  ನಗದು ಹಣ, ಚಿನ್ನದ ಒಡವೆ  ಇತ್ತು.  ಈಕೆಯ  ಹಣದ ಮೇಲೆ ಕಣ್ಣಿಟ್ಟ ಯುವಕನೊಬ್ಬ ಈಕೆಯನ್ನು ಪುಸಲಾಯಿಸಿ  ಮದುವೆಯಾಗಿ ಹಣ ಒಡವೆ ಎಲ್ಲವನ್ನು ಲಪಟಾಯಿಸಿ  ಕೈ ಕೊಟ್ಟಿದ್ದಾನೆ . ಈಕೆಯ ಹೆಸರು ನದಿಯಾಬಾಯಿ. ತಮಿಳುನಾಡಿನ ತಿರುಪುರು ಬಳಿ ಟಿಶರ್ಟ್ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದಳು. ಈಕೆಯ ತಾಯಿ ರಾಣಿಬಾಯಿ ಕಳೆದ ವರ್ಷ ಅಪಘಾತ ವೊಂದರಲ್ಲಿ ತೀರಿಕೊಂಡು ಈ ಸಂಬಂಧ ರಾಣಿಬಾಯಿ ಕುಟುಂಬಕ್ಕೆ ,12 ಲಕ್ಷ ರೂಪಾಯಿ ಪರಿಹಾರ ಸಿಕ್ಕಿತ್ತು. ಈ ಹಣವೆಲ್ಲಾ ರಾಣಿವಾಯಿ ಮಗಳು ನದಿಯಾಬಾಯಿ ಬಳಿ ಇತ್ತು. ತಾಯಿ ತೀರಿಕೊಂಡ ಮೇಲೆ ತಾಯಿಯ ತವರು ಚಾಮರಾಜನಗರ ತಾಲೋಕಿನ ಮೂಕನಪಾಳ್ಯಕ್ಕೆ  ಬಂದಿದ್ದ ನದಿಯಾಬಾಯಿ ಇಲ್ಲಿಯೇ ನೆಲೆಸಿದ್ದಳು. 

ಆದರೆ ತಿರುಪೂರಿನ ಟಿಶರ್ಟ್ ಕಂಪನಿಯಲ್ಲಿ ಕೆಲಸ ಮುಂದುವರಿಸಿದ್ದ ನದಿಯಾಬಾಯಿ ಎರಡು ತಿಂಗಳಿಗೊಮ್ಮೆ ಮೂಕನಪಾಳ್ಯಕ್ಕೆ ಬಂದು ಹೋಗುತ್ತಿದ್ದಳು.ಈಕೆಯ ಬಳಿ ಇದ್ದ ಹಣ ಒಡವೆ ಹಾಗು ಪೂರ್ವಪರ ಎಲ್ಲವನ್ನು ಅರಿತಿದ್ದ ಮೂಕನಪಾಳ್ಯದವನೇ ಆದ  ಚಲಪತಿ ಎಂಬ ಯುವಕ  ಇನ್ಸ್ಟಾಗ್ರಾಮ್ ನಲ್ಲಿ ಹುಡುಗಿಯನ್ನು ಪರಿಚಯ ಮಾಡಿಕೊಂಡಿದ್ದಾನೆ.‌ ಪರಿಚಯ ಪ್ರೀತಿ ಪ್ರೇಮಕ್ಕೆ ತಿರುಗಿದೆ.ಬಳಿಕ ಯಾರಿಗೂ ತಿಳಿಯದಂತೆ ಮದುವೆಯು ಆಗಿದ್ದಾರೆ. 

ಮದುವೆಗೂ ಮೊದಲೆ ಈಕೆಯನ್ನು ಗರ್ಬಿಣಿ ಮಾಡಿ ಅಬಾರ್ಷನ್ ಮಾಡಿಸಿದ್ದ ಎನ್ನಲಾಗಿದೆ.  ನದಿಯಾಬಾಯಿಯನ್ನು ಮದುವೆಯಾಗಿ  ತನ್ನ ಮನೆಗೆ ಕರೆದೊಯ್ದ  ಚಲಪತಿ ಒಂದಷ್ಟು ದಿನ  ಚನ್ನಾಗಿ ನೋಡಿಕೊಂಡು ಆಕೆ ಬಳಿ ಇದ್ದ ಹಣ ಒಡವೆ ಲಪಟಾಯಿಸಿದ್ದಾನೆ. ಬಳಿಕ ಇಲ್ಲ ಸಲ್ಲದ ಆರೋಪ ಹೊರಿಸಿ ಕಿರುಕುಳ ನೀಡಿ ಹೆಚ್.ಡಿ.ಕೋಟೆಯಲ್ಲಿರುವ ಈಕೆಯ  ಸಂಬಂಧಿಕರ ಮನೆಗೆ ಕರದೊಯ್ದು ಕೈಕೊಟ್ಟಿದ್ದಾನೆ. 

HUBLI VIOLENCE ಹುಬ್ಬಳ್ಳಿ ಗಲಭೆಕೋರರ ವಿರುದ್ಧ ಕೋಕಾ ದಾಖಲಿಸಿ, ಮುತಾಲಿಕ್ ಆಗ್ರಹ

ತಾನು ಮೋಸ ಹೋದ ಬಗ್ಗೆ ಅರಿತ  ನದಿಯಾಬಾಯಿ, ತನ್ಮ ಸೋದರಮಾವನಿಗೆ ಕರೆ ಮಾಡಿ ಎಲ್ಲ ವಿಷಯ ತಿಳಿಸಿದ್ದಾಳೆ. ಆಕೆಯನ್ನು ಹೆಚ್.ಡಿ.ಕೋಟೆಯಿಂದ ಕರೆತಂದ ಸೋದರಮಾವ ಬಾಲಾಜಿ ನಾಯಕ , ನದಿಯಾಬಾಯಿಗೆ ನ್ಯಾಯ ಕೊಡಿಸುವಂತೆ ಚಾಮರಾಜನಗರದ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದರೆ ಯಾವುದೇ ಪ್ರಕರಣ ದಾಖಲಿಸಿಕೊಳ್ಳದ  ಪೊಲೀಸರು ನೊಂದ ಯುವತಿಗೆ ನ್ಯಾಯ ಕೊಡಿಸುವಲ್ಲಿ ವಿಫಲವಾಗಿದ್ದಾರೆ. ಯುವಕನಿಂದ ಯುವತಿಗೆ  ಒಂದಷ್ಟು ಹಣ ಕೊಡಿಸಿ ಕೈತೊಳೆದುಕೊಳ್ಳಲು ಮುಂದಾಗಿದ್ದಾರೆ. ಪೊಲೀಸರಿಂದ ನ್ಯಾಯ ದೊರೆಯದೆ ಯುವತಿ ಈಗ ದಿಕ್ಕುತೋಚದಂತಾಗಿದ್ದಾಳೆ. ನನಗೆ ಹಣ ಬೇಡ, ಗಂಡನೊಂದಿಗೆ ಬಾಳು ಬೇಕು ಎಂದು ಕಣ್ಣೀರಿಡುತ್ತಿದ್ದಾಳೆ. 

click me!