UPSC Recruitment 2022: ಸಹಾಯಕ ಪ್ರಾಧ್ಯಾಪಕ ಸೇರಿ 14 ಹುದ್ದೆಗಳ ನೇಮಕಕ್ಕೆ ಯುಪಿಎಸ್‌ಸಿ ಅರ್ಜಿ ಆಹ್ವಾನ

Published : Jan 23, 2022, 05:33 PM IST
UPSC Recruitment 2022: ಸಹಾಯಕ ಪ್ರಾಧ್ಯಾಪಕ ಸೇರಿ 14 ಹುದ್ದೆಗಳ ನೇಮಕಕ್ಕೆ ಯುಪಿಎಸ್‌ಸಿ ಅರ್ಜಿ ಆಹ್ವಾನ

ಸಾರಾಂಶ

ಕೇಂದ್ರ ಲೋಕಸೇವಾ ಆಯೋಗ   ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ.  ಆನ್‌ಲೈನ್ ಮೂಲಕ  ಫೆಬ್ರವರಿ 10ರೊಳಗೆ ಅರ್ಜಿ ಸಲ್ಲಿಸಬೇಕಿದೆ.

ಬೆಂಗಳೂರು(ಜ.23): ಕೇಂದ್ರ ಲೋಕಸೇವಾ ಆಯೋಗ (Union Public Service Commission- UPSC) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಒಟ್ಟು 14 ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದು. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ  ಫೆಬ್ರವರಿ 10, 2022 ರೊಳಗೆ ಅರ್ಜಿ ಸಲ್ಲಿಸಬೇಕು.  ಹೆಚ್ಚಿನ ಮಾಹಿತಿಗೆ ಇಲಾಖೆಯ ಅಧಿಕೃತ ವೆಬ್‌ತಾಣ upsc.gov.in ಗೆ ಭೇಟಿ ನೀಡಿ.

ಹುದ್ದೆಯ ವಿವರಗಳು:
ಹಿರಿಯ ಆಡಳಿತಾಧಿಕಾರಿ: 8 ಹುದ್ದೆಗಳು
ಸಹಾಯಕ ಉದ್ಯೋಗ ಅಧಿಕಾರಿ: 1 ಹುದ್ದೆ
ಉಪ-ಪ್ರಾದೇಶಿಕ ಉದ್ಯೋಗ ಅಧಿಕಾರಿ/ಅಧಿಕಾರಿ: 1 ಹುದ್ದೆ
ಸಹಾಯಕ ಪ್ರಾಧ್ಯಾಪಕ (ಆಯುರ್ವೇದ): 4 ಹುದ್ದೆಗಳು

ಶೈಕ್ಷಣಿಕ ವಿದ್ಯಾರ್ಹತೆ: ಕೇಂದ್ರ ಲೋಕಸೇವಾ ಆಯೋಗದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆಯಾಯ ಕ್ಷೇತ್ರದಲ್ಲಿ ಪದವಿ , ಸ್ನಾತಕೋತ್ತರ ಪದವಿ ಪೂರೈಸಿರಬೇಕು. ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಸಲ್ಲಿಸುವವರು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ  ಪದವಿ ಅಥವಾ ಸ್ನಾತಕೋತ್ತರ ಪೆವಿ ಪಡೆದಿರಬೇಕು.

BMRCL RECRUITMENT 2022: ನಮ್ಮ ಮೆಟ್ರೋದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ

ಅರ್ಜಿ ಶುಲ್ಕ: ಕೇಂದ್ರ ಲೋಕಸೇವಾ ಆಯೋಗದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ  ಅಭ್ಯರ್ಥಿಗಳು  25 ರೂ ಅರ್ಜಿ ಶುಲ್ಕ ಪಾವತಿಸಬೇಕು. ಶುಲ್ಕವನ್ನು ಎಸ್‌ಬಿಐ ಬ್ಯಾಂಕ್ ಗೆ ಸಂಬಂಧಿಸಿದ ನೆಟ್‌ಬ್ಯಾಂಕಿಂಗ್, ವೀಸಾ, ಕ್ರೆಡಿಟ್ , ಡೆಬಿಟ್ ಕಾರ್ಡ್ ಮೂಲಕ ಪಾವತಿಸಬಹುದು. SC/ST/PwBD/ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕವಿಲ್ಲ.

