ಗ್ರೇಡ್ A ಮತ್ತು B ಶ್ರೇಣಿಯ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ನೇಮಕಾತಿಗೆ ಅಧಿಸೂಚನೆ ಪ್ರಕಟವಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಈ ಕೆಳಗಿನಂತಿದೆ.
ನವದೆಹಲಿ, [ಜ.01]: ಭಾರತೀಯ ರಿಸರ್ವ್ ಬ್ಯಾಂಕ್ 17 ಗ್ರೇಡ್ A ಮತ್ತು B ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ.
ಲೀಗಲ್ ಆಫೀಸರ್, ಮ್ಯಾನೇಜರ್, ಲೈಬ್ರರಿ ಪ್ರೊಫೇಶನಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು , ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು 20-01-2020ರೊಳಗೆ ಅರ್ಜಿ ಸಲ್ಲಿಸಬಹುದು.
undefined
6662 ಕಾನ್ಸ್ ಟೇಬಲ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
ಹುದ್ದೆಗಳ ವಿವರ
* ಲೈಬ್ರರಿ ಪ್ರೊಫೇಶನಲ್ (ಗ್ರೇಡ್-ಎ) - 1
* ಲೀಗಲ್ ಆಫೀಸರ್ (ಗ್ರೇಡ್-ಬಿ) - 1
* ಮ್ಯಾನೇಜರ್ (ಟೆಕ್ನಿಕಲ್- ಸಿವಿಲ್) - 2
* ಅಸಿಸ್ಟಂಟ್ ಮ್ಯಾನೇಜರ್ - 8
* ಅಸಿಸ್ಟಂಟ್ ಮ್ಯಾನೇಜರ್ (ಪ್ರೋಟೋಕಾಲ್ ಮತ್ತು ಸೆಕ್ಯೂರಿಟಿ) - 5
ಒಟ್ಟು ಹುದ್ದೆಗಳ ಸಂಖ್ಯೆ - 17
ವಿದ್ಯಾರ್ಹತೆ: ಆಯಾ ಹುದ್ದೆಗಳಿಗೆ ಅನುಗುಣವಾಗಿ ಕಾನೂನು ಪದವಿ / ಸಿವಿಲ್ ಇಂಜಿನಿಯರಿಂಗ್ / ಲೈಬ್ರರಿ ಸೈನ್ಸ್ ಮತ್ತು ನಿಗದಿಪಡಿಸಿದ ವಿದ್ಯಾರ್ಹತೆ ಜತೆಗೆ ನಿಗದಿತ ಕಾರ್ಯಾನುಭವವನ್ನು ಹೊಂದಿರಬೇಕು.
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದಲ್ಲಿ ವಿವಿಧ ಹುದ್ದೆಗಳ ನೇಮಕಾತಿ
ವಯೋಮಿತಿ: ಕನಿಷ್ಟ 21, ಗರಿಷ್ಠ 32 ವಯೋಮಿತಿಯುಳ್ಳ ಅಭ್ಯರ್ಥಿಗಳು ಮಾತ್ರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಅರ್ಜಿ ಶುಲ್ಕ: ಸಾಮಾನ್ಯ, ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 600 ರೂ. ಪರಿಶಿಷ್ಟ ಜಾತಿ [SC] ಮತ್ತು ಪರಿಶಿಷ್ಟ ಮಂಗಡ [ST] ಅಭ್ಯರ್ಥಿಗಳಿಗೆ 300 ರೂ. ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ.
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ರಿಸರ್ವ್ ಬ್ಯಾಂಕ್ ಅಧಿಕೃತ ವೆಬ್‌ಸೈಟ್ www.rbi.org.in ಗೆ ಭೇಟಿ ನೀಡಿ ಆನ್‌ಲೈನ್ ಅರ್ಜಿ ಸಲ್ಲಿಸಬೇಕು.