ಭಾರತೀಯ ನೌಕಾಸೇನೆಯ ವೆಸ್ಟರ್ನ್ ನೇವಲ್ ಕಮಾಂಡ್ ವಿಭಾಗದಲ್ಲಿ ಖಾಲಿ ಇರುವ 127 ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಏಪ್ರಿಲ್ 26ರ ಒಳಗೆ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೋರಲಾಗಿದೆ.
ಬೆಂಗಳೂರು(ಮಾ.3): ಭಾರತೀಯ ನೌಕಾಸೇನೆಯ (indian navy) ವೆಸ್ಟರ್ನ್ ನೇವಲ್ ಕಮಾಂಡ್ (Western Naval Command ) ವಿಭಾಗದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಗ್ರೂಪ್ ಸಿ ವಿಭಾಗದ ಫಾರ್ಮಸಿಸ್ಟ್, ಫೈರ್‌ಮ್ಯಾನ್ ಸೇರಿ ಒಟ್ಟು 127 ವಿವಿಧ ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಇಚ್ಚಿಸುವವರು ಏಪ್ರಿಲ್ 26ರ ಒಳಗೆ ಆಫ್ಲೈನ್ (Offline) ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ನಮೂನೆಯನ್ನು indiannavy.nic.in ವೆಬ್‌ತಾಣದಿಂದ ಡೌನ್ಲೋಡ್ ಮಾಡಿಕೊಳ್ಳಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಒಟ್ಟು 127 ಹುದ್ದೆಗಳ ಮಾಹಿತಿ ಇಂತಿದೆ.
ಫಾರ್ಮಸಿಸ್ಟ್ : 1 ಹುದ್ದೆಗಳು
ಫೈರ್‌ಮ್ಯಾನ್ : 120 ಹುದ್ದೆಗಳು
ಪೆಸ್ಟ್ ಕಂಟ್ರೋಲ್ ವರ್ಕರ್ : 6 ಹುದ್ದೆಗಳು
ಶೈಕ್ಷಣಿಕ ವಿದ್ಯಾರ್ಹತೆ: ವೆಸ್ಟರ್ನ್ ನೇವಲ್ ಕಮಾಂಡ್ ವಿಭಾಗದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ/ಸಂಸ್ಥೆಯಿಂದ ಎಸ್ಎಸ್ಎಲ್ಸಿ ಅಥವಾ ಪದವಿ ಪೂರ್ಣಗೊಳಿಸಿರಬೇಕು.
CEERI RECRUITMENT 2022: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಸಿಇಇಆರ್‌ಐ
ವಯೋಮಿತಿ: ವೆಸ್ಟರ್ನ್ ನೇವಲ್ ಕಮಾಂಡ್ ವಿಭಾಗದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳಿಗೆ ಗರಿಷ್ಠ 56 ವರ್ಷಗಳ ವಯೋಮಿತಿ ನಿಗದಿಪಡಿಸಲಾಗಿದೆ.
ಆಯ್ಕೆ ಪ್ರಕ್ರಿಯೆ: ವೆಸ್ಟರ್ನ್ ನೇವಲ್ ಕಮಾಂಡ್ ವಿಭಾಗದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ದೈಹಿಕ ಸಾಮರ್ಥ್ಯ ಪರೀಕ್ಷೆ ಮತ್ತು ಡಾಕ್ಯುಮೆಂಟ್ ಪರಿಶೀಲನೆ ಮೂಲಕ ಆಯ್ಕೆ ಮಾಡಲಾಗುತ್ತದೆ.
ವೇತನ: ವೆಸ್ಟರ್ನ್ ನೇವಲ್ ಕಮಾಂಡ್ ವಿಭಾಗದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳು ಹುದ್ದೆಗೆ ಅನುಸಾರವಾಗಿ ವೇತನ ದೊರೆಯಲಿದೆ.
ಫಾರ್ಮಾಸಿಸ್ಟ್: ಲೆವೆಲ್ 5 ಪ್ರಕಾರ 29,200 ರೂ. ರಿಂದ 92,300 ರೂ.
ಫೈರ್‌ಮ್ಯಾನ್: ಲೆವೆಲ್ 2 ಪ್ರಕಾರ 19,900 ರೂ. ರಿಂದ 63,200 ರೂ.
ಪೆಸ್ಟ್ ಕಂಟ್ರೋಲ್ ವರ್ಕರ್: ಲೆವೆಲ್ 1 ಪ್ರಕಾರ ರೂ.18,000 ರಿಂದ 56,900 ರೂ ವೇತನ ದೊರೆಯಲಿದೆ.
ಅರ್ಜಿ ಸಲ್ಲಿಸಬೇಕಾದ ವಿಳಾಸ:
ಫ್ಲಾಗ್ ಆಫೀಸರ್
ಕಮಾಂಡಿಂಗ್-ಇನ್-ಚೀಫ್,
ಪ್ರಧಾನ ಕಛೇರಿ
ಪಶ್ಚಿಮ ನೌಕಾ ಕಮಾಂಡ್,
ಬಲ್ಲಾಡ್ ಪಿಯರ್,ಟೈಗರ್ ಗೇಟ್ ಹತ್ತಿರ
ಮುಂಬೈ 400001
BEL Recruitment 2022: ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