ವೆಸ್ಟರ್ನ್‌ ಕೋಲ್ ಫೀಲ್ಡ್‌ನಲ್ಲಿ 965 ಅಪ್ರೆಂಟಿಸ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

By Suvarna NewsFirst Published Sep 8, 2021, 5:28 PM IST
Highlights

ಕೋಲ್‌ ಇಡಿಯಾ ಲಿಮಿಟೆಡ್‌ನ 8 ಪ್ರಮುಖ ಅಂಗಸಂಸ್ಥೆಗಳ ಪೈಕಿ ಒಂದಾಗಿರುವ ವೆಸ್ಟರ್ನ್ ಕೋಲ್ ಫೀಲ್ಡ್ ಲಿ. 965 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಯ್ಕೆಯಾದವರಿಗೆ ಸ್ಟೈಫಂಡ್ ಕೂಡ ಕಂಪನಿ ನೀಡಲಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಸೆಪ್ಟೆಂಬರ್ 21 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
 

ವೆಸ್ಟರ್ನ್ ಕೋಲ್ ಫೀಲ್ಡ್ ಲಿಮಿಟೆಡ್ (ಡಬ್ಲ್ಯೂಸಿಎಲ್) ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಒಟ್ಟು 965 ಅಪ್ರೆಂಟಿಸ್ ಹುದ್ದೆಗಳನ್ನ ನೇಮಕ ಮಾಡಿಕೊಳ್ಳಲು ಡಬ್ಲ್ಯೂಸಿಎಲ್ ತೀರ್ಮಾನಿಸಿದೆ. ಒಂದು ವರ್ಷದ ತರಬೇತಿಗಾಗಿ ಪದವಿ/ತಂತ್ರಜ್ಞ ಅಪ್ರೆಂಟಿಸ್ ಹಾಗೂ ಟ್ರೇಡ್ ಅಪ್ರೆಂಟಿಸ್ ನೇಮಕಾತಿಗಾಗಿ ಎರಡು ಪ್ರತ್ಯೇಕ ಅಧಿಸೂಚನೆಗಳನ್ನು ಬಿಡುಗಡೆ ಮಾಡಿದೆ.  

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ - http://westerncoal.in ಮೂಲಕ ಟ್ರೇಡ್ ಅಪ್ರೆಂಟಿಸ್‌ಶಿಪ್ ತರಬೇತಿ ಅಥವಾ ಪದವಿ/ಟೆಕ್ನಿಷಿಯನ್ ಅಪ್ರೆಂಟಿಸ್‌ಶಿಪ್‌ಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಆನ್ ಲೈನ್ ಹೊರತುಪಡಿಸಿ, ಡಬ್ಲ್ಯೂಸಿಎಲ್‌ ಬೇರೆ ಯಾವುದೇ ಮಾದರಿಯ ಅರ್ಜಿಯನ್ನು ಸ್ವೀಕರಿಸುವುದಿಲ್ಲ. ಆನ್‌ಲೈನ್‌ನಲ್ಲಿ ಸೆಪ್ಟೆಂಬರ್ 6ರಿಂದ ಅರ್ಜಿ ಸಲ್ಲಿಕೆ ಶುರುವಾಗಿದ್ದು, ಸೆಪ್ಟೆಂಪರ್ 21 ಕೊನೆಯ ದಿನಾಂಕವಾಗಿದೆ.

