ಪಶ್ಚಿಮ ರೈಲ್ವೆಯಲ್ಲಿ 3553 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.
ನವದೆಹಲಿ,(ಜ.10): ಪಶ್ಚಿಮ ರೈಲ್ವೆ, ರೈಲ್ವೆ ನೇಮಕಾತಿ ಮಂಡಳಿ (RRC) ವಿವಿಧ 3553 ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ.
ಮುಂಬೈ ವಲಯದಲ್ಲಿ ಕೆಲಸ ಮಾಡಬೇಕಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ನಿಗದಿತ ದಿನಾಂಕ ಫೆಬ್ರವರಿ 6, 2020ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೋರಲಾಗಿದೆ.
undefined
ರಾಯಚೂರು ಕೃಷಿ ವಿಶ್ವವಿದ್ಯಾಲಯದಲ್ಲಿ ನೇಮಕಾತಿ: ಅರ್ಜಿ ಹಾಕಿ
ವಿದ್ಯಾರ್ಹತೆ: ಶೇ.50 ಅಂಕಗಳೊಂದಿಗೆ SSLC (10ನೇ ತರಗತಿ) ಪಾಸ್ ಜೊತೆಗೆ ಸಂಬಂಧಿಸಿದ ಅಪ್ರೆಂಟಿಸ್ ಹುದ್ದೆಗಳಿಗೆ ಅಗತ್ಯವಿರು ಐಟಿಐ ಟ್ರೇಡ್‌ನ ವಿದ್ಯಾರ್ಹತೆ ಹೊಂದಿರಬೇಕು.
ವಯೋಮಿತಿ: ಅರ್ಜಿ ಸಲ್ಲಿಸಲು ಕನಿಷ್ಠ 15 ವರ್ಷ, ಗರಿಷ್ಟ 24 ವರ್ಷ ವಯಸ್ಸು ನಿಗದಿಪಡಿಸಲಾಗಿದ್ದು, SC/ST ಅಭ್ಯರ್ಥಿಗಳಿಗೆ 5 ವರ್ಷ, ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.
ವಿವಿಧ ಹುದ್ದೆಗೆ KPTCL ನೇಮಕಾತಿ: ಅರ್ಜಿ ಹಾಕಿ
ಅರ್ಜಿ ಶುಲ್ಕ: ಸಾಮಾನ್ಯ ಮತ್ತು ಹಿಂದುಳಿದ ಅಭ್ಯರ್ಥಿಗಳಿಗೆ 100 ರು. ಹಾಗೂ SC,ST,PwD ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ಅರ್ಜಿ ಶುಲ್ಕ ಪಾವತಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ವೇಳೆ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿದ ನಂತರ, ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕವೇ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಅಥವಾ ಇತರೆ ಇ-ವ್ಯಾಲೆಟ್ ಬಳಸಿ ಪಾವತಿಸಬಹುದು.
ಉದ್ಯೋಗದ ಸುವರ್ಣ ಅವಕಾಶ: 8000 ಹುದ್ದೆಗಳಿಗೆ SBI ಅರ್ಜಿ ಆಹ್ವಾನ
ಆಯ್ಕೆ ವಿಧಾನ: ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ವಿದ್ಯಾರ್ಹತೆ ಮೇಲೆ ಶೇಕಡ ಅಂಕಗಳ ಆಧಾರದ ಮೇಲೆ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಕಚೇರಿಯ ಅಧಿಸೂಚನೆಯಲ್ಲಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.