ವಯೋಮಿತಿ:
ಹಿರಿಯ ಆಡಳಿತಾಧಿಕಾರಿ: 35 ವರ್ಷ
ಸಹಾಯಕ ಉದ್ಯೋಗ ಅಧಿಕಾರಿ:  35 ವರ್ಷ
ಉಪ-ಪ್ರಾದೇಶಿಕ ಉದ್ಯೋಗ ಅಧಿಕಾರಿ/ಅಧಿಕಾರಿ: 30 ವರ್ಷ
ಸಹಾಯಕ ಪ್ರಾಧ್ಯಾಪಕ (ಆಯುರ್ವೇದ):  45-50 ವರ್ಷ

KSOU Mysuru Recruitment 2022: ಫ್ಯಾಕಲ್ಟಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಕರಾಮುವಿ

ಫ್ಯಾಕಲ್ಟಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಕರಾಮುವಿ: 

ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (Karnataka State Open University - KSOU) ಖಾಲಿ ಇರುವ ವಿವಿಧ ಫ್ಯಾಕಲ್ಟಿ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದೆ. ಒಟ್ಟು 32 ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೋರಲಾಗಿದೆ. ಆಸಕ್ತರು ಹೆಚ್ಚಿನ ಮಾಹಿತಿಗೆ  https://ksoumysuru.ac.in/ ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು.

ಶೈಕ್ಷಣಿಕ ವಿದ್ಯಾರ್ಹತೆ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಭೋಧಕರ ಹುದ್ದೆಗೆ ಅರ್ಜಿ  ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್​​ನಿಂದ ಕಡ್ಡಾಯವಾಗಿ ಸ್ನಾತಕೋತ್ತರ ಪದವಿ, ಪಿಎಚ್​ಡಿ ಪೂರ್ಣಗೊಳಿಸಿರಬೇಕು.

ವಯೋಮಿತಿ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಭೋಧಕರ ಹುದ್ದೆಗೆ ಅರ್ಜಿ  ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳ ವಯೋಮಿತಿ 18 ರಿಂದ 45 ವರ್ಷದೊಳಗಿರಬೇಕು.

ಆಯ್ಕೆ ಪ್ರಕ್ರಿಯೆ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಭೋಧಕರ ಹುದ್ದೆಗೆ ಅರ್ಜಿ  ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ಸಂದರ್ಶನ ಮತ್ತು ದಾಖಲಾತಿ ಪರಿಶೀಲನೆ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸಲು ಕೊನೆ ದಿನಾಂಕ 01-02-2022.
ಸಂದರ್ಶನ ನಡೆಯುವ ದಿನಾಂಕ 7-02-2022 ರ ಬೆಳಿಗ್ಗೆ 11-00 ಗಂಟೆಗೆ.

ಅರ್ಜಿಗಳನ್ನು ನಿಗದಿತ ನಮೂನೆಯಲ್ಲಿ aosakala@karnataka.gov.in ಗೆ ಇ-ಮೇಲ್‌ ಮೂಲಕ ಕಳುಹಿಸುವುದು. ಇತರೆ ಹೆಚ್ಚಿನ ಮಾಹಿತಿಗಳಿಗೆ ಸಂಪೂರ್ಣ ಅಧಿಸೂಚನೆಗೆ ವೆಬ್‌ಸೈಟ್‌ www.sakala.kar.nic.in ಗೆ ಭೇಟಿ ನೀಡಬಹುದು.

PREV
Read more Articles on
click me!

Recommended Stories

ಭಾರತದ ಹೊಸ 4 ಕಾರ್ಮಿಕ ಸಂಹಿತೆ ಜಾರಿಗೆ, ಕನಿಷ್ಠ ವೇತನ, 1 ವರ್ಷದದಲ್ಲಿ ಗ್ರಾಚ್ಯುಟಿ, 40 ಕೋಟಿ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ
ಹುಷಾರಿಲ್ಲ ಅಂದ್ರೆ MLA, MP ಕೂಡ ರಜೆ ತೆಗೆದ್ಕೊಳ್ಬೇಕಾ? ಹಿಂಗಿದೆ ರೂಲ್ಸ್