ರಕ್ಷಣಾ ಇಲಾಖೆಯಲ್ಲಿ ಎಸ್ಸೆಸ್ಸೆಲ್ಸಿ ಪಾಸಾದವರಿಗೆ ಜಾಬ್, 400 ಹುದ್ದೆಗಳಿಗೆ ನೇಮಕಾತಿ

ಪದವೀಧರ ಅಪ್ರೆಂಟಿಸ್ 101, ತಂತ್ರಜ್ಞ ಅಪ್ರೆಂಟಿಸ್ 215, ಕಂಪ್ಯೂಟರ್ ಆಪರೇಟರ್ ಮತ್ತು ಪ್ರೋಗ್ರಾಮಿಂಗ್ ಅಸಿಸ್ಟ್ 219, ಡ್ರಾಫ್ಟ್ಸ್‌ಮನ್ (ಸಿವಿಲ್) 28, ಎಲೆಕ್ಟ್ರಿಷಿಯನ್ 250, ಫಿಟ್ಟರ್ 242, ಮೆಕ್ಯಾನಿಕ್ (ಡೀಸೆಲ್) 36, ಮೆಕ್ಯಾನಿಸ್ಟ್ 12, ಮಸೂನ್ (ಕಟ್ಟಡ ನಿರ್ಮಾಣಕಾರ) 9,  ಪಂಪ್ ಆಪರೇಟರ್ ಮತ್ತು ಮೆಕ್ಯಾನಿಕ್ 16, ಸರ್ವೇಯರ್ 20, ಟರ್ನರ್ 17, ವೆಲ್ಡರ್ (ಗ್ಯಾಸ್ ಮತ್ತು ಎಲೆಕ್ಟ್ರಿಕ್) 76 ಹಾಗೂ ವೈರ್‌ಮ್ಯಾನ್ 40 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಹರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ತಮ್ಮ ಶೈಕ್ಷಣಿಕ ಪ್ರಮಾಣಪತ್ರ ಮತ್ತು ವಾಸಸ್ಥಳ ಪ್ರಮಾಣಪತ್ರಗಳಲ್ಲಿ ಉಲ್ಲೇಖಿಸಿರುವ ವಿವರಗಳೊಂದಿಗೆ ಪ್ರಸ್ತುತ ಉಳಿತಾಯ ಬ್ಯಾಂಕ್ ಖಾತೆ ಸಂಖ್ಯೆಯನ್ನು ಹೊಂದಿರಬೇಕು. ಯಾವುದೇ ಸಂಸ್ಥೆಯಲ್ಲಿ ಪ್ರಸ್ತುತ ಅಪ್ರೆಂಟಿಸ್‌ಶಿಪ್ ತರಬೇತಿಯನ್ನು ಪಡೆದ ಅಥವಾ ಪಡೆಯುತ್ತಿರುವ ಅಭ್ಯರ್ಥಿಗಳು ಅಪ್ರೆಂಟಿಸ್‌ಶಿಪ್ ತರಬೇತಿಗೆ ಅರ್ಹರಾಗಿರುವುದಿಲ್ಲ.

ಒಂದು ವರ್ಷದ ITI ಅಪ್ರೆಂಟಿಸ್ ಗಳಿಗೆ ತಿಂಗಳಿಗೆ 7,700ರೂ. ಸ್ಟೈಫಂಡ್ ಸಿಗಲಿದೆ. ಹಾಗೇ ಎರಡು ವರ್ಷಗಳ ITI ಅಪ್ರೆಂಟಿಸ್ ಗೆ ತಿಂಗಳಿಗೆ 8,050 ರೂ. ಸಿಗಲಿದೆ. ಇನ್ನು ಪದವೀಧರ ಅಪ್ರೆಂಟಿಸ್ ಅಭ್ಯರ್ಥಿಗಳಿಗೆ ಮಾಸಿಕ 9,000 ರೂ. ಹಾಗೂ ತಂತ್ರಜ್ಞ ಅಪ್ರೆಂಟಿಸ್‌ಗೆ ತಿಂಗಳಿಗೆ 8,000 ರೂ. ಸ್ಟೈಫಂಡ್  ದೊರೆಯಲಿದೆ. ಸ್ಟೈಫಂಡ್ ಹೊರತುಪಡಿಸಿ ಇತರ ಯಾವುದೇ ಭತ್ಯೆಗಳು/ಪ್ರಯೋಜನಗಳನ್ನು ಇರುವುದಿಲ್ಲ.

ಬಿಎಚ್ಇಎಲ್‌ನಲ್ಲಿ ಅಪ್ರೆಂಟಿಸ್‌ ಹುದ್ದೆಗಳಿಗೆ ಆಹ್ವಾನ, ಅರ್ಜಿ ಹಾಕಿ

ಐಟಿಐ ಅಪ್ರೆಂಟಿಸ್ ಹುದ್ದೆಗೆ ಅಭ್ಯರ್ಥಿಯು ಸಂಬಂಧಿತ ಟ್ರೇಡ್ ನಲ್ಲಿ ಐಟಿಐ ಕೋರ್ಸ್ ಮಾಡಿರಬೇಕು. ಪದವೀಧರ ಅಪ್ರೆಂಟಿಸ್ ಹುದ್ದೆಗೆ ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಲ್ಲಿ ಮೈನಿಂಗ್ ಇಂಜಿನಿಯರಿಂಗ್ ನಲ್ಲಿ ಡಿಗ್ರಿ ಪೂರೈಸಿರಬೇಕು.ಹಾಗೇ ಟೆಕ್ನಿಷಿಯನ್ ಅಪ್ರೆಂಟಿಸ್ ಹುದ್ದೆಗೆ ಮಾನ್ಯತೆ ಪಡೆದ ಸಂಸ್ಥೆಯಲ್ಲಿ ಮೈನಿಂಗ್ & ಮೈನ್ ಸರ್ವೇಯಿಂಗ್/ ಮೈನಿಂಗ್ ನಲ್ಲಿ ಫುಲ್ ಟೈಮ್ ಡಿಪ್ಲೋಮಾ ಪೂರೈಸಿರಬೇಕು.
 

ಅರ್ಹತಾ ಪರೀಕ್ಷೆಯಲ್ಲಿ ಪಡೆದ ಶೇಕಡಾವಾರು ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅಭ್ಯರ್ಥಿಗಳ ಸಮಾನ ಶೇಕಡಾವಾರು ಅಂಕಗಳಿದ್ದಲ್ಲಿ ಜನ್ಮ ದಿನಾಂಕವನ್ನು ಜೇಷ್ಠತೆಯಾಗಿ ತೆಗೆದುಕೊಳ್ಳಲಾಗುತ್ತದೆ.

ಆಯ್ಕೆಯಾದ ಅಭ್ಯರ್ಥಿಗಳನ್ನು ದಾಖಲೆ ಪರಿಶೀಲನೆಗಾಗಿ ಕರೆಯಲಾಗುವುದು. ದಾಖಲೆಗಳ ಪರಿಶೀಲನೆಯ ನಂತರ ಅಭ್ಯರ್ಥಿಗಳ ಅಂತಿಮ ಆಯ್ಕೆಯನ್ನು ಮಾಡಲಾಗುತ್ತದೆ. ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಫಿಟ್ನೆಸ್ ಪ್ರಮಾಣಪತ್ರವನ್ನು ಪಡೆದ ನಂತರ ಮೆರಿಟ್ ಆಧಾರದ ಮೇಲೆ ತರಬೇತಿಗೆ ಆಯ್ಕೆ ಮಾಡಲಾಗುತ್ತದೆ. ಕೊನೆಗೆ ಅವಧಿ ಮುಗಿದ ಬಳಿಕ ಅಪ್ರೆಂಟಿಸ್ ಪ್ರಮಾಣ ಪತ್ರವನ್ನು‌ ವಿತರಣೆ ಮಾಡಲಾಗುತ್ತದೆ. ಮತ್ಯಾಕೆ ತಡ, ಸ್ಟೈಫಂಡ್ ಸಿಗುತ್ತೆ ಜೊತೆಗೆ ಪ್ರಮಾಣಪತ್ರ ಕೂಡ ಸಿಗುತ್ತೆ. ಐಟಿಐ, ಡಿಗ್ರಿ ಯಾವುದೇ ಆಗಿದ್ದರೂ ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಹಾಕಿ. ಸೆಪ್ಟೆಂಬರ್ 21ರ ಸಂಜೆ 5ರವರೆಗೂ ಕಾಲಾವಕಾಶವಿದೆ. 

ವಿವಿಧ ಹುದ್ದೆಗಳಿಗೆ UPSC ನೇಮಕಾತಿ, ಅರ್ಜಿ ಹಾಕಿ

click me!